ಉಡುಪಿಯಲ್ಲಿ ಧ್ವಜಾರೋಹಣ ಮಾಡಿದ ನಂತರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭಾಷಣ ಓದುವುದರಲ್ಲಿ ಮಗ್ನರಾಗಿದ್ದರೆ, ಬಳಲಿದ್ದ ಶಾಲಾಮಕ್ಕಳು ಕುಸಿದು ಬೀಳುತ್ತಿದ್ದರು!

|

Updated on: Aug 15, 2023 | 2:59 PM

Independence Day 2023: ಮಕ್ಕಳ ಶಿಕ್ಷಕಿಯರು ನೀರು ಕುಡಿಸಿ ಪುನಃ ಎದ್ದು ನಿಲ್ಲುವಂತೆ ಮಾಡುತ್ತಿದ್ದಾರೆ. ಬಿಸಿಲಿನ ಝಳದಿಂದಲೂ ವಿದ್ಯಾರ್ಥಿನಿಯರು ಹೈರಾಣಾಗಿರುತ್ತಾರೆ. ವೇದಿಕೆ ಮೇಲೆ ನಿಂತು ಭಾಷಣ ಓದುವುದರಲ್ಲಿ ಮಗ್ನರಾಗಿದ್ದ ಸಚಿವೆ ಲಕ್ಷ್ಮಿ ಅವರಿಗೆ ಮಕ್ಕಳ ಸ್ಥಿತಿ ಕಂಡಿರಲಿಕ್ಕಿಲ್ಲ

ಉಡುಪಿ: ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಉಡುಪಿ ನಗರದಲ್ಲಿ 77ನೇ ಸ್ವಾತಂತ್ರ್ಯೋತ್ಸವದ (Independence Day celebration) ಅಂಗವಾಗಿ ಧ್ವಜಾರೋಹಣ ಮಾಡಿ (flag hoist) ಭಾಷಣ ಮಾಡಿದರು. ಅವರ ಭಾಷಣ ಸುದೀರ್ಘವಾಗಿತ್ತೋ ಅಥವಾ ಮೈದಾನದಲ್ಲಿ ನೆರೆದಿದ್ದ ಶಾಲಾ ಮಕ್ಕಳು ಬೆಳಗ್ಗೆ ಮನೆಯಲ್ಲಿ ಏನನ್ನು ತಿನ್ನದೆ ಬಂದಿದ್ದವೋ ಗೊತ್ತಾಗುತ್ತಿಲ್ಲ ಮಾರಾಯ್ರೇ. ಅದರೆ ಎನ್ ಸಿ ಸಿ ಮತ್ತು ಶಾಲಾ ಸಮವಸ್ತ್ರದಲ್ಲಿದ್ದ ಕೆಲ ಮಕ್ಕಳು ಬಳಲಿಕೆಯಿಂದ, ನೀರಿನ ದಾಹ ಇಲ್ಲವೇ ಹೊಟ್ಟೆ ಹಸಿದು ಕುಸಿದ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮಕ್ಕಳ ಶಿಕ್ಷಕಿಯರು ನೀರು ಕುಡಿಸಿ ಪುನಃ ಎದ್ದು ನಿಲ್ಲುವಂತೆ ಮಾಡುತ್ತಿದ್ದಾರೆ. ಬಿಸಿಲಿನ ಝಳದಿಂದಲೂ ವಿದ್ಯಾರ್ಥಿನಿಯರು ಹೈರಾಣಾಗಿರುತ್ತಾರೆ. ವೇದಿಕೆ ಮೇಲೆ ನಿಂತು ಭಾಷಣ ಓದುವುದರಲ್ಲಿ ಮಗ್ನರಾಗಿದ್ದ ಸಚಿವೆ ಲಕ್ಷ್ಮಿ ಅವರಿಗೆ ಮಕ್ಕಳ ಸ್ಥಿತಿ ಕಂಡಿರಲಿಕ್ಕಿಲ್ಲ. ಅವರು ತಮ್ಮ ಪಾಡಿಗೆ ತಾವು ಭಾಷಣ ಓದುತ್ತಲೇ ಇದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ