ಚಿಕ್ಕಮಗಳೂರು: ಮಂಗಳೂರಿನಿಂದ ಬಂದ 340 ಕೆಜಿ ತೂಕದ ಸಮುದ್ರ ಮೀನು; 1 ಕೆಜಿಗೆ ಸಾವಿರ ಕೊಡ್ತಿವಿ ಅಂದ್ರು ಸಿಗ್ತಿಲ್ಲ ಅಂಬೂರು ಫಿಶ್
ಚಿಕ್ಕಮಗಳೂರು ನಗರದ ಖಾಸಗಿ ಮೀನು ಅಂಗಡಿಗೆ ಮಂಗಳೂರಿನಿಂದ 340 ಕೆ.ಜಿ ತೂಕದ ಬೃಹತ್ ಸಮುದ್ರ ಮೀನು ಬಂದಿದೆ. ಭಾರೀ ಗಾತ್ರದ ಮೀನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದು, ಇದಕ್ಕೆ ಅಂಬೂರು ಮೀನು ಎಂದು ಕರೆಯಲಾಗುತ್ತದಯಂತೆ.
Important Highlight
ಚಿಕ್ಕಮಗಳೂರು, ಆ.20: ಮಂಗಳೂರಿನಿಂದ 340 ಕೆ.ಜಿ ತೂಕದ ಬೃಹತ್ ಸಮುದ್ರ ಮೀನು, ಚಿಕ್ಕಮಗಳೂರು (Chikkamagalur) ನಗರದ ಖಾಸಗಿ ಮೀನು ಅಂಗಡಿಗೆ ಬಂದಿದೆ. ಭಾರೀ ಗಾತ್ರದ ಮೀನು(Fish) ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದು, ಇದಕ್ಕೆ ಅಂಬೂರು ಮೀನು ಎಂದು ಕರೆಯಲಾಗುತ್ತದಯಂತೆ. ಈ ಬೃಹತ್ ಮೀನು ಖರೀದಿ ಮಾಡಲು ಗ್ರಾಹಕರು ಮುಗಿಬಿದ್ದಾರೆ. ಆದರೆ, ದುರಾದೃಷ್ಟವಶಾತ್1 ಕೆಜಿ 1000 ಕೊಡ್ತಿವಿ ಅಂದರೂ ಅಂಬೂರು ಫಿಶ್ ಸಿಗುತ್ತಿಲ್ಲ. ಇನ್ನು ಸೌದಿ ಅರೇಬಿಯಾದಲ್ಲಿ ಈ ಮೀನಿಗೆ ಹೆಚ್ಚು ಬೇಡಿಕೆಯಿದ್ದು, ಮೊದಲ ಬಾರಿಗೆ ಖಾಸಗಿ ಮೀನು ಅಂಗಡಿ ಮಾಲೀಕ ಬೃಹತ್ ಗಾತ್ರದ ಅಂಬೂರು ಮೀನು ತರಿಸಿದ್ದರು. ಈ ವೇಳೆ ಗ್ರಾಹಕರ ಉತ್ಸಾಹ ನೋಡಿ ಮಾಲೀಕ ಮೀನಿನ ದರ ಹೆಚ್ಚಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ