ಜಯನಗರ RTO: ಫ್ಯಾನ್ಸಿ ನಂಬರುಗಳು ಲಕ್ಷ ಲಕ್ಷಕ್ಕೆ ಬಿಕರಿಯಾದವು -ವಾಹನ ಮಾಲೀಕರಿಗೂ ಖುಷಿ, ಸಾರಿಗೆ ಇಲಾಖೆಗೂ ಫುಲ್ ಖುಷ್​!

| Updated By: ಸಾಧು ಶ್ರೀನಾಥ್​

Updated on: Aug 18, 2023 | 11:13 AM

Fancy Number Auction: ಫ್ಯಾನ್ಸಿ ನಂಬರ್‌ಗಳನ್ನ ಹರಾಜಿಗೆ ಇಟ್ಟಿದ್ದ ಸಾರಿಗೆ ಇಲಾಖೆ (Transport Department) ತನ್ನ ಬೊಕ್ಕಸವನ್ನ ತುಂಬಿಕೊಂಡಿದೆ. ಬೆಂಗಳೂರಿನ ಜಯನಗರ RTOಗೆ (Jayanagar RTO) ಸೇರಿದ KA-05/NJ ಸೀರಿಸ್ ನ ಸುಮಾರು 64 ಫ್ಯಾನ್ಸಿ ನಂಬರ್ (Fancy Numbers) ಗಳನ್ನು ನಿನ್ನೆ ಗುರುವಾರ ಹರಾಜಿಗೆ ಇಡಲಾಗಿತ್ತು. ಹೀಗೆ ಪ್ರತೀ ನಂಬರ್‌ಗಳು ಲಕ್ಷ ಲಕ್ಷ ಮೊತ್ತಕ್ಕೆ ಸೇಲ್ ಆಗಿದ್ದು, ಸಾರಿಗೆ ಇಲಾಖೆಗೆ ಹಣ ಹರಿದು ಬಂದ್ರೆ, ತಮ್ಮ ಇಷ್ಟದ ನಂಬರ್‌ ಪಡೆದವರು ಕೂಡಾ ಖುಷಿಯಾಗಿದ್ದಾರೆ.

ಒಂದೇ ಒಂದು ನಂಬರ್‌ಗೆ 20 ಲಕ್ಷ, ಮತ್ತೊಂದಕ್ಕೆ 3 ಲಕ್ಷ , ಇನ್ನೊಂದಕ್ಕೆ 2 ಲಕ್ಷ..ಹೀಗೆ ಪ್ರತೀ ನಂಬರ್‌ಗಳು ಅಲ್ಲಿ ಲಕ್ಷ ಲಕ್ಷ ಹಣಕ್ಕೆ ಸೇಲ್‌ ಆಗಿದ್ವು. ಫ್ಯಾನ್ಸಿ ನಂಬರ್‌ಗಳನ್ನ ಹರಾಜಿಗೆ ಇಟ್ಟಿದ್ದ ಸಾರಿಗೆ ಇಲಾಖೆ (Transport Department) ತನ್ನ ಬೊಕ್ಕಸವನ್ನ ತುಂಬಿಕೊಂಡಿದೆ. ಬೆಂಗಳೂರಿನ ಜಯನಗರ RTOಗೆ (Jayanagar RTO) ಸೇರಿದ KA-05/NJ ಸೀರಿಸ್ ನ ಸುಮಾರು 64 ಫ್ಯಾನ್ಸಿ ನಂಬರ್ (Fancy Numbers) ಗಳನ್ನು ನಿನ್ನೆ ಗುರುವಾರ ಹರಾಜಿಗೆ ಇಡಲಾಗಿತ್ತು. ಈ ಪೈಕಿ 24 ಫ್ಯಾನ್ಸಿ ನಂಬರ್‌ಗಳು ಹರಾಜಾಗಿದ್ದು, ಸಾರಿಗೆ ಇಲಾಖೆ ಬೊಕ್ಕಸಕ್ಕೆ ಬರೊಬ್ಬರಿ 48 ಲಕ್ಷ ಆದಾಯ ಹರಿದು ಬಂದಿದೆ ಎಂದು ಮಲ್ಲಿಕಾರ್ಜುನ್, ಅಡಿಷನಲ್ ಕಮೀಷನರ್, ರಾಜ್ಯ ಸಾರಿಗೆ ಇಲಾಖೆ ತಿಳಿಸಿದ್ದಾರೆ.

ಅಷ್ಟಕ್ಕೂ ಹರಾಜಿನಲ್ಲಿ ಹೆಚ್ಚು ಮೊತ್ತಕ್ಕೆ ಬಿಕರಿ ಆದ ನಂಬರ್‌ಗಳು ಯಾವುವು ಅನ್ನೋದನ್ನ ನೋಡಿದ್ರೆ.
ನಂಬರ್‌ – ಹರಾಜು ಮೊತ್ತ
KAO5NJ- 0001 – 20 ಲಕ್ಷದ 75 ಸಾವಿರ ರುಪಾಯಿ
KAO5NJ- 0555- 3 ಲಕ್ಷದ 25 ಸಾವಿರ ರುಪಾಯಿ
KAO5NJ- 5555- 3ಲಕ್ಷದ 25 ಸಾವಿರ ರುಪಾಯಿ
KAO5NJ- 0007- 3 ಲಕ್ಷದ 25 ಸಾವಿರ ರುಪಾಯಿ
KAO5NJ- 0009 – 3 ಲಕ್ಷದ 25 ಸಾವಿರ ರುಪಾಯಿ
KAO5NJ-9999- 3 ಲಕ್ಷದ ಐದು ಸಾವಿರ ರುಪಾಯಿ
KAO5NJ-7777- 2ಲಕ್ಷದ 35 ಸಾವಿರ ರುಪಾಯಿ

ಇದರ ಜೊತೆಗೆ, KAO5, NJ- 0001 ಅನ್ನೋ ನಂಬರ್‌ ಬರೋಬ್ಬರಿ 20 ಲಕ್ಷದ 75 ಸಾವಿರ ರುಪಾಯಿ ಮೊತ್ತಕ್ಕೆ ಸೇಲ್‌ ಆಗೋ ಮೂಲಕ ಸಾರಿಗೆ ಇಲಾಖೆ ಇತಿಹಾಸದಲ್ಲೇ ದಾಖಲೆ ಬರೆದಿದೆ.

ಅದ್ರಂತೆ ಇದೇ ಸೀರಿಸ್‌ನ 555 ನಂಬರ್‌ 3 ಲಕ್ಷದ 25 ಸಾವಿರ ರುಪಾಯಿಗೆ ಸೇಲ್‌ ಆದ್ರೆ. 5555 ನಂಬರ್‌ 3ಲಕ್ಷದ 25 ಸಾವಿರ ರುಪಾಯಿ ಮಾರಾಟ ಆಗಿದೆ. 0007 ಅನ್ನೋ ನಂಬರ್‌ 3 ಲಕ್ಷದ 25 ಸಾವಿರ ರುಪಾಯಿ ಹರಾಜು ಆಗಿದ್ದು, 0009 ಸಂಖ್ಯೆ 3 ಲಕ್ಷದ 25 ಸಾವಿರ ರುಪಾಯಿ ಬಿಡ್ ಆಗಿದೆ. ಅದ್ರಂತೆ 9999 ಅನ್ನೋ ಸಂಖ್ಯೆ 3 ಲಕ್ಷದ ಐದು ಸಾವಿರ ರುಪಾಯಿ ಮಾರಾಟ ಆಗಿದೆ. ಹೀಗೆ ಪ್ರತೀ ನಂಬರ್‌ಗಳು ಲಕ್ಷ ಲಕ್ಷ ಮೊತ್ತಕ್ಕೆ ಸೇಲ್ ಆಗಿದ್ದು, ಸಾರಿಗೆ ಇಲಾಖೆಗೆ ಹಣ ಹರಿದು ಬಂದ್ರೆ, ತಮ್ಮ ಇಷ್ಟದ ನಂಬರ್‌ ಪಡೆದವರು ಕೂಡಾ ಖುಷಿಯಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ