ರಾಯಚೂರು: ವರ್ಗಾವಣೆಗೊಂಡ ನೆಚ್ಚಿನ ಶಿಕ್ಷಕನಿಗೆ ಪುನೀತ್ ರಾಜ್ ಕುಮಾರ್ ಪೋಟೋ ನೀಡಿ ಅಳುತ್ತಾ ವಿದಾಯ ಹೇಳಿದ ಸಾಲಗುಂದದ ಸರ್ಕಾರೀ ಶಾಲಾಮಕ್ಕಳು

|

Updated on: Aug 17, 2023 | 1:24 PM

ಒಬ್ಬ ವಿಶೇಷ ಚೇತನ ವಿದ್ಯಾರ್ಥಿ ಒಂದೇ ಸಮ ಅಳುತ್ತಿದ್ದಾನೆ. ಆದರೆ, ಸರ್ಕಾರೀ ಆದೇಶದ ಅನ್ವಯ ಸುರೇಶ್ ವರ್ಗವಣೆ ಆಗಿರುವ ಸ್ಥಳಕ್ಕೆ ತೆರಳಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕು. ಸರ್ಕಾರೀ ಶಿಕ್ಷಕರು ಮತ್ತು ನೌಕರರ ಬದುಕೇ ಹಾಗೆ. ಒಂದೂರಿಂದ ಮತ್ತೊಂದೂರಿಗೆ ಅಲೆದಾಡುವುದು.

ರಾಯಚೂರು: ಶಿಕ್ಷಕರು ಮತ್ತು ಮಕ್ಕಳ ನಡುವಿನ ನಿಷ್ಕಲ್ಮಶ, ಅವಿನಾಭಾವ ಸಂಬಂಧದ ಬಗ್ಗೆ ನಾವು ಇಂಥ ವಿಡಿಯೋ ಸಿಕ್ಕಾಗಲೆಲ್ಲ ಚರ್ಚಿಸುತ್ತಿರುತ್ತೇವೆ. ಇದು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಾಲಗುಂದ ಹಿರಿಯ ಪ್ರಾಥಮಿಕ (Salagunda Primary School) ಶಾಲೆಯ ಆವರಣದಲ್ಲಿ ಕಂಡ ದೃಶ್ಯ. ಕಳೆದ 14 ವರ್ಷಗಳಿಂದ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ (Suresh) ಹೆಸರಿನ ಶಿಕ್ಷಕರಿಗೆ ಬೇರೊಂದು ಊರಿನ ಶಾಲೆಗೆ ವರ್ಗಾವಣೆಯಾಗಿದೆ (transfer). ಹೆಚ್ಚು ಕಡಿಮೆ ಒಂದೂವರೆ ದಶಕಗಳಿಂದ ಸುರೇಶ್ ಇಲ್ಲಿ ಕೆಲಸ ಮಾಡುತ್ತಿದ್ದರಿಂದ ಮಕ್ಕಳು ಅವರನ್ನು ಬಹಳ ಹಚ್ಚಿಕೊಂಡುಬಿಟ್ಟಿವೆ ಮತ್ತು ಅವರಿಗೆ ವಿದಾಯ ಹೇಳುವಾಗ ಭಾವುಕವಾಗಿ ಬಿಟ್ಟಿವೆ. ಕೆಲ ಮಕ್ಕಳು ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಿರುದನ್ನು ವಿಡಿಯೋದಲ್ಲಿ ನೋಡಬಹುದು. ಒಬ್ಬ ವಿಶೇಷ ಚೇತನ ವಿದ್ಯಾರ್ಥಿ ಒಂದೇ ಸಮ ಅಳುತ್ತಿದ್ದಾನೆ. ಆದರೆ, ಸರ್ಕಾರೀ ಆದೇಶದ ಅನ್ವಯ ಸುರೇಶ್ ವರ್ಗವಣೆ ಆಗಿರುವ ಸ್ಥಳಕ್ಕೆ ತೆರಳಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕು. ಸರ್ಕಾರೀ ಶಿಕ್ಷಕರು ಮತ್ತು ನೌಕರರ ಬದುಕೇ ಹಾಗೆ. ಒಂದೂರಿಂದ ಮತ್ತೊಂದೂರಿಗೆ ಅಲೆದಾಡುವುದು. ಸಾಲಗುಂದದ ಮಕ್ಕಳು ಪುನೀತ್ ರಾಜ್ ಕುಮಾರ್ ಫೋಟೋವೊಂದನ್ನು ತಮ್ಮ ನೆಚ್ಚಿನ ಶಿಕ್ಷಕನಿಗೆ ನೀಡಿ ವಿದಾಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ