Viral Brain Teaser: ಈ ಸಮೀಕರಣ ಸರಿಗೊಳಿಸಲು ಒಂದು ಬೆಂಕಿಕಡ್ಡಿ ಎತ್ತಿಡಬೇಕು, ಪ್ರಯತ್ನಿಸುವಿರಾ?

|

Updated on: Aug 24, 2023 | 11:58 AM

Brain Activity : ಚಿಕ್ಕಂದಿನಲ್ಲಿ ರಗಳೆ ಮಾಡಿದಾಗೆಲ್ಲ ನಿಮ್ಮ ಪೋಷಕರು ಅಥವಾ ಶಿಕ್ಷಕರು ಬೆಂಕಿಕಡ್ಡಿಗಳಿಂದ ಇಂಥ ಟೀಸರ್​​ಗಳನ್ನು ಮಾಡಿಸುತ್ತಿದ್ದುದು ನೆನಪಿದೆಯೇ? ಈಗಲೂ ಇಂಥದೇ ಚಟುವಟಿಕೆ ನಿಮ್ಮನ್ನಿಲ್ಲಿ ಕಾಯುತ್ತಿದೆ. ನೆಟ್ಟಿಗರು ವಿವಿಧ ಬಗೆಯಲ್ಲಿ ಈ ಸಮೀಕರಣವನ್ನು ಪೂರ್ಣಗೊಳಿಸಿದ್ದಾರೆ. ನಿಮ್ಮ ಆಲೋಚನೆ, ಕೌಶಲ ಯಾವೆಲ್ಲ ದಿಕ್ಕಿನತ್ತ ಹರಿಯುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮದು.

Viral Brain Teaser: ಈ ಸಮೀಕರಣ ಸರಿಗೊಳಿಸಲು ಒಂದು ಬೆಂಕಿಕಡ್ಡಿ ಎತ್ತಿಡಬೇಕು, ಪ್ರಯತ್ನಿಸುವಿರಾ?
ಯಾವ ಬೆಂಕಿಕಡ್ಡಿ ಇಟ್ಟೆರ ಈ ಸಮೀಕರಣ ಸರಿ ಹೋಗಬಹುದು?
Follow us on

Equation: ವಾರದ ಮಧ್ಯದಲ್ಲಿ ಮಂಕು ಅಥವಾ ಸೋಮಾರಿತನ ನಿಮ್ಮನ್ನು ಆವರಿಸಿದ್ದರೆ ದೇಹಕ್ಕೂ ಮೆದುಳಿಗೂ ಕೆಲಸ ಕೊಡಬೇಕು. ಸದ್ಯಕ್ಕಿಲ್ಲಿ ಮೆದುಳಿಗೆ ಕೆಲಸ ಕೊಡುವ ಬಗ್ಗೆ ಆಲೋಚಿಸೋಣ. ಇಲ್ಲೊಂದು ಬ್ರೇನ್​ ಟೀಸರ್​ (Brain Teaser) ಇದೆ. ಕುತೂಹಲಕಾರಿಯಾಗಿರುವ ಈ ಬ್ರೇನ್​ ಟೀಸರ್​ ಸಾಮಾಜಿಕ ಜಾಲತಾಣಿಗರ ಮೆದುಳಿಗಂತೂ ಕೈಹಾಕಿದೆ. ನೀವೂ ಪ್ರಯತ್ನಿಸಬಹುದಲ್ಲವೆ? ಈ ಬ್ರೇನ್​ ಟೀಸರ್ ಸಮೀಕರಣವನ್ನು ಒಳಗೊಂಡಿದೆ. ಅದನ್ನು ಸರಿಪರಿಸಲು ನೀವು ಒಂದು ಬೆಂಕಿ ಕಡ್ಡಿಯನ್ನು ಸರಿಯಾದ ಜಾಗದಲ್ಲಿ ಎತ್ತಿ ಇಡಬೇಕಷ್ಟೇ. ತನ್ಸು ಯೆಗೆನ್​ ಎನ್ನುವವರು X (Twitter)ನಲ್ಲಿ ಹಂಚಿಕೊಂಡಿದ್ದಾರೆ. 6+4=4 ಇದು ಹೇಗೆ ಸಾಧ್ಯ? ಇದೀಗ ನೀವು ನಿಮ್ಮ ಬುದ್ಧಿಗೆ ಕೆಲಸ ಕೊಡಿ!

ಇದನ್ನೂ ಓದಿ : Viral: ಬಾತ್ರೂಮ್​ಗೆ ಹೋಗುವಾಗಲೂ ಉದ್ಯೋಗಿಗಳು ಸೈನ್​ಔಟ್​ ಮಾಡಬೇಕೆನ್ನುತ್ತಿರುವ ಮೇಲಧಿಕಾರಿ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

2 ದಿನಗಳ ಹಿಂದೆ ಹಂಚಿಕೊಂಡ ಈ ಬ್ರೇನ್​ ಟೀಸರ್​ ಅನ್ನು ಈತನಕ 4.7 ಲಕ್ಷ ಜನರು ನೋಡಿದ್ದಾರೆ. 1,000 ಜನರು ಲೈಕ್ ಮಾಡಿದ್ದಾರೆ. ಸುಮಾರು 200 ಜನರು ರೀಪೋಸ್ಟ್ ಮಾಡಿದ್ದಾರೆ. ಸಾವಿರಾರು ಜನರು ಉತ್ತರ ಹೇಳಲು ಪ್ರಯತ್ನಿಸಿದ್ಧಾರೆ. ಒಬ್ಬರು, 5+4 = 9, 8-4 = 4, 0+4 = 4 ಎಂದಿದ್ಧಾರೆ. ಇನ್ನೊಬ್ಬರು. 8 – 4 = 4 ಮಾಡಲು ಅಧಿಕ ಚಿಹ್ನೆಯ ಕಡ್ಡಿಯನ್ನು ಪಲ್ಲಟಿಸಿ ಎಂದಿದ್ದಾರೆ.

ಸಮೀಕರಣವನ್ನು ಬಿಡಿಸಲು ಪ್ರಯತ್ನಿಸಿ

ಅಧಿಕ ಚಿಹ್ನೆಯಿಂದ ಉದ್ದನೆಯ ಕಡ್ಡಿಯನ್ನು ತೆಗೆದು ಮತ್ತು 6 ಅನ್ನು 8 ಆಗಿ ಪರಿವರ್ತಿಸಲು ಉಪಯೋಸಿ. ಆಗ 8-4=4 ಆಗುತ್ತದೆ ಎಂದಿದ್ದಾರೆ ಮಗದೊಬ್ಬರು. 6 ರಲ್ಲಿ ಅಡ್ಡಡ್ಡವಾಗಿ ಇರುವ ಬೆಂಕಿಕಡ್ಡಿಯನ್ನು ನೇರವಾಗಿ ಮಾಡಿ ಆಗ ಅದು ಸೊನ್ನೆಯಂತೆ ಕಾಣುತ್ತದೆ. ಈಗ ನಿಮ್ಮ ಸಮೀಕರಣವನ್ನು ಗಮನಿಸಿ ಎಂದಿದ್ದಾರೆ ಮತ್ತೊಬ್ಬರು. ಅನೇಕರು ಎರಡು ಮೂರು ಉಪಾಯಗಳಿಂದ ಈ ಸಮೀಕರಣವನ್ನು ಸರಿಗೊಳಿಸಲು ಪ್ರಯತ್ನಿಸಿದ್ದಾರೆ.

ಈ ಪ್ರಯತ್ನವನ್ನು ಗಮನಿಸಿ

ನಾನು ಇದನ್ನು ಬಹಳ ಇಷ್ಟಪಟ್ಟೆ. ಆಗಾಗ ನಮ್ಮ ಶಾಲೆಯ ಮಕ್ಕಳೊಂದಿಗೆ ಇಂಥ ಚಟುವಟಿಕೆಗಳನ್ನು ಮಾಡಿಸುತ್ತಿರುತ್ತೇನೆ ಎಂದಿದ್ದಾರೆ ಒಬ್ಬರು. ನನ್ನ ಬಳಿ ಯಾವಾಗಲೂ ಬೆಂಕಿಕಡ್ಡಿಗಳನ್ನು ಇಟ್ಟುಕೊಂಡಿರುತ್ತೇನೆ, ಇದರರ್ಥ ಇನ್ನೇನನ್ನೋ ಕಲ್ಪಿಸಿಕೊಳ್ಳಬೇಡಿ, ಬಿಡುವಿನ ವೇಳೆಯಲ್ಲಿ ಸಹೋದ್ಯೋಗಿಗಳೊಂದಿಗೆ ಇಂಥ ಆಟಗಳನ್ನು ಆಡುತ್ತೇನೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ, ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:55 am, Thu, 24 August 23