ಯಾದಗಿರಿ, ಆ.19: ನಾವು ಬೈಕ್ ಓಡಿಸುವಾಗ ದಾರಿಯಲ್ಲಿ ಸಧ್ಯ ಟ್ರಾಫಿಕ್ ಪೊಲೀಸರು(Traffic Police) ಇಲ್ಲದೆ ಇದ್ರೆ ಸಾಕಪ್ಪ, ಇಲ್ಲವಾದರೆ ಹೆಲ್ಮೆಟ್ (Helmet) ಹಾಕಿಲ್ಲವೆಂದು ದಂಡ ಹಾಕಿಬಿಟ್ಟರೆ ಎಂದು ಬೇಡಿಕೊಳ್ಳುತ್ತಾ ನಮ್ಮ ಜೀವದ ರಕ್ಷಣೆಯ ಕವಚವನ್ನು ಹಾಕದೇ ನಿರ್ಲಕ್ಷ್ಯತನವನ್ನು ತೋರುತ್ತೇವೆ. ಅದು ಕೇವಲ ಟ್ರಾಫಿಕ್ ರೂಲ್ಸ್ ಪಾಲನೆ ಮಾಡಲು ಮಾತ್ರವಲ್ಲದೇ ನಮ್ಮ ಜೀವದ ರಕ್ಷಣೆ ಮಾಡುತ್ತದೆ ಎಂಬುದನ್ನು ಮರೆಯುತ್ತೇವೆ. ಆದರೆ, ಯಾದಗಿರಿಯ ವಡಗೇರ ಪೊಲೀಸರು ವಿನೂತನವಾಗಿ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿದ್ದಾರೆ. ಹೌದು, ದಂಡದ ಬದಲು ಹೆಲ್ಮೆಟ್ ನೀಡುತ್ತಿದ್ದಾರೆ.
ಜಿಲ್ಲೆಯ ವಡಗೇರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ಈ ಹಿನ್ನಲೆ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ನಿಂತು, ಹೆಲ್ಮೆಟ್ ಇಲ್ಲದೇ ಬಂದವರಿಗೆ ಹೆಲ್ಮೆಟ್ ಜೊತೆ ಹೂ ನೀಡುತ್ತಿದ್ದಾರೆ. ಬಳಿಕ ಟ್ರಾಫಿಕ್ ನಿಯಮಗಳ ಬಗ್ಗೆ ಮನವರಿಕೆ ಮಾಡಿ ಕಳುಹಿಸುತ್ತಿದ್ದು, ಪೊಲೀಸರ ಜನಸ್ನೇಹಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Sat, 19 August 23