ಯಲಬುರ್ಗ ಶಾಸಕ ಬಸವರಾಜ ರಾಯರೆಡ್ಡಿ ಇದಕ್ಕಿದ್ದಂತೆ ಔತಣವೇರ್ಪಡಿಸಿದ್ದು ಯಾಕೆ? ಹಾಗೇ ಸುಮ್ಮನೆ ಅಂದರು ಶಾಸಕ!

|

Updated on: Aug 12, 2023 | 5:23 PM

3 ಬಗೆಯ ಸಿಹಿತಿಂಡಿಗಳು, 3 ಬಗೆಯ ಪಲ್ಯ, ಜೋಳದ ರೊಟ್ಟಿ, ಚಪಾತಿ, ಸಜ್ಜೆರೊಟ್ಟಿ, ಮಿರ್ಚಿ ಭಜ್ಜಿ, ಹಪ್ಪಳ, ಅನ್ನ, ಸಾಂಬಾರು, ತಿಳಿಸಾರು, ಮಜ್ಜಿಗೆ-ಪ್ರಶಸ್ತವಾದ ಔತಣ! ಖುದ್ದು ರಾಯರೆಡ್ಡಿಯವರೇ ನಿಂತುಕೊಂಡು ಊಟ ಬಡಿಸುತ್ತಿರುವುದನ್ನು ನೋಡಬಹುದು.

ಕೊಪ್ಪಳ: ಕಾಂಗ್ರೆಸ್ ಸೆಟಪ್ ನಲ್ಲಿ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಕೆಲವು ಸಲ ರೆಬೆಲ್ ಶಾಸಕನ (rebek MLA) ಹಾಗೆ ಗೋಚರಿಸುತ್ತಾರೆ. ಇವತ್ತು ಕೊಪ್ಪಳದಲ್ಲಿ ಅವರು ಔತಣಕೂಟ (feast) ಏರ್ಪಡಿಸಿದ್ದು ಕಾಂಗ್ರೆಸ್ ಶಿಬಿರದಲ್ಲಿ ಕುತೂಹಲ ಮತ್ತು ಗೊಂದಲ ಮೂಡಿಸಿರುವುದು ಸುಳ್ಳಲ್ಲ. ಹಬ್ಬ ಅಲ್ಲ ಹುಣ್ಣಿಮೆ ಅಲ್ಲ, ಇವತ್ಯಾಕೆ ಊಟ? ನೂರಾರು ಜನ ಬಂದು ಔತಣಕೂಟದಲ್ಲಿ ಭಾಗವಹಿಸಿದ್ದರು. 3 ಬಗೆಯ ಸಿಹಿತಿಂಡಿಗಳು, 3 ಬಗೆಯ ಪಲ್ಯ, ಜೋಳದ ರೊಟ್ಟಿ, ಚಪಾತಿ, ಸಜ್ಜೆರೊಟ್ಟಿ, ಮಿರ್ಚಿ ಭಜ್ಜಿ, ಹಪ್ಪಳ, ಅನ್ನ, ಸಾಂಬಾರು, ತಿಳಿಸಾರು, ಮಜ್ಜಿಗೆ-ಪ್ರಶಸ್ತವಾದ ಔತಣ! ಖುದ್ದು ರಾಯರೆಡ್ಡಿಯವರೇ ನಿಂತುಕೊಂಡು ಊಟ ಬಡಿಸುತ್ತಿರುವುದನ್ನು ನೋಡಬಹುದು. ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಅವರು ಔತಣ ಮತ್ತು ರಾಜಕಾರಣದ ನಡುವೆ ಯಾವುದೇ ಸಂಬಂಧವಿಲ್ಲ, ಪ್ರತಿವರ್ಷ ಸಮಾಜದಲ್ಲಿ ಗುರುತಿಸಿಕೊಂಡವರಿಗೆ, ಅಧಿಕಾರಿಗಳಿಗೆ, ಮಾಧ್ಯಮದವರಿಗೆ ಮತ್ತು ಕಾರ್ಯಕರ್ತರಿಗೆ ಔತಣ ಏರ್ಪಡಿಸುವ ಹಾಗೆ ಈ ವರ್ಷವೂ ಆಯೋಜಿಸಿದ್ದೇನೆ, ಅಷ್ಟೇ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ