ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಅಕ್ಕಿ ಒದಗಿಸದಿರುವುದು ಸರಿಯಲ್ಲ ಅಂತ ರಾಜ್ಯದ ಬಿಜೆಪಿ ಸಂಸದರಿಗೆ ಹೇಳಿದ್ದೆ: ಬಿಎನ್ ಬಚ್ಚೇಗೌಡ, ಬಿಜೆಪಿ ಸಂಸದ
ಬಚ್ಚೇಗೌಡರು ಇನ್ನೂ 10 ತಿಂಗಳು ಕಾಲ ಸಂಸದರಾಗಿ ಮುಂದುವರಿಯುತ್ತಾರೆ. ಆದರೆ 81-ವರ್ಷ-ವಯಸ್ಸಿನ ಗೌಡರು ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಅಕ್ಕಿ ವಿಷಯದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಅಂತ ಹೇಳುತ್ತಿದ್ದಾರೆ. ಅವರು ಅದನ್ನು ಮೊದಲೇ ಹೇಳಿದ್ದರೆ ಕನ್ನಡಿಗರು ಅಪ್ರಿಸಿಯೇಟ್ ಮಾಡುತ್ತಿದ್ದರು!
ಚಿಕ್ಕಬಳ್ಳಾಪುರ: ಚುನಾವಣಾ ರಾಜಕಾರಣಕ್ಕೆ ಇಂದು ವಿದಾಯ ಹೇಳಿದ ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ (BN Bache Gowda) ನಗರದಲ್ಲಿಂದು ಸುದ್ದಿ ಗೋಷ್ಟಿ ನಡೆಸಿದರು. ಸಂಸತ್ತಿನಲ್ಲಿ ರಾಜ್ಯವನ್ನು ಪ್ರತಿನಿಧಿಸುವ 25 ಬಿಜೆಪಿ ಶಾಸಕರನ್ನು (BJP MPs) ಅವರಿ ಟೀಕಿಸಿದ್ದು ಪತ್ರಿಕಾ ಗೋಷ್ಟಿಯ ಪ್ರಮುಖ ಅಂಶವಾಗಿತ್ತು. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ (Anna Bhagya Scheme) ಅಕ್ಕಿ ಪೂರೈಸದಿರುವುದು ತಪ್ಪು ಎಂದು ಬಚ್ಚೇಗೌಡ ಹೇಳಿದರು. ರಾಜ್ಯ ಸರ್ಕಾರ ಅಕ್ಕಿಯನ್ನು ಉಚಿತವಾಗೇನೂ ಕೇಳಿರಲಿಲ್ಲ, ಹಣ ನೀಡುವುದಾಗಿ ಹೇಳಿತ್ತು. ಕೇಂದ್ರ ಸರ್ಕಾರ ಅಕ್ಕಿ ಪೂರೈದಿರುವುದು ಸರಿಯಲ್ಲ ಅಂತ ತಾನು ಬಿಜೆಪಿ ಸಂಸದರಿಗೆ ಹೇಳಿದ್ದೆ ಎಂದು ಬಚ್ಚೇಗೌಡ ಹೇಳಿದರು. ಬಿಡಿ, ಬಚ್ಚೇಗೌಡರು ಇನ್ನೂ 10 ತಿಂಗಳು ಕಾಲ ಸಂಸದರಾಗಿ ಮುಂದುವರಿಯುತ್ತಾರೆ. ಆದರೆ 81-ವರ್ಷ-ವಯಸ್ಸಿನ ಗೌಡರು ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಅಕ್ಕಿ ವಿಷಯದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಅಂತ ಹೇಳುತ್ತಿದ್ದಾರೆ. ಅವರು ಅದನ್ನು ಮೊದಲೇ ಹೇಳಿದ್ದರೆ ಕನ್ನಡಿಗರು ಅಪ್ರಿಸಿಯೇಟ್ ಮಾಡುತ್ತಿದ್ದರು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ