ಹಬ್ಬಗಳ ಮಾಸ ಶ್ರಾವಣದ ಮೊದಲ ಶನಿವಾರ ಚಿತ್ರದುರ್ಗದ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಗೆ ಸಾಲುಗಟ್ಟಿದ ಭಕ್ತರು
ನಮಗೆಲ್ಲ ಗೊತ್ತಿರುವ ಶ್ರಾವಣ ಮಾಸದ ಸೋಮವಾರ ಮತ್ತು ಶನಿವಾರಗಳನ್ನು ಬಹು ವಿಶಿಷ್ಟ ಎಂದು ಪರಿಗಣಿಸಲಾಗುತ್ತದೆ. ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಶ್ರಾವಣ ಮಾಸದ ಸೋಮವಾರಗಳಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಚಿತ್ರದುರ್ಗ: ಶ್ರಾವಣ ಮಾಸ (month of Shravana) ಬಂತೆಂದರೆ ಹಬ್ಬಗಳ ಪರ್ವ ಶುರುವಾದ ಹಾಗೆ. ಈ ಮಂಗಳಕರ ತಿಂಗಳಲ್ಲೇ ನಾಗರ ಪಂಚಮಿ (Nag Panchami), ವರಮಹಾಲಕ್ಷ್ಮೀ ಹಬ್ಬ, ರಾಖಿ ಹುಣ್ಣಿಮೆ, ಪೊಲಾಲ ಅಮವಾಸ್ಯೆ ಮೊದಲಾದ ಹಬ್ಬಗಳು ಆಚರಿಸಲ್ಪಡುತ್ತವೆ. ನಮಗೆಲ್ಲ ಗೊತ್ತಿರುವ ಶ್ರಾವಣ ಮಾಸದ ಸೋಮವಾರ ಮತ್ತು ಶನಿವಾರಗಳನ್ನು ಬಹು ವಿಶಿಷ್ಟ ಎಂದು ಪರಿಗಣಿಸಲಾಗುತ್ತದೆ. ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಶ್ರಾವಣ ಮಾಸದ ಸೋಮವಾರಗಳಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಶ್ರಾವಣ ಮಾಸದ ಮೊದಲ ಶನಿವಾರದ ಅಂಗವಾಗಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ವಿಡಿಯೋದಲ್ಲಿ ಕಾಣುತ್ತಿರೋದು ದುರ್ಗದ ಒನಕೆ ಓಬವ್ವ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನಕ್ಕೆ (Anjaneya temple) ಬೆಳಗ್ಗೆಯಿಂದಲೇ ಭಕ್ತರು ಸಾಲುಸಾಲಾಗಿ ಆಗಿ ಅಗಮಿಸಿ ಆರಾಧನೆ ಸಲ್ಲಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos