ಮುದ್ದೇನಹಳ್ಳಿ ಸತ್ಯಸಾಯಿ ಆಶ್ರಮದಲ್ಲಿ ಇಂಡಿಯಾ ಸ್ಟಾರ್ಟ್ ಅಪ್​ ಉತ್ಸವ, 10 ಸಾವಿರ ಸ್ಟಾರ್ಟ್ ​​​ಅಪ್​​.. 500ಕ್ಕೂ ಹೆಚ್ಚು ಹೂಡಿಕೆದಾರರು ಭಾಗಿ

ಮುದ್ದೇನಹಳ್ಳಿ ಸತ್ಯಸಾಯಿ ಆಶ್ರಮದಲ್ಲಿ ಇಂಡಿಯಾ ಸ್ಟಾರ್ಟ್ ಅಪ್​ ಉತ್ಸವ, 10 ಸಾವಿರ ಸ್ಟಾರ್ಟ್ ​​​ಅಪ್​​.. 500ಕ್ಕೂ ಹೆಚ್ಚು ಹೂಡಿಕೆದಾರರು ಭಾಗಿ

Mangala RR
| Updated By: ಸಾಧು ಶ್ರೀನಾಥ್​

Updated on: Aug 12, 2023 | 5:48 PM

India Startup Festival 2023: ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿರುವ ಶ್ರೀ ಸತ್ಯಸಾಯಿ ಆಶ್ರಮದಲ್ಲಿ 2ನೇ ಆವೃತ್ತಿಯ ಇಂಡಿಯಾ ಸ್ಟಾರ್ಟ್ ಅಪ್ ಉತ್ಸವ ಹಮ್ಮಿಕೊಳ್ಳಲಾಗಿತ್ತು. 2 ದಿನಗಳ ಕಾಲ ನಡೆದ ಉತ್ಸವದಲ್ಲಿ ಬ್ರಿಟನ್, ಜಪಾನ್ ಸೇರಿದಂತೆ ಹಲವು ದೇಶಗಳು ಭಾಗಿಯಾಗಿದ್ವು. ಅಲ್ದೇ, 10ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಹಾಗೂ 500ಕ್ಕೂ ಹೆಚ್ಚು ಹೂಡಿಕೆದಾರರು ಪಾಲ್ಗೊಂಡಿದ್ರು.

ಗ್ರಾಮೀಣ ಭಾಗಗಳ ಬೆಳವಣಿಗೆಯ ದೃಷ್ಟಿಯನ್ನಿಟ್ಟುಕೊಂಡು ಇಂಡಿಯಾ ಸ್ಟಾರ್ಟ್‌ ಅಪ್ ಉತ್ಸವವನ್ನ ಹಮ್ಮಿಕೊಳ್ಳಲಾಗಿತ್ತು, ಸತ್ಯ ಸಾಯಿ ಆಶ್ರಮದಲ್ಲಿ ಅದ್ಧೂರಿ ಉತ್ಸವ ನಡೆಯಿತು. ರೈತ ದೇಶದ ಬೆನ್ನೆಲುಬು..ಹಳ್ಳಿಗಳು ದೇಶದ ಜೀವಾಳ.. ಭಾರತ ಅಭಿವೃದ್ಧಿ ಹೊಂದಬೇಕಾದ್ರೆ ಗ್ರಾಮೋದ್ಯೋಗದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿರುವ ಶ್ರೀ ಸತ್ಯಸಾಯಿ ಆಶ್ರಮದಲ್ಲಿ 2ನೇ ಆವೃತ್ತಿಯ ಇಂಡಿಯಾ ಸ್ಟಾರ್ಟ್ ಅಪ್ ಉತ್ಸವ ಹಮ್ಮಿಕೊಳ್ಳಲಾಗಿತ್ತು. 2 ದಿನಗಳ ಕಾಲ ನಡೆದ ಉತ್ಸವದಲ್ಲಿ ಬ್ರಿಟನ್, ಜಪಾನ್ ಸೇರಿದಂತೆ ಹಲವು ದೇಶಗಳು ಭಾಗಿಯಾಗಿದ್ವು. ಅಲ್ದೇ, 10ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಹಾಗೂ 500ಕ್ಕೂ ಹೆಚ್ಚು ಹೂಡಿಕೆದಾರರು ಪಾಲ್ಗೊಂಡಿದ್ರು.

ಸತ್ಯಸಾಯಿ ವಿವಿಯ ಸಂಸ್ಥಾಪಕರಾದ ಸದ್ಗುರು ಮಧುಸೂದನ್ ಅವರು ಎಕ್ಸಿಬೀಷನ್ ಕಾರ್ಯಕ್ರಮವನ್ನ ಉದ್ಘಾಟಿಸಿದ್ರು. ನಂತ್ರ ರೌಂಡ್ ಟೇಬಲ್ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಗ್ರಾಮ ಸ್ವರಾಜ್ ಯೋಜನೆ ಸೇರಿದಂತೆ ಹಲವು ವಿಚಾರ ಚರ್ಚಿಸಲಾಯ್ತು.

ಭಾರತದಲ್ಲಿ ಕೃಷಿ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದೆ. ಹೀಗಾಗಿ ಇದಕ್ಕೆ ಬೇಕಾದ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಸಲಾಯ್ತು. ರೈತರು ಎದುರಿಸ್ತಿರೋ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಯ್ತು. ಹಳ್ಳಿಗಳನ್ನ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ನಡೆದ ಉತ್ಸವದಿಂದ ಗ್ರಾಮಗಳಲ್ಲಿ ಹೊಸ ಬೆಳಕು ಮೂಡಲಿ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ