Domino’s Pizza : ರುಚಿಯಾದ ಪಿಝಾಗೆ ಮರುಳಾಗದವರು ಯಾರಿದ್ಧಾರೆ? ಈ ಇಟಾಲಿಯನ್ ತಿನಿಸಿನ ಬಗ್ಗೆ ಎಳೆಯರಿಂದ ಹಿಡಿದು ಮುದುಕರವರೆಗೂ ಒಮ್ಮೆ ಬಾಯಲ್ಲಿ ಚಿಲ್ ಎನ್ನುತ್ತದೆ. ಆದರೆ ಇಲ್ಲಿರುವ ಫೋಟೋ ನೋಡಿದ ಮೇಲೂ ನಿಮಗೆ ಪಿಝಾ ಬಗ್ಗೆ ಅಷ್ಟೇ ವ್ಯಾಮೋಹ ಉಳಿಯುವುದೇ? ಬೆಂಗಳೂರಿನ ಪಿಝಾ ಹಟ್ ಔಟ್ಲೆಟ್ನಲ್ಲಿ ಪಿಝಾ ಹಿಟ್ಟಿನ ಟ್ರೇ ಮೇಲೆ ಶೌಚಾಲಯ ಸ್ವಚ್ಛಗೊಳಿಸುವ ಬ್ರಷ್, ಬಟ್ಟೆ, ಬ್ಯಾಗ್ವುಳ್ಳ ಈ ಫೋಟೋ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದಕ್ಕೆ ಡೋಮಿನೋಸ್ ಇಂಡಿಯಾ ಈಗ ಪ್ರತಿಕ್ರಿಯೆ ನೀಡಿದೆ. ಟ್ವಿಟರ್ ಖಾತೆದಾರ ತುಷಾರ್ ಎಂಬುವವರು ಈ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಆ ಚಿತ್ರದ ಬಗ್ಗೆ ವಿವರಣೆ ನೀಡಿ, ದಯವಿಟ್ಟು ಮನೆಯಲ್ಲಿ ಮಾಡಿದ ಅಡುಗೆಗೆ ಆದ್ಯತೆ ಕೊಡಿ ಎಂದಿದ್ದರು.
Photos from a Domino’s outlet in Bengaluru wherein cleaning mops were hanging above trays of pizza dough. A toilet brush, mops and clothes could be seen hanging on the wall and under them were placed the dough trays.
ಇದನ್ನೂ ಓದಿPlease prefer home made food ? pic.twitter.com/Wl8IYzjULk
— Tushar ॐ♫₹ (@Tushar_KN) August 14, 2022
ಈ ಚಿತ್ರವನ್ನು ನೋಡಿದ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನು ಗಮನಿಸಿದ ಡೋಮಿನೋಸ್ ಇಂಡಿಯಾ, ‘ಅತ್ಯುನ್ನತ ರೀತಿಯಲ್ಲಿ ಶುಚಿತ್ವ ಮತ್ತು ಆಹಾರ ಸುರಕ್ಷತೆ ಬಗ್ಗೆ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಬಂದಿದ್ದೇವೆ. ನಮ್ಮ ಗಮನಕ್ಕೆ ತಂದ ಈ ಘಟನೆಯ ಕುರಿತು ಸಂಪೂರ್ಣ ತನಿಖೆ ಮಾಡಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಮ್ಮ ಗ್ರಾಹಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾವು ಸದಾ ಬದ್ಧರಾಗಿದ್ದೇವೆ ಎಂಬ ಭರವಸೆ ನೀಡುತ್ತೇವೆ’ ಎಂದು ಪ್ರತಿಕ್ರಿಯಿಸಿದೆ.
ಅನೇಕ ನೆಟ್ಟಿಗರು ಈ ಕುರಿತು ತಮಗಾದ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 5.1 ಸಾವಿರ ಲೈಕ್ಸ್, ಸುಮಾರು 2,000 ಕ್ಕಿಂತಲೂ ಹೆಚ್ಚು ರೀಟ್ವೀಟ್ ಈ ಪೋಸ್ಟ್ ಒಳಗೊಂಡಿದೆ.
ಏನಂತೀರಿ ಪಿಝಾ ಪ್ರಿಯರೇ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ