ಅಮೇಜಾನ್: ವಿಶ್ವದ ದೈತ್ಯ ಕಂಪನಿಗೇ ಹ್ಯಾಕರ್ಗಳಿಂದ ಭರ್ಜರಿ ವಂಚನೆ -ಐಫೋನ್, ಲ್ಯಾಪ್ಟಾಪ್.. ಬೇಕಾದ್ದು ಬುಕ್ ಮಾಡಿ ದೋಖಾ ಮಾಡಿದ್ದಾರೆ!
ಅಮೆಜಾನ್ ಕಂಪನಿಗೆ ಮಣ್ಣೆರಚಿ ನೀರು ಕುಡಿಸ್ತಿದ್ದೋನ ಖತರ್ನಾಕ್ ಐಡಿಯಾ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗೋದು ಗ್ಯಾರಂಟಿ.. ಇವ್ನ ಹೆಸ್ರು ಚಿರಾಗ್ ಗುಪ್ತ. ಖಾಸಗಿ ಕಾಲೇಜಿನ ವಿದ್ಯಾರ್ಥಿ. ಮೊದ್ಲಿಗೆ ಚಿರಾಗ್ ಅಮೆಜಾನ್ ವೆಬ್ಸೈಟ್ನಲ್ಲಿ ಐಫೋನ್, ಲ್ಯಾಪ್ಟಾಪ್, ಇಯರ್ ಫೋನ್, ಹೀಗೆ ತನಗೆ ಬೇಕಾದ ದುಬಾರಿ ವಸ್ತುಗಳನ್ನೇ ಬುಕ್ ಮಾಡಿ ತರಿಸಿಕೊಳ್ತಿದ್ದ. ಹಣವನ್ನೂ ಪಾವತಿ ಮಾಡ್ತಿದ್ದ. ತಾನು ಬುಕ್ ಮಾಡಿದ ವಸ್ತು ಕೈ ಸೇರುತ್ತಿದ್ದಂತೆ ರಿಟರ್ನ್ ರಿಕ್ವೆಸ್ಟ್ ಕಳಿಸಿ ಕಳ್ಳಾಟ ಶುರು ಮಾಡ್ತಿದ್ದ.
ವಿಶ್ವದ ದೈತ್ಯ ಕಂಪನಿ ಅಮೇಜಾನ್ಗೇ ಹ್ಯಾಕರ್ಗಳಿಂದ ವಂಚನೆಯಾಗಿದೆ. ಅದೂ ಸಿನಿಮಾ ಸ್ಟೈಲ್ನಲ್ಲಿ ಹ್ಯಾಕ್ ಮಾಡಿ ಕೋಟಿ ಕೋಟಿ ವಂಚನೆ ಎಸಗಿದ್ದಾರೆ. ಯಶವಂತಪುರ ಪೊಲೀಸರ ತನಿಖೆ ವೇಳೆ ಈ ಸ್ಫೋಟಕ ಸತ್ಯ ಬಯಲಾಗಿದೆ. ಹ್ಯಾಕರ್ ಗಳು ವಿದೇಶದಲ್ಲಿದ್ದುಕೊಂಡು ಬಿಗ್ ಗೇಮ್ ಮೂಲಕ ವಂಚನೆ ಎಸಗಿದ್ದಾರೆ. ಒಟ್ಟು 13 ಜನರನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಹೌದು ನಿತ್ಯ ಕೋಟಿ ಕೋಟಿ ವ್ಯವಹಾರ ನಡೆಸೋ ಕಂಪನಿಗೆ ಗುನ್ನಾ ಇಟ್ಟಿದ್ದಾರೆ. ಆನ್ಲೈನ್ ಗ್ರಾಹಕರ ನಂಬಿಕಸ್ಥ ಕಂಪನಿಯನ್ನೇ ಯಾಮಾರಿಸಿದ್ದಾರೆ.. ಸಾಗರದಾಚೆ ಅಮೆರಿಕದಲ್ಲಿ ಕುಳಿತುಕೊಂಡೇ ಅಮೆಜಾನ್ ಕಂಪನಿಗೆ ಎಳ್ಳು ನೀರು ಕುಡಿಸ್ತಿದ್ದಾರೆ.
ಅಚ್ಚರಿ ಅಂದ್ರೂ ನೀವು ನಂಬಲೇಬೇಕು.. ಅಮೆಜಾನ್ ಕಂಪನಿಗೆ ಮಣ್ಣೆರೆಚಿ ನೀರು ಕುಡಿಸ್ತಿದ್ದೋನ ಖತರ್ನಾಕ್ ಐಡಿಯಾ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗೋದು ಗ್ಯಾರಂಟಿ.. ಯಾಕಂದ್ರೆ ಕಿಡಿಗೇಡಿಯೊಬ್ಬ ಮಾಡಿದ್ದ ಕೃತ್ಯ ಅಂಥದ್ದು ನೋಡಿ. ಇವ್ನ ಹೆಸ್ರು ಚಿರಾಗ್ ಗುಪ್ತ. ಖಾಸಗಿ ಕಾಲೇಜಿನ ವಿದ್ಯಾರ್ಥಿ. ಖತರ್ನಾಕ್ ಚಿರಾಗ್ ಅಂಡ್ ಗ್ಯಾಂಗ್ ಹಣ ಮಾಡೋಕೆ ಅಮೆಜಾನ್ ಕಂಪನಿಯನ್ನೇ ಟಾರ್ಗೆಟ್ ಮಾಡಿಕೊಂಡಿತ್ತು. ಮೊದ್ಲಿಗೆ ಚಿರಾಗ್ ಅಮೆಜಾನ್ ವೆಬ್ಸೈಟ್ನಲ್ಲಿ ಐಫೋನ್, ಲ್ಯಾಪ್ಟಾಪ್, ಇಯರ್ ಫೋನ್, ಹೀಗೆ ತನಗೆ ಬೇಕಾದ ದುಬಾರಿ ವಸ್ತುಗಳನ್ನೇ ಬುಕ್ ಮಾಡಿ ತರಿಸಿಕೊಳ್ತಿದ್ದ. ಹಣವನ್ನೂ ಪಾವತಿ ಮಾಡ್ತಿದ್ದ. ತಾನು ಬುಕ್ ಮಾಡಿದ ವಸ್ತು ಕೈ ಸೇರುತ್ತಿದ್ದಂತೆ ರಿಟರ್ನ್ ರಿಕ್ವೆಸ್ಟ್ ಕಳಿಸಿ ಕಳ್ಳಾಟ ಶುರು ಮಾಡ್ತಿದ್ದ.
ಚಿರಾಗ್ ಕೈಗೆ ವಸ್ತುಗಳು ಡೆಲಿವರಿ ಆಗ್ತಿದ್ದಂತೆ ಇವ್ನ ಗ್ಯಾಂಗ್ ಹಾಗೂ ಅಮೆರಿಕದಲ್ಲಿ ಕುಳಿತಿರೋ ಓರ್ವ ಕ್ರಿಮಿನಲ್ ಹ್ಯಾಕರ್ ಅಲರ್ಟ್ ಆಗ್ತಿದ್ದ. ಆ ಕ್ರಿಮಿ ಅಮೆಜಾನ್ ಕಂಪನಿಯ ಸರ್ವರನ್ನೇ ಹ್ಯಾಕ್ ಮಾಡಿ ಲಾಗಿನ್ ಆಗ್ತಿದ್ದ. ತಾನೇ ವಸ್ತು ರಿಟರ್ನ್ ಆಗಿದೆ ಅಂತ ಅಪ್ಡೇಟ್ ಮಾಡ್ತಿದ್ದ. ಗ್ರಾಹಕರಿಗೆ ಕಳಿಸಿದ್ದ ವಸ್ತು ರಿಟರ್ನ್ ಆಗಿದೆ ಅನ್ನೋ ಸ್ಟೇಟಸ್ ಅಪ್ಡೇಟ್ ಆಗ್ತಿದ್ದಂತೆ ಚಿರಾಗ್ ಅಕೌಂಟ್ಗೆ ಅಮೆಜಾನ್ ಕಂಪನಿಯಿಂದ ಹಣ ಬಂದು ಬೀಳ್ತಿತ್ತು! ಇತ್ತ ತನ್ನ ಬಳಿಯೇ ಇರ್ತಿದ್ದ ವಸ್ತುಗಳನ್ನ ಕಡಿಮೆ ರೇಟ್ಗೆ ಮಾರಾಟ ಮಾಡಿ, ಅದ್ರಿಂದ ಬಂದ ಹಣವನ್ನ ಗ್ಯಾಂಗ್ ಹಂಚಿಕೊಳ್ತಿತ್ತು ಎಂದು ಶಿವಪ್ರಕಾಶ್ ದೇವರಾಜ್, ಉತ್ತರ ವಿಭಾಗದ ಡಿಸಿಪಿ ಟಿವಿ9 ಗೆ ತಿಳಿಸಿದ್ದಾರೆ.
ಹೀಗೆ ಮೇಲಿಂದ ಮೇಲೆ ರಿಪೀಟ್ ಆಗಿತ್ತು.. ಯಾವಾಗ ವಸ್ತುಗಳು ರಿಟರ್ನ್ ಆಗ್ತಿಲ್ಲ ಅನ್ನೋದು ಅಮೆಜಾನ್ ಕಂಪನಿಗೆ ಗೊತ್ತಾಗಿತ್ತೋ ಆಗ್ಲೇ ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ಇಂಟ್ರೆಸ್ಟಿಂಗ್ ಕೇಸ್ ಕೈಗೆತ್ತಿಕೊಂಡ ಪೊಲೀಸ್ರು ಚಿರಾಗ್ನ ಹೆಡೆಮುರಿ ಕಟ್ಟಿದ್ದಾರೆ. ಉಳಿದ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಸದ್ಯ ಆರೋಪಿಯಿಂದ 15ಕ್ಕೂ ಹೆಚ್ಚು ಐಫೋನ್, ಲ್ಯಾಪ್ಟಾಪ್, ಇಯರ್ ಫೋನ್, ಎಸಿ, ಐಮ್ಯಾಕ್ ಸಿಸ್ಟಮ್ ಸೇರಿದಂತೆ 30 ಲಕ್ಷ ಮೌಲ್ಯದ 23ಕ್ಕೂ ಹೆಚ್ಚು ವಸ್ತುಗಳನ್ನ ರಿಕವರಿ ಮಾಡಿಕೊಂಡಿದ್ದಾರೆ. ಅಮೆಜಾನ್ ಕಂಪನಿಯಲ್ಲಿ ಕೆಲ್ಸ ಮಾಡ್ತಿರೋರ ಬಗ್ಗೆಯೂ ಅನುಮಾನ ಮೂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಇಂಥದ್ದೇ ಪ್ರಕರಣಗಳು ದೇಶಾದ್ಯಂತ ದಾಖಲಾಗಿರೋದು ಬೆಳಕಿಗೆ ಬಂದಿದೆ. ಬರೋಬ್ಬರಿ 25 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಶಂಕೆ ಮೂಡಿದೆ. ಅಮೆರಿಕಾದಲ್ಲಿ ಅಡಗಿರೋ ಹ್ಯಾಕರ್ ಜಾಲ ದೇಶಾದ್ಯಂತ ಬೇರೂರಿರೋ ಅನುಮಾನವಿದ್ದು, ಪೊಲೀಸ್ರು ಬಲೆ ಬೀಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ