Chandrayaan-3 Moon Landing; ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಇಳಿಯವ ಆ ಕ್ಷಣ ಎಲ್ಲ ಭಾರತೀಯರನ್ನು ಪುಳಕಿತಗೊಳ್ಳಿಸಲಿದೆ: ಯಶವಂತ ಸರ್ದೇಶಪಾಂಡೆ, ರಂಗಕರ್ಮಿ
Chandrayaan-3 Landing: ಹಿಂದೊಮ್ಮೆ, ಯಶವಂತ ಸರ್ದೇಶಪಾಂಡೆ ಚಂದ್ರನ ಇಮೇಜ್ ಅಂತರಿಕ್ಷ ಕಾಯವೊಂದರಿಂದ ಪ್ರಾಪ್ತವಾದಾಗ ಯಾರ್ ಹೆಂಡ್ತಿ ಮಾರೀನೂ ಚಂದ್ರನಷ್ಟು ಛಂದ ಇಲ್ಲ ಅಂತ ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಹೇಳಿದ್ದನ್ನು ಇವತ್ತೂ ಪುನರಾವರ್ತಿಸಿದರು.
ಧಾರವಾಡ: ಭಾರತ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) (ISRO) ಅತೀವ ಹೆಮ್ಮೆ, ಅಭಿಮಾನಪಟ್ಟುಕೊಳ್ಳುವುದರ ಜೊತೆಗೆ ಇತಿಹಾಸ ನಿರ್ಮಿಸುವ ಸಮಯ ಹತ್ತಿರವಾಗುತ್ತಿದೆ. ಇಂದು ಸಂಜೆ 6.04 ಕ್ಕೆ ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ (landing) ಆಗಲಿದೆ. ನಾವು ನಿನ್ನೆಯಿಂದ ಹೇಳುತ್ತರುವಂತೆ ಎಲ್ಲ ಭಾರತೀಯರು ಈ ಅಪೂರ್ವ ಘಳಿಗೆಗಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ. ಥೇಟರ್ ಮತ್ತು ಸಿನಿಮಾಗಳಲ್ಲಿ ಕಮೆಡಿಯನ್ ಆಗಿ ದೊಡ್ಡ ಹೆಸರು ಮಾಡಿರುವ ರಂಗಕರ್ಮಿ ಯಶವಂತ ಸರ್ದೇಶಪಾಂಡೆ (Yashwant Sardeshpande) ಟಿವಿ9 ಕನ್ನಡ ವಾಹಿನಿಯೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಧಾರವಾಡದ ಪ್ರತಿನಿಧಿಯೊಂದಿಗೆ ಮಾತಾಡಿರುವ ಸರ್ದೇಶಪಾಂಡೆ, ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗುವ ಆ ಕ್ಷಣ ಎಲ್ಲ ಭಾರತೀಯರನ್ನು ಪುಳಕಿತಗೊಳ್ಳಿಸಲಿದೆ ಎಂದು ಹೇಳಿದರು. ಹಿಂದೊಮ್ಮೆ ಅವರು, ಚಂದ್ರನ ಇಮೇಜ್ ಅಂತರಿಕ್ಷ ಕಾಯವೊಂದರಿಂದ ಪ್ರಾಪ್ತವಾದಾಗ ಯಾರ್ ಹೆಂಡ್ತಿ ಮಾರೀನೂ ಚಂದ್ರನಷ್ಟು ಛಂದ ಇಲ್ಲ ಅಂತ ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಹೇಳಿದ್ದನ್ನು ಇವತ್ತೂ ಪುನರಾವರ್ತಿಸಿದರು.
ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ