Lokayukta Raid: ಸಣ್ಣ ನೀರಾವರಿ ಇಲಾಖೆ-ಬಿಬಿಎಂಪಿ ಇಂಜಿನಿಯರ್ ದಂಪತಿ ಮನೆ ಮೇಲೆ ಲೋಕಾ ದಾಳಿ! ಆಸ್ತಿ ಪತ್ರ, ಕಾರ್ ಕೀ ಹೊರಗೆಸೆದರು!

Lokayukta Raid: ಸಣ್ಣ ನೀರಾವರಿ ಇಲಾಖೆ-ಬಿಬಿಎಂಪಿ ಇಂಜಿನಿಯರ್ ದಂಪತಿ ಮನೆ ಮೇಲೆ ಲೋಕಾ ದಾಳಿ! ಆಸ್ತಿ ಪತ್ರ, ಕಾರ್ ಕೀ ಹೊರಗೆಸೆದರು!

ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಸಾಧು ಶ್ರೀನಾಥ್​

Updated on: Aug 17, 2023 | 12:41 PM

Lokayukta Raid: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ.ಮಹೇಶ್, ಅವರ ಪತ್ನಿ BBMP ಎಇ ಹೆಚ್.ಭಾರತಿ ಮನೆ ಮೇಲೆ ದಾಳಿ ನಡೆದಿದೆ. ಮಹೇಶ್, ಭಾರತಿ ದಂಪತಿ​​ ಮನೆ ದಾವಣಗೆರೆಯ ಜಯನಗರದಲ್ಲಿದೆ. ಮಹೇಶ್, ಭಾರತಿ ದಂಪತಿ​​ ಮನೆಯಲ್ಲಿ ಪರಿಶೀಲನೆ ಮುಂದುವರಿದಿದೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ ನೇತೃತ್ವದಲ್ಲಿ ಶೋಧ ನಡೆದಿದೆ.

ಬೆಂಗಳೂರು/ಚಿತ್ರದುರ್ಗ/ ದಾವಣಗೆರೆ: ರಾಜ್ಯಾದ್ಯಂತ ನಾನಾ ಕಡೆ ಕಡು ಭ್ರಷ್ಟರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಮಹೇಶ್, ಪತ್ನಿ BBMP ಎಇ ಹೆಚ್.ಭಾರತಿ ಮನೆ ಮೇಲೆಯೂ (Small Irrigation Department Engineer and BBMP Engineer couple House) ದಾಳಿ ನಡೆದಿದೆ. ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿಯೂ ಲೋಕಾಯುಕ್ತ ಬೇಟೆ (Lokayukta Raid) ನಡೆದಿದೆ. ಆ ವೇಳೆ ಕುಟುಂಬ ಸದಸ್ಯರು ಆಸ್ತಿ ಪತ್ರ ಹಾಗೂ ಕಾರ್ ಕೀ ಗಳನ್ನ ಹೊರ ಎಸೆದಿರುವ ಘಟನೆಯೂ ನಡೆದಿದೆ. ಆದರೂ ಮನೆ ಸುತ್ತಾಡಿದ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಮೂರು ಕಡೆ ಅಡಿಕೆ ತೋಟ, ‌ಒಂದು ಕೆಜಿ ಚಿನ್ನ ಹಾಗೂ 15 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಆದಾಯಕಿಂತ ಒಂದು ಕೋಟಿ, 38 ಲಕ್ಷ 10 ಸಾವಿರ ರೂಪಾಯಿ ಹೆಚ್ಚುವರಿ ಆಸ್ತಿ ಗಳಿಕೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಅಂದರೆ ಸುಮಾರು ಶೇ.185 ರಷ್ಟು ಆದಾಯ ಗಳಿಕೆಯಾಗಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ.ಮಹೇಶ್, ಅವರ ಪತ್ನಿ BBMP ಎಇ ಹೆಚ್.ಭಾರತಿ ಮನೆ ಮೇಲೆ ದಾಳಿ ನಡೆದಿದೆ. ಮಹೇಶ್, ಭಾರತಿ ದಂಪತಿ​​ ಮನೆ ದಾವಣಗೆರೆಯ ಜಯನಗರದಲ್ಲಿದೆ. ಮಹೇಶ್, ಭಾರತಿ ದಂಪತಿ​​ ಮನೆಯಲ್ಲಿ ಪರಿಶೀಲನೆ ಮುಂದುವರಿದಿದೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ ನೇತೃತ್ವದಲ್ಲಿ ಶೋಧ ನಡೆದಿದೆ.

ಚಿಕ್ಕಜಾಲದ ಮಾಜಿ ಗ್ರಾಮ ಪಂಚಾಯತ್​ ಅಧ್ಯಕ್ಷ ಮನೆ ಮೇಲೆ ದಾಳಿ

ಇನ್ನು ಇತ್ತ ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ಚಿಕ್ಕಜಾಲದ ಮಾಜಿ ಗ್ರಾಮ ಪಂಚಾಯತ್​ ಅಧ್ಯಕ್ಷ ಹಾಲಿ ಸದಸ್ಯ ಲಕ್ಷ್ಮೀಪತಿ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಚಿಕ್ಕಜಾಲದ ಮನೆಯಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಕೋಲಾರ ಲೋಕಾಯುಕ್ತ ಡಿವೈಎಸ್ಪಿ ಸೂರ್ಯನಾರಾಯಣರಾವ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ದಾಳಿ ವೇಳೆ 20 ಎಕರೆ ಜಮೀನು 5 ಸೈಟ್ಗಳ ದಾಖಲೆಗಳು ಒಂದು ಲಾಕರ್ ಪತ್ತೆಯಾಗಿದೆ. ಬೆಂಗಳೂರು ಸುತ್ತಾಮುತ್ತ ಕೋಟಿ ಕೋಟಿ ಬೆಲೆ ಬಾಳುವ ಜಮೀನು ಮತ್ತು ಸೈಟ್ ಗಳನ್ನು ಹೊಂದಿರುವ ಆಪಾದನೆಯಿದೆ. ಅಧಿಕಾರಿಗಳು ಜಮೀನು ದಾಖಲೆಗಳ ಪರಿಶೀಲನೆ ಮಾಡ್ತಿದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ