Viral Video: ಸೆಕೆಂಡ್ ಚಾನ್ಸ್​; ಅಂದು 8 ತಿಂಗಳ ಮಗುವಿನೊಂದಿಗೆ ತವರಿಗೆ ಮರಳಿದ್ದ ಡಾ ಸಬೀಹಾ ಇನಾಮ್ದಾರ್​, ಇಂದು?

Support : 'ಅಪ್ಪಟ ಸೊಸೆ'ಯನ್ನು ಅತ್ತೆಮಾವಂದಿರು ನಿರೀಕ್ಷಿಸಿದರು. ವೈದ್ಯಕೀಯ ಓದಿದ ಸೊಸೆ ಮಗುವನ್ನು ಕರೆದುಕೊಂಡು ತವರಿಗೆ ಮರಳಿ ಸ್ವಂತ ಕ್ಲಿನಿಕ್ ತೆರೆದಳು. ಆದರೆ ಹೆಂಡತಿಯ ಕನಸು ಮತ್ತು ತಮ್ಮಿಬ್ಬರ ಭವಿಷ್ಯವನ್ನು ಅರ್ಥ ಮಾಡಿಕೊಂಡ ಗಂಡ, ಅಪ್ಪ ಅಮ್ಮನ ಮಾತನ್ನು ಕಡೆಗಣಿಸಿ ವಾಪಾಸು ಹೆಂಡತಿಯೆಡೆ ಮನಸ್ಸು ಮಾಡಿದ. ಮುಂದೇನಾಯಿತು?

Important Highlight‌
Viral Video: ಸೆಕೆಂಡ್ ಚಾನ್ಸ್​; ಅಂದು 8 ತಿಂಗಳ ಮಗುವಿನೊಂದಿಗೆ ತವರಿಗೆ ಮರಳಿದ್ದ ಡಾ ಸಬೀಹಾ ಇನಾಮ್ದಾರ್​, ಇಂದು?
ಸೆಕ್ಸ್​ ಅಂಡ್ ರಿಲೇಷನ್​ಶಿಪ್ ಕೋಚ್​ ಡಾ ಸಬೀಹಾ ಇನಾಮ್ದಾರ ಗಂಡ ಮತ್ತು ಮಗಳೊಂದಿಗೆ
Follow us
ಶ್ರೀದೇವಿ ಕಳಸದ
|

Updated on:Aug 24, 2023 | 1:17 PM

Love and Life : 24 ವರ್ಷದವಳಿದ್ದಾಗ ಹಿರಿಯರು ನನ್ನ ಮದುವೆಯನ್ನು ನಿಶ್ಚಯಿಸಿದರು. ಮುಂದಿನ 6 ತಿಂಗಳಿಗೆ ಮದುವೆಯೂ ನಡೆಯಿತು. ಗಂಡನಮನೆಯವರು ಕಟ್ಟಾ ಸಂಪ್ರದಾಯವಾದಿಗಳು. ವಾಸ್ತವಕ್ಕೆ ದೂರವಾದ ಅವರ ನಿರೀಕ್ಷೆಗಳನ್ನು ತಣಿಸುವುದಕ್ಕೆ ನಾನು ಬಹಳೇ ಕಷ್ಟಪಡುತ್ತ ಹೋದೆ. ಅಷ್ಟೊತ್ತಿಗೆ ಗರ್ಭಿಣಿಯೂ ಆದೆ. ಮೊಮ್ಮಗು ಬಂದಮೇಲೆ ಅವರು ಬದಲಾಗಬಹುದು ಎಂದು ನಿರೀಕ್ಷಿಸಿದೆ. ಆದರೆ ಅದು ಅಸಾಧ್ಯವೆನ್ನಿಸಿ ಗಂಡನಿಂದ ದೂರ ಉಳಿಯುವ ನಿರ್ಧಾರ ಮಾಡಿದೆ. ಮಗಳಿಗೆ 8 ತಿಂಗಳು ತುಂಬುತ್ತಿದ್ದಂತೆ ಅಪ್ಪಅಮ್ಮನ ಮನೆಗೆ ಮರಳಿದೆ. ಸ್ವಂತ ಕ್ಲಿನಿಕ್ (Clinic) ಮಾಡಿದೆ. ಆದರೆ ಮೂರು ವರ್ಷಗಳ ನಂತರ ಗಂಡ ನನ್ನ ಬಳಿ ಬಂದು, ನನ್ನ ಬದುಕಿನ ಎಲ್ಲಾ ಏರಿಳಿತಗಳೊಂದಿಗೆ ಭಾಗಿಯಾದರು. 20 ವರ್ಷಗಳಿಂದಲೂ ನಮ್ಮದು ಅದೇ ವಿಶ್ವಾಸ ಅದೇ ಪ್ರೀತಿ’ ಎನ್ನುತ್ತಾರೆ ಸೆಕ್ಸ್​ ​ ಮತ್ತು ರಿಲೇಷನ್​ಶಿಪ್​ ಕೋಚ್​ ಡಾ. ಸಬೀಹಾ ಇನಾಮ್ದಾರ್​.

ಇದನ್ನೂ ಓದಿ : Viral: ಬಾತ್ರೂಮ್​ಗೆ ಹೋಗುವಾಗಲೂ ಉದ್ಯೋಗಿಗಳು ಸೈನ್​ಔಟ್​ ಮಾಡಬೇಕೆನ್ನುತ್ತಿರುವ ಮೇಲಧಿಕಾರಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಯಾವತ್ತೂ ಪ್ರೀತಿ ಮತ್ತು ಬದುಕಿಗೆ ಎರಡನೇ ಅವಕಾಶ (Second Chance) ಕೊಟ್ಟು ನೋಡಬೇಕು ಎನ್ನುವ  ಡಾ. ಸಬೀಹಾ. ಇವರ ಬದುಕಿನ ಕಥಾನಕವನ್ನು ಇನ್​ಸ್ಟಾಗ್ರಾಂನಲ್ಲಿ ಹಿಡಿದಿಟ್ಟಿದೆ officialpeopleofindia. 2 ಗಂಟೆಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 2 ಲಕ್ಷ ಜನರು ನೋಡಿದ್ದಾರೆ. 44,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಡಾ. ಸಬೀಹಾ ಮತ್ತು ಅಲಿ ‘ಸೆಕೆಂಡ್​ ಚಾನ್ಸ್​’ ನೋಡಿ

‘ನನ್ನ ಯಶಸ್ಸಿನ ಹಿಂದಿರುವ ಪ್ರಗತಿಪರ ವ್ಯಕ್ತಿ ನನ್ನ ಗಂಡ. ನಮ್ಮ ಪಯಣವನ್ನು ಹಿಂದಿರುಗಿ ನೋಡಿದರೆ ದುಃಸ್ವಪ್ನದಂತೆ ಕಾಣುತ್ತದೆ. ಅನೇಕ ತಿರುವು, ಏರಿಳಿತ, ಅನಿಶ್ಚಿತತೆ, ಜಗಳ, ಮೌನ, ತಪ್ಪು ತಿಳಿವಳಿಕೆ ಈ ಎಲ್ಲಾ ಪ್ರಕ್ಷುಬ್ಧತೆಗಳ ನಡುವೆಯೇ ನಾನು ಮತ್ತು ಮಗಳು ಫೈಝಾ ಬದುಕನ್ನು ಅನ್ವೇಷಿಸಬೇಕು ಎಂದು ಅವರು ಬಯಸಿದರು. ಜೀವನವು ಭವ್ಯವೂ ಸುಂದರವೂ ಆಗಿದೆ ಎಂಬುದನ್ನು ತೋರಿಸಿದರು. ಪರಸ್ಪರರ ವೈಯಕ್ತಿಕ ಮತ್ತು ಸ್ವಾತಂತ್ರ್ಯವನ್ನು ಗೌರವಿಸಲು ಕಲಿಸಿದರು. ನಾವು ನಾವಾಗಿಯೇ ಇರುವುದು ಹೇಗೆಂದು ತಿಳಿಸಿಕೊಟ್ಟರು. ಇಂದಿನ ಹುಡುಗರೂ ಇದನ್ನು ಅನುಸರಿಸಬೇಕು’ ಎನ್ನುತ್ತಾರೆ ಸಬೀಹಾ.

ಪ್ರೀತಿ ಮತ್ತು ಲೈಂಗಿಕತೆ ಎರಡು ನಾಣ್ಯದ ಮುಖಗಳು

ಸೆಕ್ಸ್​ ಮತ್ತು ರಿಲೇಷನ್​ಶಿಪ್​ ಕೋಚ್ ಆಗಿರುವ ಡಾ. ಸಬೀನಾ ಇನ್​ಸ್ಟಾಗ್ರಾಂನಲ್ಲಿ ವಿಡಿಯೋಗಳ ಮೂಲಕ ಪ್ರೀತಿ, ಸಂಬಂಧ ಮತ್ತು ಲೈಂಗಿಕತೆಯ ಒಂದಕ್ಕೊಂದ ಹೇಗೆ ಪೂರಕವಾಗಿವೆ ಎಂಬ ಅರಿವನ್ನು ಬೆಳೆಸಲು ಪ್ರಯತ್ನಿಸುತ್ತಿರುತ್ತಾರೆ. ಇವುಗಳ ನಿರಂತರತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎನ್ನುವುದನ್ನು ವಿವರಿಸುತ್ತಿರುತ್ತಾರೆ.

ಇದನ್ನೂ ಓದಿ : Viral: ಬೆಂಗಳೂರು; ನಾಯಿಮಾಂಸ ಕಾನೂನುಬದ್ಧಗೊಳಿಸಿ; ಭಿತ್ತಿಫಲಕ ಹಿಡಿದ ಯುವಕನ ವಿರುದ್ಧ ನೆಟ್ಟಿಗರ ಆಕ್ರೋಶ

ಪ್ರೀತಿ ಸಂಬಂಧ ಅಥವಾ ಮದುವೆಯಾದ ನಂತರ ಯಾವುದೇ ಕಾರಣಕ್ಕೂ ಬದುಕಿನಲ್ಲಿ ಏನೇ ನಡೆದರೂ ಸಂಹವನ ಎನ್ನುವುದು ಬಹಳ ಮುಖ್ಯ. ತಮ್ಮ ಮುಂದಿನ ಜೀವನಕ್ಕೆ ಯಾರೇ ಅಥವಾ ಯಾವುದೇ ಸಂದರ್ಭವು ಅಡೆತಡೆಯಾದರೆ ಜೋಡಿಯು ಪರಸ್ಪರ ಚರ್ಚಿಸಬೇಕಾಗುತ್ತದೆ. ಅದಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಳುಬೀಳುಗಳನ್ನು ಅನುಭವಿಸಿ ಬಂಧವನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ಪರಸ್ಪರರ ಅರಿವು ಮತ್ತು ಪ್ರಯತ್ನ ಇರಬೇಕಾಗುತ್ತದೆ. ಆದರೆ, ಸೆಕೆಂಡ್ ಚಾನ್ಸ್ ಕೆಲವರನ್ನಷ್ಟೇ ಕೈಬೀಸಿ ಕರೆಯತ್ತದೆ, ಅದು ಉಳಿದವರನ್ನೂ ಅರಿವಿನ ಮೂಲಕ ಕರೆಯುವಂತಾಗಲಿ!

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:16 pm, Thu, 24 August 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು