ಶಿವಮೊಗ್ಗ ಉಡುಪಿ ಗಡಿಭಾಗ: ಆಗುಂಬೆ ಘಾಟಿಯ ಸೂರ್ಯಸ್ತಮಾನ ಸ್ಥಳದಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಪ್ರವಾಸಿಗರು!
ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಆಗುಂಬೆ ಪರಿಸರ ಪ್ರೇಮಿಗಳಿಂದ ಹಿಡಿದು ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣ ಎಂದರೆ ತಪ್ಪಾಗಲಾರದು. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ನಿಷೇಧ ಇರುವ ಹಿನ್ನೆಲೆಯಲ್ಲಿ ಸದ್ಯ ಇಲ್ಲಿಗೆ ಸಾಕಷ್ಟು ಮಂದಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ಹೆಸರುವಾಸಿಯಾಗಿರುವ ಆಗುಂಬೆ ಘಾಟಿಯಲ್ಲಿ ಈಗ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಬಹುತೇಕ ಬೀಚ್, ಫಾಲ್ಸ್ ಗಳಿಗೆ ಜಿಲ್ಲಾಡಳಿತ ನಿಷೇಧ ಹೇರಿರುವ ಬೆನ್ನೆಲೆ ಪ್ರವಾಸಿಗರು ಈಗ ಆಗುಂಬೆಗೆ ವಿಸಿಟ್ ನೀಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು ಮಳೆಗಾಲದಲ್ಲಿ ಬಹಳಷ್ಟು ಆಕರ್ಷಣೀಯವಾಗಿ ಕಂಡರೂ ಕೂಡ ಅಷ್ಟೇ ಅಪಾಯಕಾರಿ. ಹೀಗಾಗಿ ಜಿಲ್ಲೆಯ ಮಲ್ಪೆ ಬೀಚ್, ಪಡುಬಿದ್ರಿ ಬೀಚ್, ಕಾಪು ಬೀಚ್ ಹಾಗೂ ಮರವಂತೆ ಬೀಚ್ ಗಳು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಕೊಲ್ಲೂರು ಸಮೀಪದ ಅರಿಶಿಣ ಗುಂಡಿ ಜಲಪಾತ ಪ್ರದೇಶದಲ್ಲಿ ಭದ್ರಾವತಿ ಮೂಲದ ಯುವಕನೋರ್ವ ರೀಲ್ಸ್ ಮಾಡುವ ಸಂದರ್ಭ ನಿರುಪಾಲಾದ ಘಟನೆಯ ಬಳಿಕ ಜಿಲ್ಲೆಯ ಬಹುತೇಕ ಫಾಲ್ಸ್ ಗಳಿಗೂ ಕೂಡ ಜಿಲ್ಲಾಡಳಿತ ನಿಷೇಧ ಹೇರಿದೆ. ಹೀಗಾಗಿ ಉಡುಪಿ ಜಿಲ್ಲೆಗೆ ಆಗಮಿಸುವ ಬಹುತೇಕ ಪ್ರವಾಸಿಗರು ದೈವ ದೇಗುಲಗಳ ದರ್ಶನದಲ್ಲಿ ನಿರತರಾಗಿದ್ದಾರೆ ಇನ್ನಷ್ಟು ಮಂದಿ, ಶಿವಮೊಗ್ಗ ಉಡುಪಿ ಗಡಿಭಾಗದಲ್ಲಿರುವ (Shimoga Udupi border) ಆಗುಂಬೆ ಘಾಟಿಯ (Agumbe Ghat) ಸೂರ್ಯಸ್ತ ಮಾನ ಸ್ಥಳದಲ್ಲಿ (sunset) ಎಂಜಾಯ್ ಮಾಡುತ್ತಿದ್ದಾರೆ.
ಹೌದು ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಆಗುಂಬೆ ಪರಿಸರ ಪ್ರೇಮಿಗಳಿಂದ ಹಿಡಿದು ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣ ಎಂದರೆ ತಪ್ಪಾಗಲಾರದು. ಪಶ್ಚಿಮ ಘಟ್ಟದಲ್ಲಿ ಗುರುತಿಸಿಕೊಳ್ಳುವ ಆಗುಂಬೆ ಕರ್ನಾಟಕದ ಚಿರಾಪುಂಜಿ ಎಂದೇ ಹೆಸರುವಾಸಿ. ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಆಗುಂಬೆಗೆ ಈ ಹೆಸರು ಬಂದಿದೆ. ಯಾವಾಗಲೂ ಹಸಿರು ತೋರಣದಂತೆ ಕಂಡುಬರುವ ಆಗುಂಬೆ ಮಳೆಗಾಲದಲ್ಲಂತೂ ಇನ್ನೂ ದಟ್ಟ ಹಸಿರುನಲ್ಲಿ ಕಂಗೊಳಿಸುತ್ತಿರುತ್ತದೆ. ಹೀಗಾಗಿ ಸಹಜವಾಗಿ ಪ್ರವಾಸಿಗರಿಗೆ ಆಗುಂಬೆ ಎಂದರೆ ಒಂದು ರೀತಿ ಅಚ್ಚುಮೆಚ್ಚಿನ ಸ್ಥಳ. ಅದರಲ್ಲೂ ಆಗುಂಬೆಯ ಸೂರ್ಯಾಸ್ತ ಮಾನ ವೀಕ್ಷಣಾ ಸ್ಥಳ ಸದ್ಯ ಪ್ರವಾಸಿಗರ ಹಾಟ್ ಫೇವರೆಟ್ ಸ್ಥಳವಾಗಿ ಗುರುತಿಸಿಕೊಂಡಿದೆ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ನಿಷೇಧ ಇರುವ ಹಿನ್ನೆಲೆಯಲ್ಲಿ ಸದ್ಯ ಇಲ್ಲಿಗೆ ಸಾಕಷ್ಟು ಮಂದಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ