Tomato Price: ಗಗನಕ್ಕೇರಿದ್ದ ಟೊಮೆಟೊ ದರ ದಿಢೀರ್ ಪಾತಾಳಕ್ಕೆ ಕುಸಿತ, ಈಗ ಎಷ್ಟಿದೆ ಬೆಲೆ?
ಕಳೆದೊಂದು ತಿಂಗಳಲ್ಲಿ 2700 ರೂಪಾಯಿ ವರೆಗೆ ಏರಿಕೆ ಕಂಡಿದ್ದ ಟೊಮೆಟೊ ಬೆಲೆ ಈಗ ಕುಸಿದಿದೆ. ಉತ್ತರ ಭಾರತ ಹಾಗೂ ಹೊರ ರಾಜ್ಯಗಳಿಂದ ಟೊಮೆಟೊ ಬೇಡಿಕೆ ಕಡಿಮೆಯಾಗಿದೆ. ಸ್ಥಳೀಯವಾಗಿ ಎಪಿಎಂಸಿ ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಹೆಚ್ಚಾದ ಹಿನ್ನಲೆ ಟೊಮೆಟೊ ಬೆಲೆ ಕುಸಿದಿದೆ. ಒಂದು ಕೆಜಿ ಟೊಮೆಟೊ 15- 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಕೋಲಾರ, ಆ.21: ಒಂದು ತಿಂಗಳ ಹಿಂದೆ ಬೆಲೆಯನ್ನು ಗಗನಕ್ಕೇರಿ ರೈತರ ಬಾಳು ಹಸನಾಗಿಸಿದ್ದ ಟೊಮೆಟೊ ಸದ್ಯ ಪಾತಾಳಕ್ಕೆ ಕುಸಿದಿದೆ. ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಬೆಲೆ ಮತ್ತಷ್ಟು ಕುಸಿದಿದೆ. ಹದಿನೈದು ಕೆಜಿ ಬಾಕ್ಸ್ ಟೊಮೆಟೊ ಕೇವಲ 200- 400 ರೂಪಾಯಿಗೆ ಹರಾಜಾಗುತ್ತಿದೆ. ಒಂದು ಕೆಜಿ ಟೊಮೆಟೊ 15- 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಕಳೆದೊಂದು ತಿಂಗಳಲ್ಲಿ 2700 ರೂಪಾಯಿ ವರೆಗೆ ಏರಿಕೆ ಕಂಡಿದ್ದ ಟೊಮೆಟೊ ಬೆಲೆ ಈಗ ಕುಸಿದಿದೆ. ಉತ್ತರ ಭಾರತ ಹಾಗೂ ಹೊರ ರಾಜ್ಯಗಳಿಂದ ಟೊಮೆಟೊ ಬೇಡಿಕೆ ಕಡಿಮೆಯಾಗಿದೆ. ಸ್ಥಳೀಯವಾಗಿ ಎಪಿಎಂಸಿ ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಹೆಚ್ಚಾದ ಹಿನ್ನಲೆ ಟೊಮೆಟೊ ಬೆಲೆ ಕುಸಿದಿದೆ. ಮೂರು ತಿಂಗಳಿಂದ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದ, ನೂರಾರು ಜನ ರೈತರ ಅದೃಷ್ಟವನ್ನೇ ಬದಲಿಸಿದ್ದ ಟೊಮೆಟೊ ಬೆಲೆ ಕುಸಿತದಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.