ಕುಮಾರಸ್ವಾಮಿಯ ಆರೋಪಗಳನ್ನು ಎದುರಿಸಲು ಆತ್ಮಸ್ಥೈರ್ಯಕ್ಕಾಗಿ ಸಚಿವ ಚಲುವರಾಯಸ್ವಾಮಿ ಕೋಡಿ ಮಠಕ್ಕೆ ಭೇಟಿ ನೀಡಿದರೆ?

ಕುಮಾರಸ್ವಾಮಿಯ ಆರೋಪಗಳನ್ನು ಎದುರಿಸಲು ಆತ್ಮಸ್ಥೈರ್ಯಕ್ಕಾಗಿ ಸಚಿವ ಚಲುವರಾಯಸ್ವಾಮಿ ಕೋಡಿ ಮಠಕ್ಕೆ ಭೇಟಿ ನೀಡಿದರೆ?

Arun Kumar Belly
|

Updated on: Aug 16, 2023 | 2:58 PM

ಆದರೆ ಕುಮಾರಸ್ವಾಮಿ ಸುಮ್ಮನಾಗುವ ಆಸಾಮಿಯಲ್ಲ. ಹೊಸ ಅರೋಪಗಳು ಸಿಗದೆ ಹೋದರೆ ಹಳೆಯವನ್ನೇ ಪುನರಾವರ್ತಿಸುತ್ತಾರೆ. ಹಾಗಾಗೇ, ಚಲುವರಾಯಸ್ವಾಮಿ, ಕುಮಾರಸ್ವಾಮಿಯವರ ಆರೋಪಗಳನ್ನು ಎದುರಿಸಲು ಆತ್ಮಸ್ಥೈರ್ಯ ತಂದುಕೊಳ್ಳಲು, ವಿಶ್ವಾಸ ಹೆಚ್ಚಿಸಿಕೊಳ್ಳಲು ಕೋಡಿಮಠಕ್ಕೆ ಬಂದಿದ್ದರೆ ಆಶ್ಚರ್ಯವಿಲ್ಲ.

ಹಾಸನ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಲ್ಲ ಮತ್ತು ಜಿಲ್ಲೆ ಯಾವುದೇ ಕ್ಷೇತ್ರವನ್ನು ಅವರು ಪ್ರತಿನಿಧಿಸುವುದಿಲ್ಲ. ಆದರೂ ಅವರು ಯಾಕೆ ಇಲ್ಲಿ, ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕೋಡಿಮಠದಲ್ಲಿ (Kodi Mutt) ಎಂಬ ಪ್ರಶ್ನೆ ಉದ್ಭವಿಸೋದು ಸಹಜವೇ. ಅದು ಕೂಡ ಅವರೊಬ್ಬರೇ ಬಾರದೆ ಪತ್ನಿ ಧನಲಕ್ಷ್ಮಿಯವರನ್ನೂ ಜೊತೆಗೆ ಕರೆದುಕೊಂಡು ಬಂದಿದ್ದಾರೆ. ಅವರ ಭಕ್ತಿ, ನಿಷ್ಠೆ ಬಗ್ಗೆ ನಾವು ಖಂಡಿತ ಮಾತಾಡುತ್ತಿಲ್ಲ ಅವರು ದೈವಭಕ್ತರು ಅಂತ ಗೊತ್ತಿದೆ. ನಮ್ಮಲ್ಲೊಂದು ಹಳೇ ಗಾದೆ ಇದೆ, ಸಂಕಟ ಬಂದಾಗ ವೆಂಕಟರಮಣ ಅಂತ. ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಹಳೆಯ ಮಿತ್ರ ಚಲವರಾಯಸ್ವಾಮಿ ವಿರುದ್ದ ಆರೋಪಗಳ ಹೊಳೆ ಹರಿಸುತ್ತಿದ್ದಾರೆ, ಬಿಡಿ ಅವರು ಮಾಡಿದ ಅರೋಪಗಳ್ಯಾವೂ ಸಾಬೀತಾಗಿಲ್ಲ ಮತ್ತು ಆ ವಿಷಯದಲ್ಲಿ ಸಚಿವರೇನೂ ಧೃತಿಗೆಟ್ಟಿಲ್ಲ. ಕುಮಾರಸ್ವಾಮಿ ಆರೋಪಗಳಿಂದ ದೂರ ಓಡದೆ, ಮಾಧ್ಯಮಗಳಿಗೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಸುಮ್ಮನಾಗುವ ಆಸಾಮಿಯಲ್ಲ. ಹೊಸ ಅರೋಪಗಳು ಸಿಗದೆ ಹೋದರೆ ಹಳೆಯವನ್ನೇ ಪುನರಾವರ್ತಿಸುತ್ತಾರೆ. ಹಾಗಾಗೇ, ಚಲುವರಾಯಸ್ವಾಮಿ, ಕುಮಾರಸ್ವಾಮಿಯವರ ಆರೋಪಗಳನ್ನು ಎದುರಿಸಲು ಆತ್ಮಸ್ಥೈರ್ಯ ತಂದುಕೊಳ್ಳಲು, ವಿಶ್ವಾಸ ಹೆಚ್ಚಿಸಿಕೊಳ್ಳಲು ಕೋಡಿಮಠಕ್ಕೆ ಬಂದಿದ್ದರೆ ಆಶ್ಚರ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ