ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆದೇವತೆ ಕೆಂಕೇರಮ್ಮ ದೇವಾಲಯದಲ್ಲಿ ಹಾಡಹಗಲೇ ಕಳ್ಳತನ
ರಾಮನಗರ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮನೆದೇವತೆ ಕೆಂಕೇರಮ್ಮ ದೇವಾಲಯದಲ್ಲಿ ಕಳ್ಳತನವಾಗಿದೆ. ಕನಕಪುರದ ಕಂಕೇರಮ್ಮ ದೇವಾಲಯದಲ್ಲಿ 8 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಕಳ್ಳತನವಾಗಿದೆ. ದೇವಾಲಯದ ಅರ್ಚಕ ಊಟಕ್ಕೆ ಹೋಗಿದ್ದಾಗ ಕಳ್ಳರು ಚಿನ್ನ, ಬೆಳ್ಳಿ ಕದ್ದೊಯ್ದಿದ್ದಾರೆ. ಕಳ್ಳತನದ ದೃಶ್ಯಾವಳಿಗಳು ದೇವಾಲಯದ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ, ಆಗಸ್ಟ್ 15: ಕನಕಪುರದ (Kanakapura) ಕಂಕೇರಮ್ಮ ದೇವಾಲಯದಲ್ಲಿ (Kenkeramma temple) ಹಾಡಹಗಲೇ 8 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಕಳ್ಳತನವಾಗಿದೆ. ದೇವಾಲಯದ ಅರ್ಚಕ ಊಟಕ್ಕೆ ಹೋಗಿದ್ದಾಗ ಕಳ್ಳರು ಚಿನ್ನ, ಬೆಳ್ಳಿ ಕದ್ದೊಯ್ದಿದ್ದಾರೆ. ಕಳ್ಳತನದ (temple theft) ದೃಶ್ಯಾವಳಿಗಳು ದೇವಾಲಯದ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಮನಾರ್ಹವೆಂದರೆ ಕೆಂಕೇರಮ್ಮ ದೇವಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (Dk shivakumar) ಅವರ ಮನೆದೇವತೆ.
ವಾಡಿಕೆಯಂತೆ ಪ್ರತಿವರ್ಷ ಈ ದೇಗುಲದಲ್ಲಿ ಕೊಂಡೋತ್ಸವ ಜರುಗುತ್ತದೆ. ಆ ವೇಳೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಭೇಟಿ ಕೊಡುತ್ತಾರೆ. ಇನ್ನು ಕಳೆದ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಅವರು ಕುಟುಂಬ ಸಮೇತ ಇಲ್ಲಿಗೆ ಆಗಮಿಸಿ ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos