ಕೆಜಿಎಫ್​ನಲ್ಲಿ ತಮಿಳುನಾಡಿಗೆ ಸೇರಿದ ಒಂದೇ ನಂಬರ್​​ನ ಎರಡು ಖಾಸಗಿ ಬಸ್​! ಆರ್​​ಟಿಒ ಅಧಿಕಾರಿಗಳಿಂದ ಜಫ್ತಿ

| Updated By: ಸಾಧು ಶ್ರೀನಾಥ್​

Updated on: Aug 23, 2023 | 10:18 AM

ಕೋಲಾರ: ಕೆಜಿಎಫ್​ನಲ್ಲಿ ಒಂದೇ ರಿಜಿಸ್ಟ್ರೇಷನ್​ ನಂಬರ್​​ನ ಎರಡು ಖಾಸಗಿ ಬಸ್​ಗಳನ್ನು ಆರ್​​ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ​ತಮಿಳುನಾಡಿನ ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್​ಗೆ ಸೇರಿದ ಈ 2 ಬಸ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದೇ ನಂಬರ್ ಅನ್ನು ಎರಡು ಬಸ್​ಗಳಿಗೆ ಹಾಕಿಕೊಂಡು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರುವ ಪ್ರಕರಣ ಇದಾಗಿದೆ.

ಕೋಲಾರ, ಆಗಸ್ಟ್​​ 23: ಕೆಜಿಎಫ್​ನಲ್ಲಿ ಒಂದೇ ರಿಜಿಸ್ಟ್ರೇಷನ್​ ನಂಬರ್​​ನ (registrarion number) ಎರಡು ಖಾಸಗಿ ಬಸ್​ಗಳನ್ನು ಆರ್​​ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ (Confiscation). ​ತಮಿಳುನಾಡಿನ ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್​ಗೆ ಸೇರಿದ ಈ 2 ಬಸ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದೇ ರಿಜಿಸ್ಟ್ರೇಷನ್​ ನಂಬರ್ ಅನ್ನು ಎರಡು ಬಸ್​ಗಳಿಗೆ (bus) ಹಾಕಿಕೊಂಡು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರುವ ಪ್ರಕರಣ ಇದಾಗಿದೆ. ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ಗೆ ಸೇರಿದ ರಸ್ತೆ ಸಾರಿಗೆ ಸಂಸ್ಥೆಯ (ಆರ್.ಟಿ.ಓ) ಅಧಿಕಾರಿಗಳು (KGF, RTO) ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಸ್​​ಗಳ ರಿಜಿಸ್ಟ್ರೇಷನ್​ ನಂಬರ್ ತಮಿಳುನಾಡಿಗೆ ಸೇರಿದ್ದಾಗಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 23, 2023 10:16 AM