ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತಗಳನ್ನು ಒಪ್ಪಿ ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಬರಲಿಚ್ಛಿಸುವವರಿಗೆ ಸ್ವಾಗತವಿದೆ: ಡಿಕೆ ಶಿವಕುಮಾರ್, ಡಿಸಿಎಂ
ಬಿಜೆಪಿಗೆ ಯಾವತ್ತೂ ನಮ್ಮಂತೆ ಗ್ಯಾರಂಟಿಗಳನ್ನು ಈಡೇರಿಸುವುದು ಸಾಧ್ಯವಾಗುತ್ತಿರಲಿಲ್ಲ ಮತ್ತು ಜೆಡಿಎಸ್ ಅವುಗಳ ಬಗ್ಗೆ ಯೋಚನೆ ಮಾಡುವುದೂ ಸಾಧ್ಯವಿರಲಿಲ್ಲ. ನಮ್ಮ ಸರ್ಕಾರ ಒಂದೊಂದಾಗಿ ಜನರುಗೆ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುತ್ತಿದ್ದಂತೆಯೇ ಜನರ ನಂಬಿಕೆ ಬಲಗೊಂಡಿದೆ ಎಂದು ಶಿವಕುಮಾರ್ ಹೇಳಿದರು.
ಮೈಸೂರು: ಕಾಂಗ್ರೆಸ್ ಆಪರೇಷನ್ ಹಸ್ತ ಮಾಡುತ್ತಿಲ್ಲ ಅದನ್ನು ಮಾಡುವ ಅವಶ್ಯಕತೆ ಸರ್ಕಾರಕ್ಕಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು (Ideology) ಒಪ್ಪಿಕೊಂಡು, ಯಾವುದೇ ಷರತ್ತುಗಳಿಲ್ಲದೆ (unconditionally) ಯಾರೇ ಪಕ್ಷಕ್ಕೆ ಬಂದರೂ ಅವರಿಗೆ ಸ್ವಾಗತವಿದೆ ಎಂದು ಹೇಳಿ ಪ್ರಶ್ನೆ ಕೇಳಿದ ಪತ್ರಕತರ್ರಿಗೂ ಕಾಂಗ್ರೆಸ್ ಸೇರುವಂತೆ ಅಹ್ವಾನಿಸಿದರು! ಕಾಂಗ್ರೆಸ್ ಸರ್ಕಾರದ ಮೇಲೆ ಜನರಿಗೆ ಮತ್ತು ಬೇರೆ ಬೇರೆ ಪಕ್ಷಗಳ ಕಾರ್ಯಕರ್ತರಿಗೆ ನಂಬಿಕೆ ವಿಶ್ವಾಸ ಹೆಚ್ಚುತ್ತಿದೆ. ಬಿಜೆಪಿಗೆ ಯಾವತ್ತೂ ನಮ್ಮಂತೆ ಗ್ಯಾರಂಟಿಗಳನ್ನು ಈಡೇರಿಸುವುದು ಸಾಧ್ಯವಾಗುತ್ತಿರಲಿಲ್ಲ ಮತ್ತು ಜೆಡಿಎಸ್ ಅವುಗಳ ಬಗ್ಗೆ ಯೋಚನೆ ಮಾಡುವುದೂ ಸಾಧ್ಯವಿರಲಿಲ್ಲ. ನಮ್ಮ ಸರ್ಕಾರ ಒಂದೊಂದಾಗಿ ಜನರುಗೆ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುತ್ತಿದ್ದಂತೆಯೇ ಜನರ ನಂಬಿಕೆ ಬಲಗೊಂಡಿದೆ ಎಂದು ಶಿವಕುಮಾರ್ ಹೇಳಿದರು. ಶಿವಕುಮಾರ್ ಅವರೊಂದಿಗೆ ಸಚಿವರಾದ ಎನ್ ಚಲುವರಾಯಸ್ವಾಮಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಇದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ