ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ ಪ್ರಮೋದ್ ಮಧ್ವರಾಜ್
ಟಿಕೆಟ್ ನೀಡಿದರೆ ಪ್ರಾಮಾಣಿಕವಾಗಿ ಕೆಲಸದ ಮಾಡುತ್ತೇನೆ, ನೀಡದಿದ್ದರೂ ಅದೇ ಪ್ರಾಮಾಣಿಕತೆ ತನ್ನ ಕೆಲಸದಲ್ಲಿರುತ್ತದೆ ಎಂದು ಪ್ರಮೋದ್ ಹೇಳುತ್ತಾರೆ.
ಉಡುಪಿ: ಸಿದ್ದರಾಮಯ್ಯ (Siddaramaiah) ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ (Pramod Madhwaraj) ಕೇವಲ ಒಂದು ವರ್ಷ ಹಿಂದೆಯಷ್ಟೇ ಕಾಂಗ್ರೆಸ್ ಸೇರಿ ಬಿಜೆಪಿ ಸೇರಿದ್ದರು. ಅವರರು ಹಿರಿಯ ಕಾಂಗ್ರೆಸ್ ನಾಯಕಿ ಮನೋರಮ ಮಧ್ವರಾಜ್ ಅವರ ಪುತ್ರ. ಇಂದು ಉಡುಪಿಯಲ್ಲಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಾತಾಡಿದ 2024 ಲೋಕ ಸಭಾ ಚುನಾವಣೆಯಲ್ಲಿ ತಾನು ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವುದಾಗಿ ಹೇಳಿದರು. ನಿಮಗೆ ಗೊತ್ತರುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಈ ಕ್ಷೇತ್ರವನ್ನು 2014 ರಿಂದ ಪ್ರತಿನಿಧಿಸುತ್ತಿದ್ದಾರೆ. 2024ರಲ್ಲೂ ಅವರನ್ನೇ ಪ್ರಬಲ ಅಭ್ಯರ್ಥಿಯೆಂದು ಬಿಜೆಪಿ ವರಿಷ್ಠರು ಪರಿಗಣಿಸೋದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಪ್ರಮೋದ್ ಅವರ ಆಸೆ ಈಡೇರಬಹುದೇ ಅನ್ನೋದು ಕಾದು ನೋಡಬೇಕಿರುವ ಸಂಗತಿ. ಟಿಕೆಟ್ ನೀಡಿದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ, ನೀಡದಿದ್ದರೂ ಅದೇ ಪ್ರಾಮಾಣಿಕತೆ ತನ್ನ ಕೆಲಸದಲ್ಲಿರುತ್ತದೆ ಎಂದು ಪ್ರಮೋದ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ