Bidar Centenary School: ಶತಮಾನದ ಬಾಲಕಿಯರ ಸರ್ಕಾರಿ ಶಾಲೆ ಶಿಥಿಲಾವಸ್ಥೆಯಲ್ಲಿದೆ

Bidar Centenary School: ಶತಮಾನದ ಬಾಲಕಿಯರ ಸರ್ಕಾರಿ ಶಾಲೆ ಶಿಥಿಲಾವಸ್ಥೆಯಲ್ಲಿದೆ

Suresh Naik
| Updated By: ಸಾಧು ಶ್ರೀನಾಥ್​

Updated on: Aug 04, 2023 | 5:39 AM

ಮೂರು ಕೋಣೆಗಳು ಉರ್ದು ಮಾಧ್ಯಮಕ್ಕೆ ಇನ್ನೂಳಿದ ಮೂರು ಕೂಣೆಗಳು ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಶತಮಾನದಷ್ಟು ಹಳೆಯದಾಗಿರುವ ಈ ಕಟ್ಟಡ ಯಾವಾಗ ಬೀಳುತ್ತದೋ ಅನ್ನೋ ಚಿಂತೆಯಲ್ಲಿ ಮಕ್ಕಳು ಪಾಠ ಕೇಳಬೇಕಾದ ಸ್ಥಿತಿ ಇಲ್ಲಿದೆ.

Bidar Centenary School: ಸ್ಟುಡೆಂಟ್​​ ಲೈಫ್​ ಈಸ್ ಗೋಲ್ಡನ್ ಲೈಫ್​ ಅಂತಾರೆ ಆದ್ರೆ ಈ ಶಾಲೆಯ ವಿದ್ಯಾರ್ಥಿನಿಯರಿಗೆ ಆ ಭಾಗ್ಯ ಮರೀಚಿಕೆಯಾಗಿದೆ. ಮಳೆಯಾದರೆ ಸೋರುವ, ಅಲ್ಲಲ್ಲಿ ಬಿರುಕು ಬಿಟ್ಟಿರುವ ಶಿಥಿಲಗೊಂಡ ಕಟ್ಟಡವೇ ಈ ಪ್ರೌಢ ಶಾಲೆಯ ವಿದ್ಯಾರ್ಥಿನಿಯರ ಕಲಿಕೆಯ ತಾಣವಾಗಿದೆ. 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುವ ಈ ಶಾಲೆ ಸೋರುತ್ತಿದ್ದು ವಿದ್ಯಾರ್ಥಿನಿಯರನ್ನ ಹೈರಾಣಾಗಿಸಿದೆ. ಶಿಥಿಲಾವಸ್ಥೆ ತಲುಪಿದ ಶತಮಾನದ ಸರಕಾರಿ ಕನ್ಯಾ ಪ್ರೌಢ ಶಾಲೆ…ಶತಮಾನಗಳಷ್ಟು ಹಳೆಯದಾದ ನವಾಬರ ಕಾಲದ ಕಟ್ಟಡದಲ್ಲಿಯೇ ವಿದ್ಯಾರ್ಥಿನಿಯರ ಓದು. ಹೌದು ಒಂದೂವರೆ ವರ್ಷದ ಹಿಂದೆ ನಿಜಾಮರ ಆಡಳಿತದಲ್ಲಿ ನಿರ್ಮಾಣಗೊಂಡಿರುವ ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ಸರಕಾರಿ ಬಾಲಕಿಯರ ಪ್ರೌಢ ಶಾಲೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ವಿದ್ಯಾರ್ಥಿನಿಯರು ಜೀವ ಭಯದಲ್ಲಿ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ರಾಜಕಾಣಿಗಳು ಇಚ್ಚಾಶಕ್ತಿಯ ಕೊರತೆಯಿಂದಾ ಪುರಾತನ ಪಾರಂಪರಿಕ ಕಟ್ಟಡ ಅಭಿವೃದ್ಧಿ ಕಾಣದೆ ಸೊರಗುತ್ತಿದೆ. ಸುಮಾರು 18 ಕೋಣೆಗಳು ಇಲ್ಲಿದ್ದು ಸುಮಾರು 12 ಕೋಣೆಗಳು ಸಂಪೂರ್ಣ ಕುಸಿದುಹೋಗಿದ್ದು ಇನ್ನುಳಿದ 6 ಆರು ಕೋಣೆಗಳು ಶಿಥಾಲವಸ್ಥೆಯಿದ್ದರೂ ಕೂಡಾ ಅಲ್ಲಿಯೇ ವಿದ್ಯಾರ್ಥಿನಿಯರಿಗೆ ಪಾಠ ಮಾಡಲಾಗುತ್ತಿದೆ.

Also Read: Bagalkot century school: ಶತಮಾನೋತ್ಸವದ ಅಂಚಿನಲ್ಲಿ ಮೇಲ್ಛಾವಣಿ ಕುಸಿದು, ಮಕ್ಕಳಿಗೆ ಆಕಾಶ ದರ್ಶನ ಭಾಗ್ಯ! ಇದು ಸರಕಾರಿ ಮಾದರಿ ಶಾಲೆ

ಮೂರು ಕೋಣೆಗಳು ಉರ್ದು ಮಾಧ್ಯಮಕ್ಕೆ ಇನ್ನೂಳಿದ ಮೂರು ಕೂಣೆಗಳು ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಶತಮಾನದಷ್ಟು ಹಳೆಯದಾಗಿರುವ ಈ ಕಟ್ಟಡ ಯಾವಾಗ ಬೀಳುತ್ತದೋ ಅನ್ನೋ ಚಿಂತೆಯಲ್ಲಿ ಮಕ್ಕಳು ಪಾಠ ಕೇಳಬೇಕಾದ ಸ್ಥಿತಿ ಇಲ್ಲಿದೆ. ಮಳೆಗಾಲದಲ್ಲಂತೂ ಇಡೀ ಕಟ್ಟಡ ಸೋರುತ್ತಿದ್ದು, ಇಲ್ಲಿ ಹೆಗ್ಗಣಗಳ ಕಾಟದಿಂದ ವಿದ್ಯಾರ್ಥಿನಿಯರು ಬೇಸತ್ತು ಹೋಗಿದ್ದಾರೆ. ಇಲ್ಲಿನ ಸಮಸ್ಯೆಯ ಬಗ್ಗೆ ಸಾಕಷ್ಟು ಸಲ ವಿದ್ಯಾರ್ಥಿನಿಯರು ಪ್ರತಿಭಟನೆ, ಮನವಿ ಮಾಡಿಕೊಂಡರೂ ಯಾವೊಬ್ಬ ಅಧಿಕಾರಿಯೂ ಕೂಡಾ ಮಕ್ಕಳ ಸಮಸ್ಯೆಯ ಬಗ್ಗೆ ಗಮನ ಹರಿಸಿಲ್ಲ. ಇದು ಸಹಜವಾಗಿಯೇ ಮಕ್ಕಳ ಅಸಮಾಧಾನಕ್ಕೆ ಕಾರಣವಾಗಿದೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ