My India My Life Goals: ಪ್ರವಾಸಗಳು ಬೇರೆ ಬೇರೆ ಪ್ರದೇಶಗಳ ಸಂಸ್ಕೃತಿ ಮತ್ತು ಪ್ರಾಕೃತಿಕ ವಿಸ್ಮಯಗಳನ್ನು ಪರಿಚಯಿಸುತ್ತವೆ

My India My Life Goals: ಪ್ರವಾಸಗಳು ಬೇರೆ ಬೇರೆ ಪ್ರದೇಶಗಳ ಸಂಸ್ಕೃತಿ ಮತ್ತು ಪ್ರಾಕೃತಿಕ ವಿಸ್ಮಯಗಳನ್ನು ಪರಿಚಯಿಸುತ್ತವೆ

Arun Kumar Belly
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 09, 2023 | 2:54 PM

ಪ್ರವಾಸಕ್ಕೆ ಅಂತ ತೆರಳಿದಾಗ ಪರಿಸರದ ಕಾಳಜಿ ನಮ್ಮ ಸ್ಮೃತಿಪಟಲದಿಂದ ದೂರ ಸರಿಯಬಾರದು, ಬೇರೆಯವರಿಗೂ ಅಂದರೆ ಪ್ರವಾಸಕ್ಕೆ ತೆರಳಿದ ಪ್ರದೇಶದಲ್ಲಿ ವಾಸವಾಗಿರುವ ಜನರಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಬೇಕು.

ಬೆಂಗಳೂರು: ದೇಶ ಸುತ್ತು ಕೋಶ ಓದು ಅಂತ ಗಾದೆ ಮಾತಿದೆ, ಅದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ದೇಶವನ್ನು ಸುತ್ತುವುದರಿಂದ (travelling) ಬೇರೆ ಬೇರೆ ಜನಗಳ, ಜನಾಂಗಗಳ, ಅವರ ಆಚಾರ-ವಿಚಾರ, ಉಡುಗೆ-ತೊಡುಗೆ, ಸಂಸ್ಕೃತಿ ಮತ್ತು ಪರಂಪರೆಯ (culture and heritage) ಬಗ್ಗೆ ಗೊತ್ತಾಗುತ್ತದೆ. ಆಯಾ ಭಾಗಗಳ ನೈಸರ್ಗಿಕ ಸೊಬಗು (beauty of nature), ಗಿಡ ಮರಗಳು, ಕಾಡು-ಮೇಡು ಸಸ್ಯರಾಶಿ ಮೊದಲಾದವುಗಳನ್ನು ತಿಳಿದುಕೊಳ್ಳುವ ಅವಕಾಶ ಕೂಡ ಸಿಗುತ್ತದೆ. ನಮಗೆ ಗೊತ್ತೇ ಇರದ ಅನೇಕ ಪ್ರಾಕೃತಿಕ ವಿಸ್ಮಯಗಳಿವೆ. ಅವುಗಳನ್ನು ಅರಿಯಬೇಕಾದರೆ ಪ್ರವಾಸ ಮಾಡಬೇಕು. ಪ್ರವಾಸಕ್ಕೆ ಅಂತ ತೆರಳಿದಾಗ ಪರಿಸರದ ಕಾಳಜಿ ನಮ್ಮ ಸ್ಮೃತಿಪಟಲದಿಂದ ದೂರ ಸರಿಯಬಾರದು, ಬೇರೆಯವರಿಗೂ ಅಂದರೆ ಪ್ರವಾಸಕ್ಕೆ ತೆರಳಿದ ಪ್ರದೇಶದಲ್ಲಿ ವಾಸವಾಗಿರುವ ಜನರಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಬೇಕು. ಅದರರ್ಥ, ಪ್ರವಾಸ ಕೇವಲ ಮೋಜಿನ ಭಾಗವಾಗದೆ ಅದನ್ನೊಂದು ಅಭಿಯಾನವಾಗಿಸಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 09, 2023 02:46 PM