Killer Bees: ಕಡಲತೀರದಲ್ಲಿ ಮತ್ತೆ ಟೆನ್ಶನ್.. ಈ ವಿಷಕಾರಿ ನೊಣಗಳು ಕುಟುಕಿದರೆ ಜನ ರಕ್ತ ಒಡೆದು ಸಾಯುತ್ತಾರೆ

|

Updated on: Aug 22, 2023 | 4:30 PM

ಈ ವಿಷಕಾರಿ ನೊಣಗಳನ್ನು ಅಧ್ಯಯನ ಮಾಡಿದ ವಿಜ್ಞಾನಿಗಳು ಇವುಗಳನ್ನು ದಕ್ಷಿಣ ಆಫ್ರಿಕಾದ ನೊಣಗಳು ಎಂದು ಗುರುತಿಸಿದ್ದಾರೆ. ಇವು ಸುನಾಮಿಯಲ್ಲಿ ಸಮುದ್ರ ದಾಟಿ ನರಸಾಪುರದ ಕರಾವಳಿಯ ಹಳ್ಳಿಗಳಿಗೆ ಬಂದವು. ಇವು ಕುಟುಕಿದರೆ ರಕ್ತ ಒಡೆದು ಜನ ಸಾಯುತ್ತಾರೆ.

ವಿಷಪೂರಿತ ನೊಣಗಳು ಕರಿನಾಗರ ಹಾವುಗಳಿಗಿಂತ ಹೆಚ್ಚು ಅಪಾಯಕಾರಿ. ಈ ನೊಣಗಳು ಜೇನುನೊಣಗಳಂತೆ ಕಾಣಬರುತ್ತವಾದರೂ ಕಚ್ಚಿದರೆ, ಕುಟುಕಿದರೆ ಅಥವಾ ಜೋರಾಗಿ ಮನುಷ್ಯನಿಗೆ ಬಡಿದರೆ ಮುಗಿಯಿತು ಆ ವ್ಯಕ್ತಿಯ ಜೀವಿತ ಕತೆ. 2004 ರ ಸುನಾಮಿ ನಂತರ, ಸಮುದ್ರದ ಮೂಲಕ ನರಸಾಪುರಂ ಕರಾವಳಿ ಪ್ರದೇಶಕ್ಕೆ ಬಂದಿರುವ ಈ ವಿಷಕಾರಿ ನೊಣಗಳು ಪಶ್ಚಿಮ ಗೋದಾವರಿ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಮೊಟ್ಟೆಯಿಟ್ಟು ಸಂತಾನ ವೃದ್ಧಿಸಿಕೊಂಡಿದೆ. ಈಗ ಅಲ್ಲಿನ ಜನರಿಗೆ ಕಿರುಕುಳ ನೀಡುತ್ತಿದೆ. ಸುನಾಮಿ ಎಬ್ಬಿಸಿದ ಹಾವಳಿಯಿಂದ ಕರಾವಳಿಗರು ಬದುಕುಳಿದಿದ್ದರೂ ಈ ವಿಷ ನೊಣಗಳು ಅವರನ್ನು ಕಾಡುತ್ತಲೇ ಇವೆ. ಕರಾವಳಿ ಭಾಗದಲ್ಲಿ ಮರ ಹತ್ತಿದವರ ಮೇಲೆ ದಾಳಿ ಮಾಡುತ್ತಿವೆ. ಸರ್ಕಾರಿ ಅಧಿಕಾರಿಗಳು ಅವನ್ನು ನಿರ್ನಾಮ ಮಾಡಲು ಬೆಂಕಿ ಹಚ್ಚಿದರು. ಅವುಗಳಲ್ಲಿ ಬಹಳಷ್ಟನ್ನು ಕೊಂದರು. ಆದರೆ ಈಗ ಈ ವಿಷಕಾರಿ ಕೀಟಗಳು ಕರಾವಳಿ ಪ್ರದೇಶಗಳಿಂದ ಸಮೀಪದ ಹಳ್ಳಿಗಳು, ಪಟ್ಟಣಗಳಿಗೂ ಹರಡಿವೆ. ಅವು ಮಾನವನ ಶಬ್ದವನ್ನು ಕೇಳುತ್ತಿದ್ದಂತೆ ಏಕ್ದಂ ದಾಳಿ ಮಾಡಿಬಿಡುತ್ತವೆ.

ಈ ಹಿಂದೆ ಪೇರುಪಾಲೆಂ ಗ್ರಾಮದಲ್ಲಿ ವಿಷಕಾರಿ ಹುಳಗಳು ಕಚ್ಚಿ ಇಬ್ಬರು ಬಲಿಯಾಗಿದ್ದರು. ವಾಣಿಲಂಕಾ ಗ್ರಾಮದ ವ್ಯಕ್ತಿಯೊಬ್ಬರು ಇವುಗಳ ಸೋಂಕಿಗೆ ತುತ್ತಾಗಿ ಸಾವು ಬದುಕಿನೊಂದಿಗೆ ಹೋರಾಡಿ ಹೇಗೋ ಬದುಕು ಕಟ್ಟಿಕೊಂಡಿದ್ದಾರೆ. ಈ ವಿಷಕಾರಿ ನೊಣಗಳ ದಾಳಿಯಿಂದ ಕರಾವಳಿಯ ಅನೇಕ ಜನರು ತೀವ್ರ ಅಸ್ವಸ್ಥರಾಗಿದ್ದರು. ಹಲವು ಜಾನುವಾರುಗಳೂ ಸಾವನ್ನಪ್ಪಿವೆ.

ನರಸಾಪುರಂ ಮಂಡಲದ ರುಸ್ತುಂಬಾದ್​ ಪಂಚಾಯತ್‌ನ ಗಾದೆವಾರಿ ತೋಟದ ಹಸಿರು ತರಕಾರಿ ಗಿಡ ಮರಗಳಲ್ಲಿ ಪ್ರಸ್ತುತ ಇವು ಗೂಡುಕಟ್ಟುತ್ತಿವೆ. ವಿಷಕಾರಿ ನೊಣಗಳ ಭಯದಿಂದ ರೈತರು ಆ ತೋಟದ ಕಡೆಗೆ ಹೋಗಲು ಭಯಪಡುತ್ತಿದ್ದಾರೆ. ಆ ವಿಷಕಾರಿ ನೊಣಗಳು ತಮ್ಮ ಮೇಲೆ ದಾಳಿ ಮಾಡುತ್ತವೆ ಎಂದು ಅವರು ಭಯಭೀತರಾಗಿದ್ದಾರೆ. ರೈತರು ತೋಟದ ಕೆಲಸಕ್ಕೆ ಹೋಗದ ಕಾರಣ ತೋಟಗಳು ನೀರಿಲ್ಲದೆ ಒಣಗುತ್ತಿವೆ.

ಈ ವಿಷದ ನೊಣಗಳು ದಕ್ಷಿಣ ಆಫ್ರಿಕಾದಿಂದ ಹಾರಿಬಂದಿವೆ: ಈ ವಿಷಕಾರಿ ನೊಣಗಳನ್ನು ಅಧ್ಯಯನ ಮಾಡಿದ ವಿಜ್ಞಾನಿಗಳು ಇವುಗಳನ್ನು ದಕ್ಷಿಣ ಆಫ್ರಿಕಾದ ನೊಣಗಳು ಎಂದು ಗುರುತಿಸಿದ್ದಾರೆ. ಇವು ಸುನಾಮಿಯಲ್ಲಿ ಸಮುದ್ರ ದಾಟಿ ನರಸಾಪುರದ ಕರಾವಳಿಯ ಹಳ್ಳಿಗಳಿಗೆ ಬಂದವು. ಇವು ಕುಟುಕಿದರೆ ರಕ್ತ ಒಡೆದು ಜನ ಸಾಯುತ್ತಾರೆ. ಅದೊಮ್ಮೆ ಕಂದಾಯ ಇಲಾಖೆಯ ನಿರ್ದೇಶನದಂತೆ ಆಪರೇಷನ್ ರೆಸ್ಕ್ಯೂ ಹೆಸರಿನಲ್ಲಿ ಒಎನ್ ಜಿಸಿ ಸಹಯೋಗದಲ್ಲಿ ಈ ವಿಷಕಾರಿ ನೊಣಗಳನ್ನು ನಿರ್ನಾಮ ಮಾಡಲು ಗಿಡಗಳಿಗೆ ಬೆಂಕಿ ಹಚ್ಚಿ ಅವುಗಳನ್ನು ನಾಶಪಡಿಸಲಾಗಿತ್ತು. ಗ್ರಾಮಸ್ಥರು ಆಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಕಳೆದ ಮೂರು ವರ್ಷಗಳಿಂದ ಅದರ ಕುರುಹು ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಈ ವಿಷಕಾರಿ ನೊಣಗಳು ಮತ್ತೆ ಹಳ್ಳಿಗಳಲ್ಲಿ ಕಾಣಿಸಿಕೊಂಡಿವೆ. ಇದರಿಂದ ಕರಾವಳಿಯ ಹಳ್ಳಿಗಳಲ್ಲಿ ಮತ್ತೆ ಭೀತಿ ಶುರುವಾಗಿದೆ. ಕೂಡಲೇ ಅಧಿಕಾರಿಗಳು ಸ್ಪಂದಿಸಿ ವಿಷಪೂರಿತ ನೊಣಗಳನ್ನು ಕೊಲ್ಲಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 22, 2023 04:29 PM