Chandrayaana-3: ಜಗತ್ತಿನಲ್ಲಿ ಏನೇ ಮಹತ್ತರ ಬೆಳವಣಿಗೆಗಳು, ಸಂಗತಿಗಳು ಜರುಗಿದರೂ ಮರಳುಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ ತಮ್ಮ ಕಲೆಯ ಮೂಲಕ ಆಗಾಗ ಸ್ಪಂದಿಸುವ ರೂಢಿ ಇಟ್ಟುಕೊಂಡಿದ್ದಾರೆ. ಒಡಿಶಾದ ಕಡಲದಂಡೆಯ ಮೇಲೆ ಅವರ ಬೃಹದ್ಗಾತ್ರದ ಮರಳಶಿಲ್ಪಗಳನ್ನು ವಿವಿಧ ಸಂದರ್ಭಗಳಲ್ಲಿ ನೋಡಿದ್ದೀರಿ. ಇದೀಗ ಚಂದ್ರಯಾನ 3 ಎಂಬ ಥೀಮಿನಡಿ ಒಡಿಶಾದ ಪುರಿ ಬೀಚ್ನಲ್ಲಿ (Puri Beach) ಇವರ ವಿದ್ಯಾರ್ಥಿವೃಂದ ಪ್ರಸ್ತುತ ಕಲಾಕೃತಿಯನ್ನು ಮರಳಿನಲ್ಲಿ ಹೊಮ್ಮಿಸಿದೆ. ಬಣ್ಣಗಳಿಂದ ಅಲಂಕೃತವಾದ ಈ ಕಲಾಕೃತಿಯು ಬಹುವಾಗಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಚಂದ್ರನ ಮೇಲ್ಮೈನಲ್ಲಿರುವ ಕುಳಿಗಳ ನೈಜತೆ, ಆಕಾಶದ ಹಿನ್ನೆಲೆ ಮತ್ತು ಒಟ್ಟಾರೆ ಕಲಾಕೃತಿಯ ಸೊಬಗನ್ನು ನೋಡಿ ನೆಟ್ಟಿಗರು ಅಚ್ಚರಿಗೆ ಒಳಗಾಗುತ್ತಿದ್ದಾರೆ.
ಇದನ್ನೂ ಓದಿ : Viral Video: 2004ರ ಹಿಟ್ ಸಾಂಗ್ ‘ಗ್ಯಾಸೋಲಿನಾ’ ಇದೀಗ ಟ್ರೆಂಡಿಂಗ್ನಲ್ಲಿ
ಸುದರ್ಶನ ತಮ್ಮ ವಿದ್ಯಾರ್ಥಿಗಳ ಈ ಕಲಾಕೃತಿಯ ಚಿತ್ರವನ್ನು X (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಆ. 22ರಂದು ಪೋಸ್ಟ್ ಮಾಡಿದ ಈ ಚಿತ್ರವನ್ನು ಈತನಕ ಸುಮಾರು 16,000 ಜನರು ನೋಡಿದ್ದಾರೆ. ಸುಮಾರು 900 ಜನರು ಲೈಕ್ ಮಾಡಿದ್ದಾರೆ. 120 ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ALL THE BEST 🇮🇳 #Chandrayan3
My students created a sand art on #Chandrayaan 3 with the message “Jai Ho @isro , at Puri beach in Odisha. pic.twitter.com/SDbL8kpbEt— Sudarsan Pattnaik (@sudarsansand) August 22, 2023
ಅನೇಕರು ಜೈಹೋ ಎಂದು ಜೈಕಾರ ಹಾಕಿ ತಮ್ಮ ಸಂತೋಷ ಮತ್ತು ಪ್ರೋತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೃತಜ್ಞತೆ ತಿಳಿಸಿ ಎಂದಿದ್ದಾರೆ ಒಬ್ಬರು. ಈ ಕಲ್ಪನೆಯೇ ಅನನ್ಯವಾಗಿದೆ, ಮತ್ತು ಅತ್ಯಂತ ನೈಜತೆಯಿಂದ ಕೂಡಿದೆ. ನೀವು ಅವರನ್ನು ಪ್ರೋತ್ಸಾಹಿಸುತ್ತಿರುವ ರೀತಿ ಅನುಪಮ ಎಂದಿದ್ದಾರೆ ಮತ್ತೊಬ್ಬರು. ಈ ಕಾಲದಲ್ಲಿ ಇಂಥ ನಿಸ್ಪೃಹ ಗುರು ಸಿಗುವುದು ಅಪರೂಪ, ನೀವು ಎಷ್ಟು ಹೆಮ್ಮೆಯಿಂದ ಇದನ್ನು ಪೋಸ್ಟ್ ಮಾಡಿದ್ದೀರಿ, ಖುಷಿಯಾಯಿತು ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಅಮೆರಿಕ; ಅಪರೂಪದ ಪಟ್ಟೆರಹಿತ ಜಿರಾಫೆಮರಿ; ಸಾರ್ವಜನಿಕರ ವೀಕ್ಷಣೆಗೆ ಅವಕಾಶ
ಕಲೆಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ನಿಮ್ಮಂಥವರು ಈಗಿನ ಕಾಲದಲ್ಲಿ ವಿರಳ ಎಂದು ಶ್ಲಾಘಿಸಿದ್ದಾರೆ ಒಬ್ಬರು. ನಿಮ್ಮ ಕಲಾಕೃತಿಗಳ ಅಭಿಮಾನಿ ಸರ್ ನಾನು ಎಂದು ಕೆಲವರು ಹೇಳಿ ಶುಭಹಾರೈಸಿದ್ದಾರೆ.
ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:16 pm, Wed, 23 August 23