ತಾಂಡಾ ಗ್ರಾಮಕ್ಕೆ ತೆರಳಿ ಮಕ್ಕಳಿಗೆ ಕನ್ನಡ ಪಾಠ ಮಾಡಿದ ಯಾದಗಿರಿ ಜಿಲ್ಲಾಧಿಕಾರಿ ಮೇಡಂ!

ತಾಂಡಾ ಗ್ರಾಮಕ್ಕೆ ತೆರಳಿ ಮಕ್ಕಳಿಗೆ ಕನ್ನಡ ಪಾಠ ಮಾಡಿದ ಯಾದಗಿರಿ ಜಿಲ್ಲಾಧಿಕಾರಿ ಮೇಡಂ!

Ameen Sab
| Updated By: ಸಾಧು ಶ್ರೀನಾಥ್​

Updated on: Aug 10, 2023 | 10:45 AM

Yadgir Deputy Commissioner: ಯಾದಗಿರಿ ಜಿಲ್ಲಾಧಿಕಾರಿ ಸುಶೀಲಾ ಅವರು ಜಿಲ್ಲೆಯ ಹುಣಸಗಿ ತಾಲೂಕಿನ ರೇವುನಾಯ್ಕ್ ತಾಂಡಾಕ್ಕೆ ನಿನ್ನೆ ಬುಧವಾರ ಭೇಟಿ ನೀಡಿದ್ದರು. ರೇವುನಾಯ್ಕ ತಾಂಡಾ ಮಕ್ಕಳಿಗೆ ಪಾಠ ಮಾಡಿ ಗಮನ ಸೆಳೆದರು. ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಪಾಠದ ಜೊತೆಗೆ ತಾಂಡಾ ಮಕ್ಕಳಿಗೆ ಶಬ್ದಗಳ ಪರಿಚಯ ಮಾಡಿಸಿದರು.

ಯಾದಗಿರಿ, ಆಗಸ್ಟ್​ 9: ಜಿಲ್ಲೆಯ ಪ್ರಥಮ ಸರ್ಕಾರಿ ಅಧಿಕಾರಿ ಸ್ವತಃ ತಾಂಡಾ ಗ್ರಾಮವೊಂದಕ್ಕೆ ಬಂದು ಅಲ್ಲಿನ ಮಕ್ಕಳಿಗೆ ಪಾಠ ಮಾಡಿದ್ದಾರೆ. ಮತ್ತು ಆ ಮಕ್ಕಳ (Children) ಜ್ಞಾನವನ್ನು ಮೆಚ್ಚಿ ಕೊಂಡಾಡಿದ್ದಾರೆ. ಹೌದು ಜಿಲ್ಲಾಧಿಕಾರಿ ಯಾದಗಿರಿ ಸ್ವತಃ ಶಿಕ್ಷಕಿಯಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠ (Teaching) ಮಾಡಿದ್ದಾರೆ. ಹೀಗೆ ತಾಂಡಾ ಮಕ್ಕಳಿಗೆ ಪಾಠ ಮಾಡಿದವರು ಬಿ. ಸುಶೀಲಾ, ಯಾದಗಿರಿ ಡಿಸಿ (Yadgir Deputy Commissioner B Susheela).

ಯಾದಗಿರಿ ಜಿಲ್ಲಾಧಿಕಾರಿ ಸುಶೀಲಾ ಅವರು ಜಿಲ್ಲೆಯ ಹುಣಸಗಿ ತಾಲೂಕಿನ ರೇವುನಾಯ್ಕ್ ತಾಂಡಾಕ್ಕೆ ನಿನ್ನೆ ಬುಧವಾರ ಭೇಟಿ ನೀಡಿದ್ದರು. ರೇವುನಾಯ್ಕ ತಾಂಡಾ ಮಕ್ಕಳಿಗೆ ಪಾಠ ಮಾಡಿ ಗಮನ ಸೆಳೆದರು. ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಪಾಠದ ಜೊತೆಗೆ ತಾಂಡಾ ಮಕ್ಕಳಿಗೆ ಶಬ್ದಗಳ ಪರಿಚಯ ಮಾಡಿಸಿದರು. ಆ ವೇಳೆ ಮಕ್ಕಳ ಕನ್ನಡ ಜ್ಞಾನಕ್ಕೆ ಜಿಲ್ಲಾಧಿಕಾರಿ ಫಿದಾ ಆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ