ಪ್ಲಾಸ್ಟಿಕ್ ಡಬ್ಬದಲ್ಲಿ ತಲೆತೂರಿಸಿಕೊಂಡ ಬೀದಿ ನಾಯಿ -ಅಂಕೋಲಾ KSRTC ಬಸ್ ಡ್ರೈವರ್ ಏನು ಮಾಡಿದರು ನೋಡಿ!
ಕುತ್ತಿಗೆಗೆ ಬಿದ್ದ ಡಬ್ಬದಿಂದಾಗಿ ಕಣ್ಣುಕಾಣದೇ ರಸ್ತೆಯಲ್ಲಿ ಹೇಗೆ ಬೇಕೋ ಹಾಗೆ ಆ ಶ್ವಾನ ತಿರುಗಾಡುತಿತ್ತು. ಅದಕ್ಕೆ ಎದುರಾದ ಕೆಎಸ್ ಆರ್ ಟಿ ಸಿ ಬಸ್ ಚಾಲಕ ಆನಂದ್ ಹುಲಸ್ವಾರ್ ಎಂಬವವರು ಬಸ್ ನಿಲ್ಲಿಸಿ ಕೊನೆಗೂ ಶ್ವಾನದ ತಲೆಗೆ ಸಿಲುಕಿದ್ದ ಪ್ಲಾಸ್ಟಿಕ್ ಡಬ್ಬವನ್ನು ತೆಗೆದು ಶ್ವಾನದ ಜೀವ ರಕ್ಷಿಸಿದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬೆಳಬಾರ ಗ್ರಾಮದಲ್ಲಿ ಬೀದಿ ನಾಯಿಯೊಂದು (street dog) ಪ್ಲಾಸ್ಟಿಕ್ ಡಬ್ಬದಲ್ಲಿ (street dog) ಇದ್ದ ಆಹಾರ ತಿನ್ನಲು ಹೋಗಿ ಅದರಲ್ಲಿ ತನ್ನ ಕುತ್ತಿಗೆಯನ್ನು ಸಿಲುಕಿಸಿಕೊಂಡು ಹೊರಬರಲಾರದೇ ಒದ್ದಾಡುತಿತ್ತು. ಬೀದಿ ನಾಯಿಯಾದ್ದರಿಂದ ಜನರು ಇದರ ಪರಿಸ್ಥಿತಿ ನೋಡಿ ನಗುತ್ತಿದ್ದರೆ, ಕೆಲವರು ತಮಗೆ ಯಾಕೆ ಅದರ ಊಸಾಬರಿ ಎಂದು ರಕ್ಷಣೆಗೆ ಹೋಗದೇ ಸುಮ್ಮನಿದ್ರು.
ಶ್ವಾನ ಪರದಾಟ..
ಇನ್ನು ಇತ್ತ ಕುತ್ತಿಗೆಗೆ ಬಿದ್ದ ಡಬ್ಬದಿಂದಾಗಿ ಕಣ್ಣುಕಾಣದೇ ರಸ್ತೆಯಲ್ಲಿ ಹೇಗೆ ಬೇಕೋ ಹಾಗೆ ಆ ಶ್ವಾನ ತಿರುಗಾಡುತಿತ್ತು. ಅದಕ್ಕೆ ಎದುರಾದ ಕೆಎಸ್ ಆರ್ ಟಿ ಸಿ ಬಸ್ ಚಾಲಕ ಆನಂದ್ ಹುಲಸ್ವಾರ್ (Ankola KSRTC bus driver) ಎಂಬವವರು ಬಸ್ ನಿಲ್ಲಿಸಿ ಕೊನೆಗೂ ಶ್ವಾನದ ತಲೆಗೆ ಸಿಲುಕಿದ್ದ ಪ್ಲಾಸ್ಟಿಕ್ ಡಬ್ಬವನ್ನು ತೆಗೆದು ಶ್ವಾನದ ಜೀವ ರಕ್ಷಿಸಿ ಮಾನವೀಯತೆ (Humanity) ಮೆರೆದರು. ಚಾಲಕನ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.