ಮೂಡಿಗೆರೆ ಪೊಲೀಸರೇ ರಸ್ತೆಗಿಳಿದು ಹೆದ್ದಾರಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ! ಯಾಕೆ? ಸ್ಥಳೀಯ ಶಾಸಕಿ ಏನಂತಾರೆ?
ರಾಜ್ಯ ಹೆದ್ದಾರಿಯ ಗುಂಡಿಗಳನ್ನು ಪೊಲೀಸ್ ಸಿಬ್ಬಂದಿಯೇ ಮುಚ್ಚುತ್ತಿದ್ದಾರೆ. ಸದ್ಯಕ್ಕೆ, ಮೂಡಿಗೆರೆ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆದಿದೆ. ಅಪಘಾತ ತಡೆಗೆ ಗುಂಡಿಗಳನ್ನು ಮುಚ್ಚಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿತ್ತು. ಆದರೆ ಪೊಲೀಸರ ಮನವಿಗೂ PWD ಅಧಿಕಾರಿಗಳು ಕ್ಯಾರೆ ಅಂದಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ನಯನಾ ಮೋಟಮ್ಮಗೂ ಮನವಿ ಮಾಡಿದ್ದರು. ಈವರೆಗೆ ಅವರೂ ಸ್ಪಂದಿಸಿಲ್ಲ.
ಚಿಕ್ಕಮಗಳೂರು, ಆಗಸ್ಟ್ 22: ರಸ್ತೆ ಗುಂಡಿಯಿಂದ ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಹೆಚ್ಚಳವಾಗುತ್ತಿರುವುದನ್ನು ಮನಗಂಡ ಚಿಕ್ಕಮಗಳೂರು ಪೊಲೀಸರು ಸ್ವತಃತಾವೇ ರಸ್ತೆಗಿಳಿದು ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ರಾಜ್ಯ ಹೆದ್ದಾರಿಯ ಗುಂಡಿಗಳನ್ನು (highway pothole) ಪೊಲೀಸ್ ಸಿಬ್ಬಂದಿಯೇ ಮುಚ್ಚುತ್ತಿದ್ದಾರೆ. ಸದ್ಯಕ್ಕೆ, ಮೂಡಿಗೆರೆ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆದಿದೆ. ಅಪಘಾತ ತಡೆಗೆ ಗುಂಡಿಗಳನ್ನು ಮುಚ್ಚಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿತ್ತು. ಆದರೆ ಪೊಲೀಸರ ಮನವಿಗೂ PWD ಅಧಿಕಾರಿಗಳು ಕ್ಯಾರೆ ಅಂದಿಲ್ಲ. ಮುಂದುವರಿದು ಪೊಲೀಸರು (Mudigere police) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ನಯನಾ ಮೋಟಮ್ಮಗೂ (MLA Nayana Motamma) ಮನವಿ ಮಾಡಿದ್ದರು. ಈವರೆಗೆ ಅವರೂ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವತಃ ತಾವೇ ರಸ್ತೆ ಗುಂಡಿ ಮುಚ್ಚುತ್ತಿದ್ದಾರೆ. ಸಿಬ್ಬಂದಿ ಜೊತೆ ಠಾಣಾಧಿಕಾರಿಗಳ ನೇತೃತ್ವದಲ್ಲಿ ಗುಂಡಿ ಮುಚ್ಚುವ ಕೆಲಸ ಯುದ್ಧೋಪಾದಿಯಲ್ಲಿ ಭರದಿಂದ ನಡೆದಿದೆ (Chikkamagaluru News).
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ