ಸೋಮಶೇಖರ್ ಕಾಂಗ್ರೆಸ್ ಸೇರುತ್ತಾರೆಯೇ ಇಲ್ಲ ಬಿಜೆಪಿಯಲ್ಲೇ ಉಳಿಯುತ್ತಾರೆಯೇ ಅಂತ ಕೇಳಿದರೆ ಆರ್ ಅಶೋಕರಲ್ಲಿ ಸ್ಪಷ್ಟ ಉತ್ತರವಿಲ್ಲ!
ಸೋಮಶೇಖರ್ ಬಗ್ಗೆ ತನಗೆ ಚೆನ್ನಾಗಿ ಗೊತ್ತು, 2019 ರಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದಾಗ ಅವರನ್ನು ತಾನೇ ಪಕ್ಷಕ್ಕೆ ಕರೆತಂದಿದ್ದು, ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ 10 ಶಾಸಕರನ್ನು ಬಿಜೆಪಿಗೆ ತಂದಿದ್ದರು ಮತ್ತು ತಾನು 5 ಶಾಸಕರನ್ನು ಕರೆತಂದಿದ್ದೆ ಅವರಲ್ಲಿ ಸೋಮಶೇಖರ್ ಒಬ್ಬರು ಎಂದು ಅಶೋಕ ಹೇಳಿದರು.
ಬೆಂಗಳೂರು: ಯಶವಂತಪುರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಯೇ? ಈ ವದಂತಿಯ ಬಗ್ಗೆ ಬಿಜೆಪಿ ನಾಯಕರು ಸಹ ಗೊಂದಲದಲ್ಲಿದ್ದಾರೆ, ವಿಷಯದ ಬಗ್ಗೆ ಅವರಲ್ಲಿ ಸ್ಪಷ್ಟತೆ ಇಲ್ಲ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಹಿರಿಯ ಬಿಜೆಪಿ ನಾಯಕ ಮತ್ತು ಪದ್ಮನಾಭನಗರ ಶಾಸಕ ಆರ್ ಅಶೋಕ (R Ashoka), ಸೋಮಶೇಖರ್ ಜೊತೆ ಕೇವಲ ಹತ್ತು ನಿಮಿಷಗಳ ಹಿಂದಷ್ಟೇ ಮಾತಾಡಿದ್ದು ತಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು. ಸೋಮಶೇಖರ್ ಬಗ್ಗೆ ತನಗೆ ಚೆನ್ನಾಗಿ ಗೊತ್ತು, 2019 ರಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದಾಗ ಅವರನ್ನು ತಾನೇ ಪಕ್ಷಕ್ಕೆ ಕರೆತಂದಿದ್ದು, ಬಿಎಸ್ ಯಡಿಯೂರಪ್ಪ (BS Yediyurappa) ಕಾಂಂಗ್ರೆಸ್ 10 ಶಾಸಕರನ್ನು ಬಿಜೆಪಿಗೆ ತಂದಿದ್ದರು ಮತ್ತು ತಾನು 5 ಶಾಸಕರನ್ನು ಕರೆತಂದಿದ್ದೆ ಅವರಲ್ಲಿ ಸೋಮಶೇಖರ್ ಒಬ್ಬರು ಎಂದು ಅಶೋಕ ಹೇಳಿದರು. ಅದಲ್ಲದೆ, ತಾನು ಉತ್ತರಹಳ್ಳಿ ಕ್ಷೇತ್ರದಿಂದ 3 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ಕಾರಣ ಸೋಮಶೇಖರ್ ಅವರೊಂದಿಗೆ ಉತ್ತಮ ಒಡನಾಟವಿತ್ತು ಎಂದು ಅಶೋಕ ಹೇಳಿದರು. ಆದರೆ ಅವರು ಬಿಜೆಪಿಯಲ್ಲಿ ಉಳೀಯತ್ತಾರೆಯೇ ಇಲ್ಲವೇ ಎಂಬ ಪ್ರಶ್ನೆಗೆ ಅವರಿಂದ ಸಮರ್ಪಕ ಉತ್ತರ ಸಿಗಲಿಲ್ಲ, ಕಾದು ನೋಡೋಣ, ನೋಡೋಣ ಅಂತಷ್ಟೇ ಅವರು ಹಲವಾರು ಸಲ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ