Love and Life : 24 ವರ್ಷದವಳಿದ್ದಾಗ ಹಿರಿಯರು ನನ್ನ ಮದುವೆಯನ್ನು ನಿಶ್ಚಯಿಸಿದರು. ಮುಂದಿನ 6 ತಿಂಗಳಿಗೆ ಮದುವೆಯೂ ನಡೆಯಿತು. ಗಂಡನಮನೆಯವರು ಕಟ್ಟಾ ಸಂಪ್ರದಾಯವಾದಿಗಳು. ವಾಸ್ತವಕ್ಕೆ ದೂರವಾದ ಅವರ ನಿರೀಕ್ಷೆಗಳನ್ನು ತಣಿಸುವುದಕ್ಕೆ ನಾನು ಬಹಳೇ ಕಷ್ಟಪಡುತ್ತ ಹೋದೆ. ಅಷ್ಟೊತ್ತಿಗೆ ಗರ್ಭಿಣಿಯೂ ಆದೆ. ಮೊಮ್ಮಗು ಬಂದಮೇಲೆ ಅವರು ಬದಲಾಗಬಹುದು ಎಂದು ನಿರೀಕ್ಷಿಸಿದೆ. ಆದರೆ ಅದು ಅಸಾಧ್ಯವೆನ್ನಿಸಿ ಗಂಡನಿಂದ ದೂರ ಉಳಿಯುವ ನಿರ್ಧಾರ ಮಾಡಿದೆ. ಮಗಳಿಗೆ 8 ತಿಂಗಳು ತುಂಬುತ್ತಿದ್ದಂತೆ ಅಪ್ಪಅಮ್ಮನ ಮನೆಗೆ ಮರಳಿದೆ. ಸ್ವಂತ ಕ್ಲಿನಿಕ್ (Clinic) ಮಾಡಿದೆ. ಆದರೆ ಮೂರು ವರ್ಷಗಳ ನಂತರ ಗಂಡ ನನ್ನ ಬಳಿ ಬಂದು, ನನ್ನ ಬದುಕಿನ ಎಲ್ಲಾ ಏರಿಳಿತಗಳೊಂದಿಗೆ ಭಾಗಿಯಾದರು. 20 ವರ್ಷಗಳಿಂದಲೂ ನಮ್ಮದು ಅದೇ ವಿಶ್ವಾಸ ಅದೇ ಪ್ರೀತಿ’ ಎನ್ನುತ್ತಾರೆ ಸೆಕ್ಸ್ ಮತ್ತು ರಿಲೇಷನ್ಶಿಪ್ ಕೋಚ್ ಡಾ. ಸಬೀಹಾ ಇನಾಮ್ದಾರ್.
ಇದನ್ನೂ ಓದಿ : Viral: ಬಾತ್ರೂಮ್ಗೆ ಹೋಗುವಾಗಲೂ ಉದ್ಯೋಗಿಗಳು ಸೈನ್ಔಟ್ ಮಾಡಬೇಕೆನ್ನುತ್ತಿರುವ ಮೇಲಧಿಕಾರಿ
ಯಾವತ್ತೂ ಪ್ರೀತಿ ಮತ್ತು ಬದುಕಿಗೆ ಎರಡನೇ ಅವಕಾಶ (Second Chance) ಕೊಟ್ಟು ನೋಡಬೇಕು ಎನ್ನುವ ಡಾ. ಸಬೀಹಾ. ಇವರ ಬದುಕಿನ ಕಥಾನಕವನ್ನು ಇನ್ಸ್ಟಾಗ್ರಾಂನಲ್ಲಿ ಹಿಡಿದಿಟ್ಟಿದೆ officialpeopleofindia. 2 ಗಂಟೆಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 2 ಲಕ್ಷ ಜನರು ನೋಡಿದ್ದಾರೆ. 44,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
‘ನನ್ನ ಯಶಸ್ಸಿನ ಹಿಂದಿರುವ ಪ್ರಗತಿಪರ ವ್ಯಕ್ತಿ ನನ್ನ ಗಂಡ. ನಮ್ಮ ಪಯಣವನ್ನು ಹಿಂದಿರುಗಿ ನೋಡಿದರೆ ದುಃಸ್ವಪ್ನದಂತೆ ಕಾಣುತ್ತದೆ. ಅನೇಕ ತಿರುವು, ಏರಿಳಿತ, ಅನಿಶ್ಚಿತತೆ, ಜಗಳ, ಮೌನ, ತಪ್ಪು ತಿಳಿವಳಿಕೆ ಈ ಎಲ್ಲಾ ಪ್ರಕ್ಷುಬ್ಧತೆಗಳ ನಡುವೆಯೇ ನಾನು ಮತ್ತು ಮಗಳು ಫೈಝಾ ಬದುಕನ್ನು ಅನ್ವೇಷಿಸಬೇಕು ಎಂದು ಅವರು ಬಯಸಿದರು. ಜೀವನವು ಭವ್ಯವೂ ಸುಂದರವೂ ಆಗಿದೆ ಎಂಬುದನ್ನು ತೋರಿಸಿದರು. ಪರಸ್ಪರರ ವೈಯಕ್ತಿಕ ಮತ್ತು ಸ್ವಾತಂತ್ರ್ಯವನ್ನು ಗೌರವಿಸಲು ಕಲಿಸಿದರು. ನಾವು ನಾವಾಗಿಯೇ ಇರುವುದು ಹೇಗೆಂದು ತಿಳಿಸಿಕೊಟ್ಟರು. ಇಂದಿನ ಹುಡುಗರೂ ಇದನ್ನು ಅನುಸರಿಸಬೇಕು’ ಎನ್ನುತ್ತಾರೆ ಸಬೀಹಾ.
ಸೆಕ್ಸ್ ಮತ್ತು ರಿಲೇಷನ್ಶಿಪ್ ಕೋಚ್ ಆಗಿರುವ ಡಾ. ಸಬೀನಾ ಇನ್ಸ್ಟಾಗ್ರಾಂನಲ್ಲಿ ವಿಡಿಯೋಗಳ ಮೂಲಕ ಪ್ರೀತಿ, ಸಂಬಂಧ ಮತ್ತು ಲೈಂಗಿಕತೆಯ ಒಂದಕ್ಕೊಂದ ಹೇಗೆ ಪೂರಕವಾಗಿವೆ ಎಂಬ ಅರಿವನ್ನು ಬೆಳೆಸಲು ಪ್ರಯತ್ನಿಸುತ್ತಿರುತ್ತಾರೆ. ಇವುಗಳ ನಿರಂತರತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎನ್ನುವುದನ್ನು ವಿವರಿಸುತ್ತಿರುತ್ತಾರೆ.
ಇದನ್ನೂ ಓದಿ : Viral: ಬೆಂಗಳೂರು; ನಾಯಿಮಾಂಸ ಕಾನೂನುಬದ್ಧಗೊಳಿಸಿ; ಭಿತ್ತಿಫಲಕ ಹಿಡಿದ ಯುವಕನ ವಿರುದ್ಧ ನೆಟ್ಟಿಗರ ಆಕ್ರೋಶ
ಪ್ರೀತಿ ಸಂಬಂಧ ಅಥವಾ ಮದುವೆಯಾದ ನಂತರ ಯಾವುದೇ ಕಾರಣಕ್ಕೂ ಬದುಕಿನಲ್ಲಿ ಏನೇ ನಡೆದರೂ ಸಂಹವನ ಎನ್ನುವುದು ಬಹಳ ಮುಖ್ಯ. ತಮ್ಮ ಮುಂದಿನ ಜೀವನಕ್ಕೆ ಯಾರೇ ಅಥವಾ ಯಾವುದೇ ಸಂದರ್ಭವು ಅಡೆತಡೆಯಾದರೆ ಜೋಡಿಯು ಪರಸ್ಪರ ಚರ್ಚಿಸಬೇಕಾಗುತ್ತದೆ. ಅದಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಳುಬೀಳುಗಳನ್ನು ಅನುಭವಿಸಿ ಬಂಧವನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ಪರಸ್ಪರರ ಅರಿವು ಮತ್ತು ಪ್ರಯತ್ನ ಇರಬೇಕಾಗುತ್ತದೆ. ಆದರೆ, ಸೆಕೆಂಡ್ ಚಾನ್ಸ್ ಕೆಲವರನ್ನಷ್ಟೇ ಕೈಬೀಸಿ ಕರೆಯತ್ತದೆ, ಅದು ಉಳಿದವರನ್ನೂ ಅರಿವಿನ ಮೂಲಕ ಕರೆಯುವಂತಾಗಲಿ!
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:16 pm, Thu, 24 August 23