ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗಾಗಿ ರೋಗಿಗಳ ಪರದಾಟ, ಜಲಬಾಧೆ ಇದ್ದೇ ಇದೆ!
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲ, ಶೌಚಾಲಯದಲ್ಲೂ ನೀರಿಲ್ಲ. ಆಸ್ಪತ್ರೆಯಲ್ಲಿ ನೀರಿಗಾಗಿ ನರಳಾಟ. ಹಾಗಾಗಿ ಆಸ್ಪತ್ರೆಯ ಆವರಣದಲ್ಲಿ ನೀರಿನ ಬಾಟಲ್ಗಳನ್ನು ಹಿಡಿದು ಮಹಿಳೆಯರು ಓಡಾಡುತ್ತಿರುವುದು ಸಾಮಾನ್ಯ ದೃಸ್ಯವಾಗಿದೆ. ಕುಡಿಯುವ ನೀರಿಗಾಗಿ ರೋಗಿಗಳು, ಮಹಿಳೆಯರು ಹಾಗೂ ಬಾಣಂತಿಯರು ಪರದಾಡುವುದು ತಪ್ಪಿಲ್ಲ.
ಕೋಲಾರ, ಆಗಸ್ಟ್ 12: ಜಿಲ್ಲಾಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲ, ಶೌಚಾಲಯದಲ್ಲೂ ನೀರಿಲ್ಲ. ಆಸ್ಪತ್ರೆಯಲ್ಲಿ ನೀರಿಗಾಗಿ ನರಳಾಟ. ಹಾಗಾಗಿ ಆಸ್ಪತ್ರೆಯ ಆವರಣದಲ್ಲಿ ನೀರಿನ ಬಾಟಲ್ಗಳನ್ನು ಹಿಡಿದು ಮಹಿಳೆಯರು ಓಡಾಡುತ್ತಿರುವುದು ಸಾಮಾನ್ಯ ದೃಸ್ಯವಾಗಿದೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ( Kolar district hospital) ಕುಡಿಯುವ ನೀರಿಗಾಗಿ ರೋಗಿಗಳು (patients), ಮಹಿಳೆಯರು ಹಾಗೂ ಬಾಣಂತಿಯರು ಪರದಾಡುವುದು ತಪ್ಪಿಲ್ಲ. ಆಸ್ಪತ್ರೆಯಲ್ಲಿ ಕುಡಿಯುವ ನೀರು (drinking water), ಬಿಸಿ ನೀರಿಲ್ಲದೆ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಆಸ್ಪತ್ರೆ ಅಕ್ಕಪಕ್ಕದ ಹೋಟೆಲ್, ದೇವಾಸ್ಥಾನದ ಬಳಿ ನೀರಿಗಾಗಿ ಮಹಿಳೆಯರು ಸರ್ಕಸ್ ಮಾಡುವುದು ಢಾಳಾಗಿ ಕಂಡುಬರುತ್ತದೆ. ಒಂದು ಬಾಟಲ್ ನೀರಿಗೆ 20 ರಿಂದ 30 ರೂಪಾಯಿ ದರ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ನಿತ್ಯ 200-300 ರೂಪಾಯಿ ನೀರಿಗಾಗಿ ಖರ್ಚು ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತ ಆದರೆ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಜಲಬಾಧೆ ಇದ್ದೇ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ