ಇಟಲಿಗೆ ಹೋಗಿ ಮದುವೆ ಮಾಡಿಕೊಳ್ಳಬೇಕಿದ್ದ ವರ ಮಹಾಶಯನ ಪಾಸ್ ಪೋರ್ಟ್ ಅನ್ನು ಅಗಿದು ಜಗಿದು ಬಿಸಾಡಿದ ಸಾಕು ನಾಯಿ.. ವರನಿಗೆ ಸಂಕಷ್ಟ!

| Updated By: Vimal Kumar

Updated on: Aug 21, 2024 | 6:05 PM

Pet Dog: ನಾಳಿದ್ದು ಶನಿವಾರ ಆಗಸ್ಟ್ 26ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಲಾಗುತ್ತದೆ. ಹೌದು ಈ ನಾಯಿ ಸಂತತಿ ನಿಷ್ಠಾವಂತ ಪ್ರಾಣಿ ಮಾತ್ರವಲ್ಲದೆ ಅವು ಮನುಷ್ಯನ ಉತ್ತಮ ಸ್ನೇಹಿತನೂ ಹೌದು. ಆದರೆ ಇಲ್ಲೊಂದು ಭಾರೀ ಎಡವಟ್ಟು ಪ್ರಸಂಗ ನಡೆದಿದೆ. ಏನಪ್ಪ ಅಂದ್ರೆ ಅಮೆರಿಕದಲ್ಲಿ ನಾಯಿಯೊಂದು ಮದುವೆಯನ್ನೇ ನಿಲ್ಲಿಬಿಡುವ ಬೆದರಿಕೆ ಹಾಕಿದೆ. ಮದುವೆಯಾಗಲು ಅಮೆರಿಕದಿಂದ ಇಟಲಿ ದೇಶಕ್ಕೆ ಹೋಗಬೇಕೆಂದುಕೊಂಡಿದ್ದ ವ್ಯಕ್ತಿಯೊಬ್ಬರ ಪಾಸ್ ಪೋರ್ಟ್ ಅನ್ನು ಸಾಕುನಾಯಿಯೊಂದು ಜಗಿದು ಬಿಸಾಕಿದೆ!

ನಾಳಿದ್ದು ಶನಿವಾರ ಆಗಸ್ಟ್ 26ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಲಾಗುತ್ತದೆ. ಹೌದು ಈ ನಾಯಿ ಸಂತತಿ ನಿಷ್ಠಾವಂತ ಪ್ರಾಣಿ ಮಾತ್ರವಲ್ಲದೆ ಅವು ಮನುಷ್ಯನ ಉತ್ತಮ ಸ್ನೇಹಿತನೂ ಹೌದು. ಆದರೆ ಇಲ್ಲೊಂದು ಭಾರೀ ಎಡವಟ್ಟು ಪ್ರಸಂಗ ನಡೆದಿದೆ. ಏನಪ್ಪ ಅಂದ್ರೆ

ಅಮೆರಿಕದಲ್ಲಿ ನಾಯಿಯೊಂದು (Pet Dog) ಮದುವೆಯನ್ನೇ ನಿಲ್ಲಿಬಿಡುವ ಬೆದರಿಕೆ ಹಾಕಿದೆ. ಮದುವೆಯಾಗಲು ಬೇರೆ ದೇಶಕ್ಕೆ ಹೋಗಬೇಕೆಂದುಕೊಂಡಿದ್ದ ವ್ಯಕ್ತಿಯೊಬ್ಬರ ಪಾಸ್ ಪೋರ್ಟ್ ಅನ್ನು ಸಾಕುನಾಯಿಯೊಂದು ಜಗಿದು ಬಿಸಾಕಿದೆ! ವಾಷಿಂಗ್ಟನ್‌ನ ಎನಾಲೊ ಪ್ರಾಕ್ಟೋರಿಲಿಸ್ ಎಂಬಾತ ಮ್ಯಾಗ್ಡಾ ಮಜ್ಲಿಸ್ ಎಂಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಅವರು ಇಟಲಿಯಲ್ಲಿ ಮದುವೆಯಾಗಲು ಬಯಸಿದ್ದರು.

ಮದುವೆ ಆಚರಣೆ ವ್ಯವಸ್ಥೆಗಾಗಿ ಅವರು ವಿದೇಶಕ್ಕೆ ಹೊರಡಬೇಕಿತ್ತು. ಅದೇ ವೇಳೆ ಡೆನಾಟೊ ಅವರ ಸಾಕು ನಾಯಿ ಆತನ ಪಾಸ್ ಪೋರ್ಟ್ ಅಗಿದು ಜಗಿದು ಹಾಕಿದೆ. ಅದೊಂದು ದಿನ, ಡೆನಾಟೊ ಮನೆಗೆ ಹೋಗಿ ನೋಡಿದರೆ ತನ್ನ ಮುದ್ದಿನ ನಾಯಿ ಮಾಡಿದ್ದನ್ನು ನೋಡಿ ಅವರು ಬೆಚ್ಚಿಬಿದ್ದರು. ಅದ ಕಂಡು ವರ ಮಹಾಶಯ ಡೆನಾಟೊ ಸ್ಥಳೀಯ ಪಾಸ್ ಪೋರ್ಟ್ ಅಧಿಕಾರಿಗಳ ಬಳಿಗೆ ಓಡಿ ಹೋಗಿದ್ದಾನೆ. ಪರ್ಯಾಯ ಪಾಸ್ ಪೋರ್ಟ್ ನೆರವು ಕೋರಿದರು. ಆಗಸ್ಟ್ 31 ರಂದು ಇಟಲಿಯಲ್ಲಿ ತನ್ನದೇ ಮದುವೆ ನಡೆಯಲಿರುವ ಸಮಯದಲ್ಲಿ ತಮ್ಮ ನಾಯಿ ಈ ರೀತಿ ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸದಿದ್ದರೆ, ಎಲ್ಲಾ ಸಂಬಂಧಿಕರು ತನೆಗ ನಿಶ್ಚಯವಾಗಿರುವ ವರನಿಲ್ಲದೆ ಇಟಲಿಗೆ ಹೋಗುತ್ತಾರೆ ಮತ್ತು ಅವರು ಇಲ್ಲಿಯೇ ಇರಬೇಕಾಗುತ್ತದೆ ಎಂದು ಡೆನಾಟೊ ವುಡ್​​ಬಿ ಹೇಳಿಕೊಂಡಿದ್ದಾರೆ. ಅದೃಷ್ಟವಶಾತ್, ಹಿರಿಯ ರಾಜಕಾರಣಿಯೊಬ್ಬರು ಡೊನಾಟೊ ಅವರ ಗಂಭೀರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಹೆಚ್ಚಿನ ವೈರಲ್ ವೀಡಿಯೊಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 24, 2023 06:10 PM