ಬೆಳಗಾವಿ: ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಶೀತಲ ಸಮರಕ್ಕೆ ಕಾರಣವೇನು ಗೊತ್ತಾ? ಇದನ್ನು ಓದಿ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ತಮ್ಮ ಮಗಳು ಪ್ರಿಯಾಂಕಾ ಜಾರಕಿಹೊಳಿ ಮತ್ತು ಲಕ್ಷ್ಮಿ ತಮ್ಮ ಮಗ ಮೃಣಾಲ್ ಹೆಬ್ಬಾಳ್ಕರ್ ಗೆ ಟಿಕೆಟ್ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸತೀಶ್ ಅವರು ಪ್ರಕಾಶ್ ಹುಕ್ಕೇರಿಯ ಹೆಸರು ಕೂಡ ತೇಲಿಬಿಡುತ್ತಿದರುವುದು ಒಂದು ಪಕ್ಷ ಮಗಳಿಗೆ ಟಿಕೆಟ್ ಸಿಗದೇ ಹೋದರೆ ಆಗುವ ಮುಖಭಂಗವನ್ನು ತಪ್ಪಿಸಿಕೊಳ್ಳಲು ಇರಬಹುದು!
ಬೆಳಗಾವಿ: ಲೋಕಸಭಾ ಚುನಾವಣೆ-2024 (Lok Sabha Polls-2024) ಕೇವಲ ಎಂಟ್ಹತ್ತು ತಿಂಗಳು ಮಾತ್ರ ಉಳಿದಿದೆ. ಹಾಗಾಗೇ, ರಾಜ್ಯದಲ್ಲಿ ಸಂಭವನೀಯ ಅಭ್ಯರ್ಥಿಗಳು ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನಡುವೆ ಕೆಲ ದಿನಗಳಿಂದ ಶೀತರ ಸಮರ ನಡೆಯುತ್ತಿದೆ ಅಂತ ವರದಿಯಾಗುತ್ತಲೇ ಇತ್ತು ಆದರೆ ಕಾರಣವೇನು ಅಂತ ಗೊತ್ತಾಗಿರಲಿಲ್ಲ. ಅದೀಗ ಬಯಲಾಗಿದೆ. ಅಸಲು ಸಂಗತಿಯೇನೆಂದರೆ ಅವರಿಬ್ಬರೂ ತಮ್ಮ ವಂಶದ ಕುಡಿಗಳಿಗೆ ರಾಜಕೀಯದ ಅರಂಗೇಟ್ರಂ ಕೊಡಿಸುವ ಹುನ್ನಾರ ನಡೆಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ತಮ್ಮ ಮಗಳು ಪ್ರಿಯಾಂಕಾ ಜಾರಕಿಹೊಳಿ ಮತ್ತು ಲಕ್ಷ್ಮಿ ತಮ್ಮ ಮಗ ಮೃಣಾಲ್ ಹೆಬ್ಬಾಳ್ಕರ್ ಗೆ ಟಿಕೆಟ್ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸತೀಶ್ ಅವರು ಪ್ರಕಾಶ್ ಹುಕ್ಕೇರಿಯ ಹೆಸರು ಕೂಡ ತೇಲಿಬಿಡುತ್ತಿದರುವುದು ಒಂದು ಪಕ್ಷ ಮಗಳಿಗೆ ಟಿಕೆಟ್ ಸಿಗದೇ ಹೋದರೆ ಆಗುವ ಮುಖಭಂಗವನ್ನು ತಪ್ಪಿಸಿಕೊಳ್ಳಲು ಇರಬಹುದು! ಕೋಲ್ಡ್ ವಾರ್ ಹಿಂದಿನ ಕತೆ ಇದು ಸ್ವಾಮಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ