ಬೆಂಗಳೂರು: ನಾಳೆ ವರಮಹಾಲಕ್ಷ್ಮಿ ಹಬ್ಬ, ಖರೀದಿಗಳಿಗೆ ಕೆಆರ್ ಮಾರ್ಕೆಟ್ ಮುಕ್ಕುರಿದ ಜನ, ವ್ಯಾಪಾರ-ವಹಿವಾಟು ಜೋರು!

ಬೆಂಗಳೂರು: ನಾಳೆ ವರಮಹಾಲಕ್ಷ್ಮಿ ಹಬ್ಬ, ಖರೀದಿಗಳಿಗೆ ಕೆಆರ್ ಮಾರ್ಕೆಟ್ ಮುಕ್ಕುರಿದ ಜನ, ವ್ಯಾಪಾರ-ವಹಿವಾಟು ಜೋರು!

Arun Kumar Belly
|

Updated on: Aug 24, 2023 | 12:05 PM

ನಗರದ ಗೃಹಿಣಿಯರು ಮತ್ತು ಸದ್ಗೃಹಸ್ಥರು ದುಬಾರಿ, ಬೆಲೆ ಜಾಸ್ತಿ, ಅಯ್ಯೋ ಏನಮ್ಮ ಇದು ರೇಟು ಅಂತ ಉದ್ಗರಿಸುತ್ತಲೇ ಹೂ-ಹಣ್ಣು ಖರೀದಿಸುತ್ತಾರೆ. ಕಳೆದ ಕೆಲದಿನಗಳಿಂದ ಅಗತ್ಯ ವಸ್ತುಗಳ ಬೆಲೆ ಭಯ ಬೀಳಿಸುವಷ್ಟು ಹೆಚ್ಚಿದೆ. ಹಾಗಂತ ಹಬ್ಬ ಆಚರಿಸದಿರಲಾಗುತ್ಯೇ? ಶ್ರಾವಣ ಮಾಸದಿಂದ ಹಬ್ಬಗಳ ಸೀಸನ್ ಶುರುವಾಗುತ್ತದೆ, ಹಾಗಾಗಿ ಹೂವು-ಹಣ್ಣು-ತರಕಾರಿ ಮತ್ತು ಅಗತ್ಯವಸ್ತುಗಳ ಬೆಲೆ ಇಳಿದೀತು ಅಂತ ಆಶಾಭಾವನೆ ತಳೆಯುವುದು ಅಪರಾಧ!

ಬೆಂಗಳೂರು: ನಗರದ ಕೆಆರ್ ಮಾರ್ಕೆಟ್ (KR Market) ಸದಾ ಜನ ಮತ್ತು ವ್ಯಾಪಾರಿಗಳಿಂದ ಗಿಜಿಗುಡುತ್ತಿರುತ್ತದೆ. ಇನ್ನು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕೇಳಬೇಕೇ? ನಾಳೆ ವರಮಹಾಲಕ್ಷ್ಮಿ ಹಬ್ಬ (Varamahalakshmi Festival), ದಕ್ಷಿಣ ಕರ್ನಾಟಕ ಭಾಗದಲ್ಲಿ (South Karnataka) ಇದು ಬಹು ದೊಡ್ಡ ಹಬ್ಬ. ಹಾಗಾಗೇಮ ಜನ ಮಾರ್ಕೆಟ್ ನಲ್ಲಿ ಖರೀದಿಗಳಿಗಾಗಿ ಮುಕ್ಕುರಿದ್ದಾರೆ. ಹಬ್ಬಕ್ಕೆ ಹೂವು ಹಣ್ಣು ಬೇಕೆ ಬೇಕು, ಒಬ್ಬಟ್ಟು ಮತ್ತು ಇತರ ಸಿಹಿತಿಂಡಿ ಹಾಗೂ ಹಬ್ಬದಡಿಗೆಗೆ ಹತ್ತು ಹಲವು ಪದಾರ್ಥಗಳು ಬೇಕು. ಮಾರ್ಕೆಟ್ ಪ್ರದೇಶ ಪ್ರವೇಶಿಸುತ್ತಿದ್ದಂತೆಯೇ, ಹೂವು ಮತ್ತು ಹಣ್ಣು ಮಾರುವವರ ಭರಾಟೆ ಕಿವಿಗೆ ಬೀಳುತ್ತದೆ. ಹಬ್ಬದ ಸಮಯದಲ್ಲಿ ಹೂ ಮತ್ತು ಹಣ್ಣುಗಳ ಬೆಲೆಗಳು ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಜೊತೆ ಚಂದ್ರನ ಮೇಲೆ ಲ್ಯಾಂಡ್ ಆಗುತ್ತವೆ! ನಗರದ ಗೃಹಿಣಿಯರು ಮತ್ತು ಸದ್ಗೃಹಸ್ಥರು ದುಬಾರಿ, ಬೆಲೆ ಜಾಸ್ತಿ, ಅಯ್ಯೋ ಏನಮ್ಮ ಇದು ರೇಟು ಅಂತ ಉದ್ಗರಿಸುತ್ತಲೇ ಹೂ-ಹಣ್ಣು ಖರೀದಿಸುತ್ತಾರೆ. ಕಳೆದ ಕೆಲದಿನಗಳಿಂದ ಅಗತ್ಯ ವಸ್ತುಗಳ ಬೆಲೆ ಭಯ ಬೀಳಿಸುವಷ್ಟು ಹೆಚ್ಚಿದೆ. ಹಾಗಂತ ಹಬ್ಬ ಆಚರಿಸದಿರಲಾಗುತ್ಯೇ? ಶ್ರಾವಣ ಮಾಸದಿಂದ ಹಬ್ಬಗಳ ಸೀಸನ್ ಶುರುವಾಗುತ್ತದೆ, ಹಾಗಾಗಿ ಹೂವು-ಹಣ್ಣು-ತರಕಾರಿ ಮತ್ತು ಅಗತ್ಯವಸ್ತುಗಳ ಬೆಲೆ ಇಳಿದೀತು ಅಂತ ಆಶಾಭಾವನೆ ತಳೆಯುವುದು ಅಪರಾಧ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ