ಕೋಲಾರ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ರೋಗಿಗಳಿಗೆ ಕುಡಿಯಲು ಸಹ ನೀರಿಲ್ಲ!
ಅಡ್ಮಿಟ್ ಆಗಿರುವ ಮಹಿಳೆಯರ ಸಂಬಂಧಿಕರು ನೀರಿಗಾಗಿ ಪರದಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ನೋಡಬಹುದು. ನೀರಿಗಾಗಿ ಅವರು ಪ್ರತಿದಿನ ರೂ. 200-300 ಖರ್ಚು ಮಾಡುವ ಪರಿಸ್ಥಿತಿ ಇದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕೃಪಾದೃಷ್ಟಿ ಕೋಲಾರ ಜಿಲ್ಲಾಸ್ಪತ್ರೆಯ ಮೇಲೆ ಯಾವಾಗ ಬೀಳುತ್ತೋ?
ಕೋಲಾರ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಬೆಂಗಳೂರಿನಿಂದ ದೂರವಿರುವ ಸರ್ಕಾರಿ ಅಶ್ಪತ್ರೆಗಳಿಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ವಿಚಾರಿಸುತ್ತಾರೆ, ಇತ್ತೀಚಿಗೆ ಅವರು ಮೈಸೂರು ಜಿಲ್ಲಾಸ್ಪತ್ರೆಗೆ ಹೋಗಿದ್ದನ್ನು ನಾವು ವರದಿ ಮಾಡಿದ್ದೇವೆ. ಆದರೆ, ಬೆಂಗಳೂರಿಗೆ ಬಹಳ ಹತ್ತಿರದಲ್ಲಿರುವ ಕೋಲಾರ ಜಿಲ್ಲಾಸ್ಪತ್ರೆಯ ದುರವಸ್ಥೆಯನ್ನು ಸಚಿವ ಗಮನಿಸದಿರೋದು ದುರದೃಷ್ಟಕರ ಮಾರಾಯ್ರೇ. ಇದು ಕೋಲಾರದ ಶ್ರೀ ನರಸಿಂಹರಾಜು ಜಿಲ್ಲಾಸ್ಪತ್ರೆಯ (Kolar district hospital) ತಾಯಿ ಮತ್ತು ಮಕ್ಕಳ ವಿಭಾಗ (Mother and Child hospital). ಈ ಆಸ್ಪತ್ರೆಯ ಮೇಲೊಂದು ದ್ಯೇಯವಾಕ್ಯ ಬರೆದಿದ್ದಾರೆ-ಸುರಕ್ಷಿತ ಮಾತೃತ್ವ ಆಶ್ವಾಸನೆ! ಇದಕ್ಕಿಂತ ದೊಡ್ಡ ಸುಳ್ಳು ಮತ್ತೊಂದಿರಲಾರದು. ಯಾಕೆ ಗೊತ್ತಾ? ಈ ಆಸ್ಪತ್ರೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿರುತ್ತಾರೆ. ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಕುಡಿಯೋ ನೀರು ಬಿಡಿ, ಶೌಚಕ್ಕೂ ನೀರಿಲ್ಲ! ಅಡ್ಮಿಟ್ ಆಗಿರುವ ಮಹಿಳೆಯರ ಸಂಬಂಧಿಕರು ನೀರಿಗಾಗಿ ಪರದಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ನೋಡಬಹುದು. ನೀರಿಗಾಗಿ ಅವರು ಪ್ರತಿದಿನ ರೂ. 200-300 ಖರ್ಚು ಮಾಡುವ ಪರಿಸ್ಥಿತಿ ಇದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕೃಪಾದೃಷ್ಟಿ ಕೋಲಾರ ಜಿಲ್ಲಾಸ್ಪತ್ರೆಯ ಮೇಲೆ ಯಾವಾಗ ಬೀಳುತ್ತೋ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ