ಕೆರೆಗಳಿಗೆ BBMP ಘನತ್ಯಾಜ್ಯ ಘಟಕದ ಕೊಳಚೆ ನೀರು ಬಿಟ್ಟು ಅವಾಂತರ: ಲಕ್ಷಾಂತರ ಮೀನುಗಳ ಮಾರಣಹೋಮ
ಕೆರೆಗೆ ಕೆಮಿಕಲ್ ನೀರು ಬಂದು 10 ಲಕ್ಷಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಿಕ್ಕನಾಗಮಂಗಲ ಗ್ರಾಮದಲ್ಲಿ ನಡೆದಿದೆ. 10 ಲಕ್ಷಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿದ್ದು, ಮೀನುಗಳ ಮಾರಣಹೋಮಕ್ಕೆ ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೇಕಲ್, ಆಗಸ್ಟ್ 20: ಕೆರೆಗಳಿಗೆ ಬಿಬಿಎಂಪಿ (BBMP) ಘನತ್ಯಾಜ್ಯ ಘಟಕದ ಕೊಳಚೆ ನೀರು ಬಿಟ್ಟ ಪರಿಣಾಮ ಕೆರೆಯಲ್ಲಿನ ಮೀನುಗಳ ಮಾರಣಹೋಮ ನಡೆದಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಿಕ್ಕನಾಗಮಂಗಲ ಗ್ರಾಮದಲ್ಲಿ ನಡೆದಿದೆ. 1 ಲಕ್ಷಕ್ಕೆ ಟೆಂಡರ್ ಪಡೆದು ಕೆರೆಯಲ್ಲಿ ಮೀನುಗಳ ಸಾಕಣೆ ಮಾಡಲಾಗುತಿತ್ತು. ಕೆರೆಗೆ ಕೆಮಿಕಲ್ ನೀರು ಬಂದು 10 ಲಕ್ಷಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿವೆ. ಕೆರೆಯಲ್ಲಿ ತೇಲುತ್ತಿರುವ ಮೀನುಗಳನ್ನು ಗುತ್ತಿಗೆದಾರರು ತೆರವು ಮಾಡುತ್ತಿದ್ದಾರೆ. ಮೀನುಗಳ ಮಾರಣಹೋಮಕ್ಕೆ ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.