ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್ನಲ್ಲಿ ಜಾತ್ರೆ, ಹಬ್ಬದ ಖರೀದಿಗೆ ಮುಗಿಬಿದ್ದ ಜನ
ಹೂವು, ಹಣ್ಣು ಮತ್ತು ತರಕಾರಿ ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಬೆಂಗಳೂರಲ್ಲಂತೆ ಮೈಸೂರಲ್ಲೂ ಎಲ್ಲ ವಸ್ತುಗಳು ದುಬಾರಿ. ಖರೀದಿಗೆ ಬಂದಿರುವ ಜನ ಚೌಕಾಶಿ ಮಾಡುತ್ತಿರುವುದನ್ನು ನೋಡಬಹುದು. ಗ್ರಾಹಕರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಬಾರ್ಗೇನಿಂಗ್ ಮಾಡುತ್ತಾರೆ ಅಂತ ವ್ಯಾಪಾರಿಗಳಿಗೂ ಗೊತ್ತು. ಅದನ್ನು ಸರಿದೂಗಿಸುವ ಹಾಗೆಯೇ ಅವರು ದರ ಹೇಳಿರುತ್ತಾರೆ!
ಮೈಸೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಕೆ ಆರ್ ಮಾರ್ಕೆಟ್ ನಷ್ಟೇ (KR Market) ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ದೇವರಾಜ ಮಾರ್ಕೆಟ್ (Devaraja Market) ಫೇಮಸ್. ಹಬ್ಬದ ದಿನ ಬಿಡಿ, ಬೇರೆ ದಿನಗಳಲ್ಲೂ ದೇವರಾಜ ಮಾರ್ಕೆಟ್ ಗಿಜಿಗುಡುತ್ತಿರುತ್ತದೆ. ಇವತ್ತು ವರಮಹಾಲಕ್ಷ್ಮಿ ಹಬ್ಬ (Varamahalakshmi Habba). ಬೆಂಗಳೂರಿನ ಕೆಅರ್ ಮಾರ್ಕೆಟ್ ನಲ್ಲಿ ನಿನ್ನೆ ವ್ಯಾಪಾರ ಹೇಗಿತ್ತು ಅಂತ ವಿಡಿಯೋ ತೋರಿಸಿದೆವು. ದೇವರಾಜ ಮಾರ್ಕೆಟ್ ನಲ್ಲಿ ಗುರುವಾರ ವ್ಯಾಪಾರ ಹೇಗಿತ್ತು ಅಂತ ಗೊತ್ತಿಲ್ಲ, ಆದರೆ ಇವತ್ತು ಅಲ್ಲಿ ಜನ ಜಾತ್ರೆ. ನಿನ್ನೆ ಕೆಲಸದ ದಿನವಾಗಿದ್ದರಿಂದ ಪ್ರಾಯಶಃ ಹೆಚ್ಚು ಜನ ಖರೀದಿಗಳಿಗೆ ಬಂದಿರಲಿಕ್ಕಿಲ್ಲ. ಇವತ್ತು ಪೂರ್ತಿ ಮೈಸೂರು ಜನ ದೇವರಾಜ ಮಾರ್ಕೆಟ್ ನಲ್ಲಿ ಘೇರಾಯಿಸಿರುವ ಹಾಗೆ ಭಾಸವಾಗುತ್ತಿದೆ. ಹೂವು, ಹಣ್ಣು ಮತ್ತು ತರಕಾರಿ ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಬೆಂಗಳೂರಲ್ಲಂತೆ ಮೈಸೂರಲ್ಲೂ ಎಲ್ಲ ವಸ್ತುಗಳು ದುಬಾರಿ. ಖರೀದಿಗೆ ಬಂದಿರುವ ಜನ ಚೌಕಾಶಿ ಮಾಡುತ್ತಿರುವುದನ್ನು ನೋಡಬಹುದು. ಗ್ರಾಹಕರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಬಾರ್ಗೇನಿಂಗ್ ಮಾಡುತ್ತಾರೆ ಅಂತ ವ್ಯಾಪಾರಿಗಳಿಗೂ ಗೊತ್ತು. ಅದನ್ನು ಸರಿದೂಗಿಸುವ ಹಾಗೆಯೇ ಅವರು ದರ ಹೇಳಿರುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ