ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ನಗರದ ಜನರಲ್ ತಿಮ್ಮಯ್ಯ ಪ್ರತಿಮೆಗೆ ಕೆಎಸ್ ಆರ್ ಟಿಸಿ ಬಸ್, ನೆಲಕ್ಕುರುಳಿದ ಸೇನಾನಿ ಪ್ರತಿಮೆ
ಕೆ ಎಸ್ ಆರ್ ಟಿ ಸಿ ಬಸ್ಸೊಂದರ ಡ್ರೈವರ್ ಎದುರಿನಿಂದ ಬರುತ್ತಿದ್ದ ಪಿಕಪ್ ವಾಹನಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ನಿಯಂತ್ರಣ ತಪ್ಪಿ ತಿಮ್ಮಯ್ಯ ವೃತ್ತದಲ್ಲಿದ್ದ ಜನರಲ್ ಕೆ ಎಸ್ ತಿಮ್ಮಯ್ಯ ಅವರ ಪ್ರತಿಮೆಗೆ ಬಸ್ಸನ್ನು ಗುದ್ದಿದ್ದಾನೆ.
ಮಡಿಕೇರಿ: ಸಮೀಕ್ಷೆಯೊಂದರ ಪ್ರಕಾರ ರಸ್ತೆ ಅಪಘಾತಗಳು (road mishaps) ಅದರಲ್ಲೂ ವಿಶೇಷವಾಗಿ ಹೆದ್ದಾರಿಗಳಲ್ಲಿ ವರದಿಯಾಗುವಂಥವುಗಳ ಪೈಕಿ ಹೆಚ್ಚಿನವು ಬೆಳಗಿನ ಜಾವ ಸಂಭವಿಸುತ್ತವೆ. ಪ್ರಾಯಶಃ ವಾಹನಗಳನ್ನು ಓಡಿಸುವವರು ರಾತ್ರಿಯೆಲ್ಲ ಸ್ಟೀರಿಂಗ್ ಮೇಲೆ (on the wheel) ಕೂತಿರುವ ಕಾರಣ ಮಂಪರು ಆವರಿಸಿರುತ್ತದೆ. ಮಡಿಕೇರಿ ನಗರದಲ್ಲಿ (Madikeri town) ಸೋಮವಾರ ಬೆಳಗ್ಗೆ ಇದೇ ಕಾರಣಕ್ಕೆ ಅಪಘಾತವೊಂದು ಸಂಭವಿಸಿರುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಒಡೆತನಕ್ಕೆ ಸೇರಿದ ಬಸ್ಸೊಂದರ ಡ್ರೈವರ್ ಎದುರಿನಿಂದ ಬರುತ್ತಿದ್ದ ಪಿಕಪ್ ವಾಹನಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ನಿಯಂತ್ರಣ ತಪ್ಪಿ ತಿಮ್ಮಯ್ಯ ವೃತ್ತದಲ್ಲಿದ್ದ ಜನರಲ್ ಕೆ ಎಸ್ ತಿಮ್ಮಯ್ಯ ಅವರ ಪ್ರತಿಮೆಗೆ ಬಸ್ಸನ್ನು ಗುದ್ದಿದ್ದಾನೆ. ಬಸ್ಸು ಸಾಕಷ್ಟು ವೇಗದಲ್ಲಿ ಓಡುತ್ತಿರಬಹುದು ಯಾಕೆಂದರೆ ಢಿಕ್ಕಿಯ ರಭಸಕ್ಕೆ ಪ್ರತಿಮೆಯೇ ಉರುಳಿ ಬಿದ್ದಿದೆ. ಅದೃಷ್ಟವಶಾತ್, ಚಾಲಕನಿಗೆ ಮತ್ತು ಬಸಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ