RB Thimmapur: ಅಧಿಕಾರದ ಅಮಲು… ಮನವಿ ಕೊಡಲು ಬಂದ ರೈತನಿಗೆ ಏಯ್​​ ನಡಿ ಎಂದು ಗದರಿದ ಸಚಿವ ಆರ್​.ಬಿ. ತಿಮ್ಮಾಪುರ

| Updated By: ಸಾಧು ಶ್ರೀನಾಥ್​

Updated on: Aug 21, 2023 | 5:25 PM

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ KBJNL ಎಂಡಿ‌ ಕಚೇರಿಯಲ್ಲಿ ಇಂದು ಸೋಮವಾರ ಸಭೆ ನಡೆದಿತ್ತು. ಸಭೆ‌ ಬಳಿಕ‌ ಐಸಿಸಿ ಅಧ್ಯಕ್ಷ ತಿಮ್ಮಾಪುರ‌ ಭೇಟಿಗೆ ರೈತರು ಮುಂದಾದರು. ಆ ವೇಳೆ ‘ಏಯ್​ ನಡಿ’ ಎಂದು ರೈತರನ್ನು ಸಚಿವ ಆರ್.ಬಿ. ತಿಮ್ಮಾಪುರ ಗದರಿದರು. ಒಂದು ನಿಮಿಷ ಮಾತನಾಡಬೇಕೆಂದು ಸಚಿವರ ಬಳಿ ರೈತರು ಪರಿಪರಿಯಾಗಿ ಬೇಡಿದರು. ಸರ್ ಒಂದು ನಿಮಿಷ ಮಾತನಾಡಬೇಕು ಎಂದರು ರೈತರು (Farmer). ಆದರೆ ಅದು ಯಾವುದಕ್ಕೂ ಸೊಪ್ಪು ಹಾಕದ ಸಚಿವ ತಿಮ್ಮಾಪುರ ಏಯ್​​ ನಡಿ ಎಂದು ಗದರಿಯೇಬಿಟ್ಟರು.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ (Alamatti) KBJNL ಎಂಡಿ‌ ಕಚೇರಿಯಲ್ಲಿ ಇಂದು ಸೋಮವಾರ ಸಭೆ ನಡೆದಿತ್ತು. ಸಭೆ‌ ಬಳಿಕ‌ ಐಸಿಸಿ ಅಧ್ಯಕ್ಷ ತಿಮ್ಮಾಪುರ‌ (RB Thimmapur) ಭೇಟಿಗೆ ರೈತರು ಮುಂದಾದರು. ಆ ವೇಳೆ ‘ಏಯ್​ ನಡಿ’ ಎಂದು ರೈತರನ್ನು ಸಚಿವ ಆರ್.ಬಿ. ತಿಮ್ಮಾಪುರ ಗದರಿದರು. ಒಂದು ನಿಮಿಷ ಮಾತನಾಡಬೇಕೆಂದು ಸಚಿವರ ಬಳಿ ರೈತರು ಪರಿಪರಿಯಾಗಿ ಬೇಡಿದರು. ಸರ್ ಒಂದು ನಿಮಿಷ ಮಾತನಾಡಬೇಕು ಎಂದರು ರೈತರು (Farmer). ಆದರೆ ಅದು ಯಾವುದಕ್ಕೂ ಸೊಪ್ಪು ಹಾಕದ ಸಚಿವ ತಿಮ್ಮಾಪುರ ಏಯ್​​ ನಡಿ ಎಂದು ಗದರಿಯೇಬಿಟ್ಟರು. ಅದಕ್ಕೆ ನಾನು ಸಿಎಂ ಬಳಿ ಹೋಗುವೆ. ನಾನು ರಾಜ್ಯಾಧ್ಯಕ್ಷ ಇದ್ದೇನೆ ಸರ್ ಎಂದು ರೈತ ಮುಖಂಡ ವಾಸುದೇವ ಮೇಟಿ ಜೋರಾಗಿ ಹೇಳಿದ್ದಕ್ಕೆ ಮುಂದಿನ ಸಭೆಯಲ್ಲಿ ನಿಮ್ಮ ಸಲಹೆ ಪರಿಗಣಿಸೋಣ ಎಂದು ತಿಮ್ಮಾಪುರ ಹೇಳಿದರು. ಒಟ್ಟಾರೆ ಸಚಿವ ಆರ್​.ಬಿ.ತಿಮ್ಮಾಪುರ ವರ್ತನೆಗೆ ರೈತರು ಬೇಸರ‌ ವ್ಯಕ್ತಪಡಿಸಿದರು.

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮುಧೋಳ ಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಸೋಲಿಸಿ ಆರ್ ಬಿ ತಿಮ್ಮಾಪೂರ ಗೆಲುವು ಸಾಧಿಸಿದ್ದಾರೆ. 3ನೇ ಬಾರಿಗೆ ಸಚಿವರಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಮತ್ತು ಮುಜರಾಯಿ ಸಚಿವ ಖಾತೆ ನಿಭಾಯಿಸುತ್ತಿದ್ದಾರೆ. ಜೊತೆಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ