ಎಸ್ ಟಿ ಸೋಮಶೇಖರ್ ವೈಯಕ್ತಿಕ ಕಾರಣಗಳಿಗೆ ಸಿದ್ದರಾಮಯ್ಯರನ್ನು ಭೇಟಿಯಾಗಿರುತ್ತಾರೆ, ಆಪರೇಶನ್ ಹಸ್ತದ ಅವಶ್ಯಕತೆ ನಮಗಿಲ್ಲ: ತನ್ವೀರ್ ಸೇಠ್
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ನರಸಿಂಹರಾಜ ಶಾಸಕ ತನ್ವೀರ್ ಸೇಠ್ ಆಪರೇಶನ್ ಹಸ್ತ ನಡೆಸುವ ಅಗತ್ಯವೇ ಕಾಂಗ್ರೆಸ್ ಪಕ್ಷಕ್ಕಿಲ್ಲ, ಜನ ಬದಲಾವಣೆ ಬಯಸಿ 135 ಸ್ಥಾನಗಳನ್ನು ಪಕ್ಷಕ್ಕೆ ನೀಡಿ ಅಧಿಕಾರಕ್ಕೆ ತಂದಿದ್ದಾರೆ, ಬೇರೆ ಪಕ್ಷಗಳ ಶಾಸಕರ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಮೈಸೂರು: ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಆಪರೇಷನ್ ಹಸ್ತ ಕಾರ್ಯಗತಗೊಳಿಸಲು ಉತ್ಸುಹರಾಗಿದ್ದರೆ ಕೆಲ ಶಾಸಕರಿಗೆ ಅದು ಇಷ್ಟವಾಗುತ್ತಿಲ್ಲ. ಶಿರಸಿ ಶಾಸ ಭೀಮಣ್ಣ ನಾಯ್ಕ್ (Bhimanna Naik) ಅದನ್ನು ವಿರೋಧಿಸಿದ್ದು ನಾವು ವರದಿ ಮಾಡಿದ್ದೇವೆ. ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ನರಸಿಂಹರಾಜ ಶಾಸಕ ತನ್ವೀರ್ ಸೇಠ್ (Tanveer Sait), ಆಪರೇಶನ್ ಹಸ್ತ ನಡೆಸುವ ಅಗತ್ಯವೇ ಕಾಂಗ್ರೆಸ್ ಪಕ್ಷಕ್ಕಿಲ್ಲ, ಜನ ಬದಲಾವಣೆ ಬಯಸಿ 135 ಸ್ಥಾನಗಳನ್ನು ಪಕ್ಷಕ್ಕೆ ನೀಡಿ ಅಧಿಕಾರಕ್ಕೆ ತಂದಿದ್ದಾರೆ, ಬೇರೆ ಪಕ್ಷಗಳ ಶಾಸಕರ ಅವಶ್ಯಕತೆ ಇಲ್ಲ ಎಂದು ಹೇಳಿದರು. ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ವೈಯಕ್ತಿಕ ಕಾರಣಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿರುತ್ತಾರೆ, ಅವರು ಕಾಂಗ್ರೆಸ್ ಸೇರತ್ತಾರೆನ್ನುವುದು ಕೇವಲ ಊಹಾಪೋಹ ಮಾತ್ರ ಎಂದು ಹೇಳಿದ ಅವರು ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ರಾಜಕೀಯದಿಂದ ದೂರ ಸರಿಯುವ ನಿರ್ಧಾರ ಮಾಡಿದ್ದು ಸತ್ಯ, ಆದರೆ ಪಕ್ಷ ಒತ್ತಾಯದಿಂದ ಟಿಕೆಟ್ ನೀಡಿದ್ದರಿಂದ ಪುನಃ ಶಾಸಕನಾಗಿ ಆಯ್ಕೆಯಾಗಿರುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ