No Salary: KKRTC ಸಾರಿಗೆ ನೌಕರರ ವೇತನದಲ್ಲಿ ವಿಳಂಬ- ನೌಕರರಿಂದ ಪ್ರತಿಭಟನೆ

| Updated By: ಸಾಧು ಶ್ರೀನಾಥ್​

Updated on: Aug 11, 2023 | 3:08 PM

ಯಾದಗಿರಿ: ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಜಾರಿಯಿಂದ ಕೆಲ ಸರ್ಕಾರಿ ನೌಕರರಿಗೆ ಸಂಬಳ ಆಗದೆ ಪರದಾಡುವಂತಾಗಿದೆ. KKRTC ಸಿಬ್ಬಂದಿಗೆ ಇನ್ನೂ ಕಳೆದ ತಿಂಗಳ ಸಂಬಳವೇ ಆಗಿಲ್ಲ. ಸಂಬಳ ಆಗದಿರುವುದಕ್ಕೆ ಯಾದಗಿರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾದಗಿರಿ: ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ (Shakti Scheme) ಜಾರಿಯಿಂದ ಕೆಲ ಸರ್ಕಾರಿ ನೌಕರರಿಗೆ ಸಂಬಳ ಆಗದೆ ಪರದಾಡುವಂತಾಗಿದೆ. KKRTC ಸಿಬ್ಬಂದಿಗೆ ಇನ್ನೂ ಕಳೆದ ತಿಂಗಳ ಸಂಬಳವೇ ಆಗಿಲ್ಲ. ಸಂಬಳ ಆಗದಿರುವುದಕ್ಕೆ ಯಾದಗಿರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ (Yadagiri KKRTC transport employees) ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸಾರಿಗೆ ನೌಕರರ ಸಂಘದಿಂದ ಈ ಪ್ರತಿಭಟನೆ ನಡೆದಿದೆ. ಬಸ್ ಚಾಲಕ ಹಾಗೂ ನಿರ್ವಾಹಕರು ಸೇರಿ ಹಲವರಿಂದ ಗುರುವಾರ ಪ್ರತಿಭಟನೆ ನಡೆಯಿತು. ಸಮಯಕ್ಕೆ ಸರಿಯಾಗಿ ಸಂಬಳ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಶಕ್ತಿ ಯೋಜನೆಯನ್ನ ನಾವು ಯಶಸ್ವಿಗೊಳಿಸಿದ್ದೇವೆ, ಆದ್ರೆ ನಮ್ಗೆ ಸಂಬಳ (salary) ಆಗ್ತಾಯಿಲ. ಶಕ್ತಿ ಯೋಜನೆ ಆರಂಭವಾದಾಗಿನಿಂದ ನಮಗೆ ಸಂಬಳ ನೀಡುವಲ್ಲಿ ವಿಳಂಬ ಆಗ್ತಾಯಿದೆ ಎಂದು ಆಕ್ರೋಶ ಹೊರಹಾಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ