ಚಿಕ್ಕೋಡಿ: ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಬಿದ್ದ ಎತ್ತುಗಳಿಗೆ ಚಿತ್ರಹಿಂಸೆ
ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಬಿದ್ದ ಎತ್ತುಗಳಿಗೆ ಚಿತ್ರಹಿಂಸೆ ನೀಡಿದ ಅಮಾನವೀಯ ಕೃತ್ಯ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ನಾಗರಪಂಚಮಿ ನಿಮಿತ್ತ ಹುಕ್ಕೇರಿ ಪಟ್ಟಣದ ಸಿರಿಯಾಳ ಸೃಷ್ಟಿ ಕಮೀಟಿ ಹುಕ್ಕೇರಿ - ಅರ್ಜುನವಾಡ ರಸ್ತೆಯಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.
ಚಿಕ್ಕೋಡಿ: ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಬಿದ್ದ ಎತ್ತುಗಳಿಗೆ (Bull) ಚಿತ್ರಹಿಂಸೆ ನೀಡಿದ ಅಮಾನವೀಯ ಕೃತ್ಯ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkri) ಪಟ್ಟಣದಲ್ಲಿ ನಡೆದಿದೆ. ನಾಗರಪಂಚಮಿ (Nagarpanchami) ನಿಮಿತ್ತ ಹುಕ್ಕೇರಿ ಪಟ್ಟಣದ ಸಿರಿಯಾಳ ಸೃಷ್ಟಿ ಕಮೀಟಿ ಹುಕ್ಕೇರಿ – ಅರ್ಜುನವಾಡ ರಸ್ತೆಯಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಓಟದ ಸ್ಪರ್ಧೆಯಲ್ಲಿ ಓಡಲಾಗದೇ ರಸ್ತೆಯಲ್ಲಿ ಎತ್ತುಗಳು ಬಿದ್ದಿವೆ. ಬಿದ್ದ ಎತ್ತುಗಳ ಆರೈಕೆ ಮಾಡದೇ ಮೇಲೆ ಎಬ್ಬಿಸಲು ಹೊಡೆದು ಚಿತ್ರಹಿಂಸೆ ನೀಡಲಾಗಿದೆ. ಬಿದ್ದ ಎತ್ತಿಗೆ ಚಿತ್ರಹಿಂಸೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಗರಪಂಚಮಿ ಆಚರಣೆ ಹೆಸರಲ್ಲಿ ಮೂಕಪ್ರಾಣಿಗಳಿಗೆ ಚಿತ್ರಹಿಂಸೆ ಕೊಡುವುದು ಅದೆಷ್ಟು ಸರಿ. ನಂದಿ ಎಂದು ಪೂಜಿಸುವ ಎತ್ತುಗಳಿಗೆ ಇದೆಂತಹ ಘನಘೋರ ಶಿಕ್ಷೆ?