Viral Video: ಲಂಡನ್; ಎರಡು ತಲೆಯ ಹಾವಿನ ಮರಿಯ ವಿಡಿಯೋ ವೈರಲ್
Two Headed Snake : ಲಂಡನ್ನಲ್ಲಿ ಅಪರೂಪದ ಎರಡು ತಲೆಯ ಹಾವು ಜನಿಸಿದೆ. ಇದನ್ನು ವೆಸ್ಟರನ್ ಹಾಗ್ನೋಸ್ ಎಂಬ ಜಾತಿಗೆ ಸೇರಿದ ಹಾವು ಎಂದು ಗುರುತಿಸಲಾಗಿದೆ. ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮುದ್ದಾದ ಈ ಹಾವನ್ನು ಸಾಕಬೇಕೂ ಎನ್ನಿಸುತ್ತದೆ ಜೊತೆಗೆ ಭಯವೂ ಆಗುತ್ತದೆ ಎಂದಿದ್ದಾರೆ. ನೀವೇನಂತೀರಿ?
Snake: ಭೂಮಂಡಲದ ಅಪಾಯಕಾರಿ ಜೀವಿಗಳಲ್ಲಿ ಹಾವು ಕೂಡ ಒಂದು. ಕೌಶಲಯುತ ಬೇಟೆ ಮತ್ತು ನಿಗೂಢತೆಯಿಂದಾಗಿ ಜನರಲ್ಲಿ ತನ್ನ ಬಗ್ಗೆ ವಿಶೇಷ ಆಕರ್ಷಣೆ ಉಳಿಸಿಕೊಂಡಿದೆ. ಭಯಂಕರ ವಿಷಕಾರಿಯಾದ ಈ ಪ್ರಾಣಿಯ ಬಗ್ಗೆ ಗೊತ್ತಿದ್ದೂ ಅನೇಕರು ಇದನ್ನು ಸಾಕಿಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಎರಡು ತಲೆಯ ಹಾವಿನಮರಿಯನ್ನು (Two Headed Western Hognose) ನೋಡಬಹುದಾಗಿದೆ. ಲಂಡನ್ನಿನ (London) ಎಕ್ಸಿಟರ್ ಎಕ್ಸಾಟಿಕ್ಸ್ ಎಂಬ ಅಂಗಡಿಯಲ್ಲಿ ಕಳೆದ ತಿಂಗಳು ಇದು ಜನಿಸಿದೆ. ವೆಸ್ಟರ್ನ್ ಹಾಗ್ನೋಸ್ ಎಂಬ ವಿಶಿಷ್ಟ ಜಾತಿಗೆ ಸೇರಿದ ಈ ಮರಿಯನ್ನು ತನ್ನ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಈ ಅಂಗಡಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ : Viral Video: ಸೆಕೆಂಡ್ ಚಾನ್ಸ್; ಅಂದು 8 ತಿಂಗಳ ಮಗುವಿನೊಂದಿಗೆ ತವರಿಗೆ ಮರಳಿದ್ದ ಡಾ ಸಬೀಹಾ ಇನಾಮ್ದಾರ್, ಇಂದು?
‘ವೆಸ್ಟರ್ನ್ ಹಾಗ್ನೋಸ್ ಹಾವು ಇದೀಗ ನಮ್ಮ ಕುಟುಂಬದ ಸದಸ್ಯ. ಯಾವುದೇ ಬಾಹ್ಯ ಸಹಾಯವಿಲ್ಲದೆಯೇ ತನ್ನಷ್ಟಕ್ಕೆ ತಾನೇ ಮೊಟ್ಟೆಯೊಡೆದು ಹೊರಗೆ ಬಂದಿದೆ. ಬಾಲದ ತುದಿಯಲ್ಲಿ ಸುರುಳಿಯಂತೆ ಕಂಡರೂ ಆರೋಗ್ಯಕರವಾಗಿದೆ. ಬಲಭಾಗದಲ್ಲಿರುವ ತಲೆಯು ವಾಸನೆಗಳನ್ನು ಗ್ರಹಿಸುವಲ್ಲಿ ಚುರುಕಾಗಿದೆ. ಎಡಭಾಗದಲ್ಲಿರುವ ತಲೆಯು ಆಹಾರದಲ್ಲಿ ಹೆಚ್ಚು ಆಸಕ್ತಿ ಹೊಂದಿದೆ. ಆದರೆ ಇದರ ಗಂಟಲು ಚಿಕ್ಕದಾಗಿದ್ದು ತಿನ್ನುವಾಗ ಕಷ್ಟಪಡುತ್ತಿದೆ. ಆದರೆ ಬೆಳೆದಂತೆ ಸುಧಾರಿಸುತ್ತದೆ ಎಂದುಕೊಂಡಿದ್ದೇವೆ.’ ಎಂಬ ಒಕ್ಕಣೆ ಈ ಪೋಸ್ಟ್ಗಿದೆ.
ಎರಡು ತಲೆಯ ಹಾವಿನ ಮರಿಯ ವಿಡಿಯೋ
View this post on Instagram
ಆ. 9ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ಬಹಳ ಮುದ್ದಾಗಿದೆ ಆದರೆ ಅಷ್ಟೇ ಭಯವೂ ಬರುವಂತಿದೆ ಎಂದಿದ್ಧಾರೆ ಒಬ್ಬರು. ಹ್ಯಾರಿಪಾಟರ್ ಅಪ್ಪಟ ಅಭಿಮಾನಿಯಾಗಿರುವ ನನ್ನ ಮಗಳು ಇದಕ್ಕೆ ಕ್ವಿರೆಲ್ (ಎರಡು ಮುಖ) ಎಂದು ಹೆಸರಿಡಬೇಕು ಎಂದಿದ್ದಾಳೆ ಎಂದಿದ್ದಾರೆ ಮತ್ತೊಬ್ಬರು. ನನಗಿದನ್ನು ಸಾಕಬೇಕು ಎನ್ನಿಸುತ್ತಿದೆ ಎಂದು ಮಗದೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral Brain Teaser: ಈ ಸಮೀಕರಣ ಸರಿಗೊಳಿಸಲು ಒಂದು ಬೆಂಕಿಕಡ್ಡಿ ಎತ್ತಿಡಬೇಕು, ಪ್ರಯತ್ನಿಸುವಿರಾ?
ಇತ್ತೀಚೆಗಷ್ಟೇ ಹೂಕೋಸು, ಬ್ರೊಕೋಲಿಯಲ್ಲಿ ಅಡಗಿದ್ದ ಹಾವಿನ ಮರಿಗಳ ವಿಡಿಯೋ ವೈರಲ್ ಆಗಿದ್ದವು. ಈ ಹಾವುಗಳನ್ನು ನೋಡಿದಾಗ ಎರಡೂ ಕುಟುಂಬಗಳು ಆಘಾತಕ್ಕೆ ಒಳಗಾಗಿದ್ದವು. ಇದೀಗ ಎರಡು ತಲೆಯ ಈ ಹಾವಿನಮರಿಯ ವಿಡಿಯೋ ನೋಡಿದಾಗ ಆ ಹಾವಿನಮರಿಗಳೆರಡೂ ನಿಮ್ಮ ನೆನಪಿಗೆ ಬಂದಿರಬಹುದು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ