Pakistan Rakhi Sister :ಅಣ್ಣಯ್ಯ ಪ್ರಧಾನಿ ಮೋದಿ ಭದ್ರತೆ ಬಯಸಿ 31ನೇ ಬಾರಿಗೆ ರಾಖಿ ಕಟ್ಟಲಿರುವ ಪಾಕ್ ತಂಗಿ!

|

Updated on: Aug 23, 2023 | 2:00 PM

Qamar Mohsin Sheikh: ಮುಂದಿನ ಬುಧವಾರ ರಕ್ಷಾ ಬಂಧನ ಪವಿತ್ರ ದಿನದಂದು ಪ್ರಧಾನಿ ನರೇಂದ್ರ ಮೋದಿಯವರ ಪಾಕಿಸ್ತಾನಿ ಸಹೋದರಿ ರಾಖಿ ಕಟ್ಟಲು ದೆಹಲಿಗೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ಮೂಲದ ಮಹಿಳೆ ಕಮರ್ ಮೊಹ್ಸಿನ್ ಶೇಖ್ ತಮ್ಮ ವಿವಾಹದ ನಂತರ ಅಹಮದಾಬಾದ್‌ಗೆ ಬಂದು ನೆಲೆಸಿದ್ದಾರೆ. 30 ವರ್ಷಗಳಿಂದ ಅವರು ನರೇಂದ್ರ ಮೋದಿಗೆ ರಾಖಿ ಕಟ್ಟುತ್ತಿದ್ದಾರೆ.

ಮುಂದಿನ ಬುಧವಾರ (30 ಆಗಸ್ಟ್, 2023) ರಕ್ಷಾ ಬಂಧನ ಪವಿತ್ರ ದಿನದಂದು (Raksha Bandhan) ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಪಾಕಿಸ್ತಾನಿ ಸಹೋದರಿ ರಾಖಿ ಕಟ್ಟಲು (Pakistani Rakhi sister) ದೆಹಲಿಗೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ಮೂಲದ ಮಹಿಳೆ ಕಮರ್ ಮೊಹ್ಸಿನ್ ಶೇಖ್ (Qamar Mohsin Sheikh) ತಮ್ಮ ವಿವಾಹದ ನಂತರ ಅಹಮದಾಬಾದ್‌ಗೆ ಬಂದು ನೆಲೆಸಿದ್ದಾರೆ. 30 ವರ್ಷಗಳಿಂದ ಅವರು ನರೇಂದ್ರ ಮೋದಿಗೆ ರಾಖಿ ಕಟ್ಟುತ್ತಿದ್ದಾರೆ.

ಕೊರೊನಾ ಸಾಂಕ್ರಾಮಿಕದಿಂದಾಗಿ ಮೊಹ್ಸಿನ್ ಶೇಖ್ ಅವರು ಕಳೆದ ಎರಡು ವರ್ಷಗಳಿಂದ ಪ್ರಧಾನಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅಂಚೆ ಮೂಲಕ ಮನೆಯಲ್ಲಿ ತಯಾರಿಸಿದ ರಾಖಿಗಳನ್ನು ಕಳುಹಿಸುವ ಮೂಲಕ ಸಂಪ್ರದಾಯವನ್ನು ಮುಂದುವರೆಸಿದ್ದರು. ಕಳೆದ ವರ್ಷವೂ ಅವರು ಪ್ರಧಾನಿ ಮೋದಿಗೆ ಪವಿತ್ರ ದಾರವನ್ನು ಕಳುಹಿಸಿದ್ದರು. ಈ ವರ್ಷ, ಅವರು ಪ್ರಧಾನ ಮಂತ್ರಿಯನ್ನು ಖುದ್ದಾಗಿ ಭೇಟಿಯಾಗುವ ಮತ್ತು ಒಟ್ಟಿಗೆ ಹಬ್ಬವನ್ನು ಆಚರಿಸುವ ಭರವಸೆಯಲ್ಲಿದ್ದಾರೆ. ನರೇಂದ್ರ ಮೋದಿಯವರ ಓದುವ ಬಗ್ಗೆ ಇರುವ ಒಲವನ್ನು ಪರಿಗಣಿಸಿ ಅವರಿಗೆ ಕೃಷಿ ವಿಷಯದ ಪುಸ್ತಕವನ್ನು ಈ ಬಾರಿ ಉಡುಗೊರೆಯಾಗಿ ನೀಡಲು ಯೋಜಿಸಿದ್ದಾರೆ.

ಈ ಬಾರಿ ನಾನೇ ‘ರಾಖಿ’ಯನ್ನು ತಯಾರಿಸಿದ್ದೇನೆ, ನಾನು ಅವರಿಗೆ (ಪಿಎಂ ಮೋದಿ) ಕೃಷಿ ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತೇನೆ, ಏಕೆಂದರೆ ಅವರು ಓದಲು ಇಷ್ಟಪಡುತ್ತಾರೆ. ಕಳೆದ 2-3 ವರ್ಷಗಳಿಂದ, ಕೋವಿಡ್‌ನಿಂದ ನಾನು ಅವರ ಭೇಟಿಗೆ ಹೋಗಲು ಸಾಧ್ಯವಾಗಲಿಲ್ಲ, ಆದರೆ ಈ ಬಾರಿ ನಾನು ಅವರನ್ನು ಖುದ್ದಾಗಿ ಭೇಟಿಯಾಗುತ್ತೇನೆ ಎಂದು ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ಪ್ರತಿದಿನ ಅವರಿಗಾಗಿ ಪ್ರಾರ್ಥಿಸುತ್ತೇನೆ. ನನ್ನ ಈ ಆಸೆಗಳೆಲ್ಲ ಈಡೇರುತ್ತವೆ ಎಂದು ನಾನು ನಂಬುತ್ತೇನೆ. ಈ ಹಿಂದೆ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಬೇಕೆಂದು ನಾನು ಪ್ರಾರ್ಥಿಸಿದಾಗ ಅವರು ಆ ರಾಜ್ಯದ ಸಿಎಂ ಆಗಿದ್ದರು ಎಂದು ಮೊಹ್ಸಿನ್ ಶೇಖ್ ಹೇಳಿದರು.

ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ