ಮಕ್ಕಳೇ ಬರುತ್ತಿಲ್ಲ, ಒಂದೇ ಜಿಲ್ಲೆಯಲ್ಲಿ 13 ಸರ್ಕಾರಿ ಶಾಲೆಗಳು ಬಂದ್ ಆಗಿವೆ!
chamarajanagar government school: ಒಂದು ಕಡೆ, ಶೂನ್ಯ ದಾಖಲಾತಿ ಹಿನ್ನೆಲೆ ಶಾಲೆಗೆ ಬೀಗ ಜಡಿದ ಶಿಕ್ಷಣ ಇಲಾಖೆ, ಮತ್ತೊಂದೆಡೆ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಹಿನ್ನೆಲೆ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಕಡೆ ಮುಖ ಮಾಡುತ್ತಿಲ್ಲ. ಬಾಯಿ ಮಾತಿಗೆ ಸರ್ಕಾರಿ ಶಾಲೆ ಉಳಿಸಿ ಎನ್ನುತ್ತಿರುವ ಸರ್ಕಾರ ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯಲ್ಲಿ ಭಾರಿ ಕುಸಿತ ಕಂಡಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇಅರಸ್ ವಿಷಾದ ವ್ಯಕ್ತಪಡಿಸಿದರು.
ಒಂದೇ ಜಿಲ್ಲೆಯಲ್ಲಿ 13 ಸರ್ಕಾರಿ ಶಾಲೆಗಳು (government school) ಬಂದ್ ಆಗಿವೆ. ಚಾಮರಾಜನಗರ (chamarajanagar) ಜಿಲ್ಲೆಯಲ್ಲಿ 13 ಸರ್ಕಾರಿ ಶಾಲೆಗೆ ಬೀಗ ಬಿದ್ದಿದೆ. ಶೂನ್ಯ ದಾಖಲಾತಿ ಹಿನ್ನೆಲೆ ಶಿಕ್ಷಣ ಇಲಾಖೆ ಬೀಗ ಜಡಿದಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಹಿನ್ನೆಲೆ, ವಿದ್ಯಾರ್ಥಿಗಳು (students) ಶಾಲೆಯಿಂದ ದೂರ ಉಳಿದಿದ್ದಾರೆ. ಶಾಲೆಗಳನ್ನ ಮುಚ್ಚಿರುವ ಕುರಿತು ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಮಾಹಿತಿ ನೀಡಿದ್ದಾರೆ. ಒಂದು ಕಡೆ, ಶೂನ್ಯ ದಾಖಲಾತಿ ಹಿನ್ನೆಲೆ ಶಾಲೆಗೆ ಬೀಗ ಜಡಿದ ಶಿಕ್ಷಣ ಇಲಾಖೆ, ಮತ್ತೊಂದೆಡೆ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಹಿನ್ನೆಲೆ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಕಡೆ ಮುಖ ಮಾಡುತ್ತಿಲ್ಲ. ಬಾಯಿ ಮಾತಿಗೆ ಸರ್ಕಾರಿ ಶಾಲೆ ಉಳಿಸಿ ಎನ್ನುತ್ತಿರುವ ಸರ್ಕಾರ ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯಲ್ಲಿ ಭಾರಿ ಕುಸಿತ ಕಂಡಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇಅರಸ್ ವಿಷಾದ ವ್ಯಕ್ತಪಡಿಸಿದರು.
ಚಾಮರಾಜನಗರ ತಾಲೂಕಿನ 5 ಶಾಲೆಗಳು, ಗುಂಡ್ಲುಪೇಟೆ ತಾಲೂಕಿನ 5 ಶಾಲೆಗಳು ಬಂದ್ ಆಗಿವೆ. ಕೊಳ್ಳೆಗಾಲದ ಲಕ್ಕರಸನಪಾಳ್ಯ, ಯಳಂದೂರಿನ ದಾಸನಹುಂಡಿ, ಸಾನೆಗಾಲ, ಕಳ್ಳಿಪುರ, ಪುಟ್ಟೆಗೌಡನಹುಂಡಿ, ಉರ್ದು ಶಾಲೆ ಕಿರಗಸೂರು, ಚಾಮರಾಜನಗರ ತಾಲೂಕಿನ ಹೊಸಳ್ಳಿ ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಗುಂಡ್ಲುಪೇಟೆಯ ಮೇಲುಕಾಮನಹಳ್ಳಿ, ಉತ್ತೇನಗೆರೆ ಹುಂಡಿಮ, ಹೊಸಪುರ, ಬರಗಿ ಕಾಲೋನಿ, ಹೊಸಪುರ ಮತ್ತು ಮರಲಾಪುರ ಶಾಲೆಗಳು ಬಂದ್ ಆಗಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ