Viral Video: 13 ಗಂಟೆಗಳಲ್ಲಿ 73 ಕಿಮೀ ನಡೆದು ಬೆಂಗಳೂರಿನಲ್ಲಿ ‘ಭಾರತದ ನಕ್ಷೆ’ ಗುರುತಿಸಿದ ಈ ವ್ಯಕ್ತಿ

Independence Day : ಬೆಂಗಳೂರಿನ ಸಣ್ಣಪುಟ್ಟ ರಸ್ತೆಗಳುದ್ದಕ್ಕೂ ನಡೆದೆ. ಆ ರಾತ್ರಿಯಲ್ಲಿ ಬೀದಿನಾಯಿಗಳು ಒಂದೇ ಸಮ ಬೆನ್ನಟ್ಟಿ ಬೊಗಳುತ್ತಿದ್ದವು, ಭಯವೂ ಆಗುತ್ತಿತ್ತು. ನಾನು ನನ್ನ ಈ ಗುರಿಯನ್ನು ತಲುಪುತ್ತೇನೋ ಇಲ್ಲವೋ ಎಂಬ ಆತಂಕವಿತ್ತು. ಆದರೂ ನಾನಿದನ್ನು ಪೂರ್ಣಗೊಳಿಸಿದೆ ಎಂದಿದ್ದಾರೆ ಬೆಂಗಳೂರಿನ 51 ವರ್ಷದ ವಿಕಾಸ ರೂಪರೇಲಿಯಾ.

Important Highlight‌
Viral Video: 13 ಗಂಟೆಗಳಲ್ಲಿ 73 ಕಿಮೀ ನಡೆದು ಬೆಂಗಳೂರಿನಲ್ಲಿ 'ಭಾರತದ ನಕ್ಷೆ' ಗುರುತಿಸಿದ ಈ ವ್ಯಕ್ತಿ
ಬೆಂಗಳೂರಿನ ಬೀದಿಯಲ್ಲಿ ನಡಿಗೆಯಲ್ಲಿ ತೊಡಗಿರುವ ವಿಕಾಸ ರೂಪರೇಲಿಯಾ
Follow us
ಶ್ರೀದೇವಿ ಕಳಸದ
|

Updated on:Aug 23, 2023 | 2:40 PM

Bengaluru: ವಿಕಾಸರೂಪರೇಲಿಯಾ ಎಂಬ 51 ವರ್ಷದ ವ್ಯಕ್ತಿ 13 ಗಂಟೆಗಳಲ್ಲಿ 73 ಕಿ.ಮೀ ನಡೆದು ಬೆಂಗಳೂರಿನೊಳಗೆ ಭಾರತದ ನಕ್ಷೆಯನ್ನು ಅರಳಿಸಿ ಗಮನ ಸೆಳೆದಿದ್ದಾರೆ. ರಾಷ್ಟ್ರಧ್ವಜವನ್ನು ಹಿಡಿದು ರಾತ್ರಿಯೆಲ್ಲಾ ನಡೆದ ವಿಡಿಯೋದೊಂದಿಗೆ ಭಾರತದ ನಕ್ಷೆಯ ಸ್ಕ್ರೀನ್​ಶಾಟ್​ ಅನ್ನು ಅವರು X (Twitter) ನಲ್ಲಿ ಟ್ವೀಟ್ ಮಾಡಿದ್ದಾರೆ. ‘ಒಂದೇ ದಿನದಲ್ಲಿ ನಾನು ಅಂದುಕೊಂಡಿದ್ದನ್ನು ಪೂರೈಸಬಹುದೇ ಎಂಬ ಅನುಮಾನವಿತ್ತು. ಏಕೆಂದರೆ ಇದು ಸಣ್ಣ ಸಾಹಸವಲ್ಲ. ಇದು ಪರಿಪೂರ್ಣಗೊಳ್ಳಲು ನನ್ನ ಸ್ನೇಹಿತು ಮತ್ತು ಕುಟುಂಬದವರು ಸಹಕರಿಸಿದ್ದಾರೆ, ಅವರಿಗೆ ವಿಶೇಷ ಧನ್ಯವಾದಗಳು ಮತ್ತು ನಿಮಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು’ ಎಂದು ರೂಪರೇಲಿಯಾ ಈ ಟ್ವೀಟಿನಲ್ಲಿ ಹೇಳಿದ್ದಾರೆ. ಇದೀಗ ಈ ಟ್ವೀಟ್ ವೈರಲ್ ಆಗುತ್ತಿದ್ದು, ಈ ವಯಸ್ಸಿನಲ್ಲಿ ಇವರ ಉತ್ಸಾಹ ಮತ್ತು ಸಂಕಲ್ಪಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಚಂದ್ರಯಾನ 3; ಮರಳಶಿಲ್ಪದಲ್ಲಿ ‘ಜೈ ಹೋ ಇಸ್ರೋ’ ಎಂದ ಸುದರ್ಶನ ಪಟ್ನಾಯಕ ವಿದ್ಯಾರ್ಥಿಗಳು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬೆಂಗಳೂರಿನುದ್ದಗಲಕ್ಕೂ ನಡೆಯುತ್ತ ಸಾಗಿರುವ ಇವರು ಕ್ರಮಿಸಿದ ಪಥವನ್ನು ನೋಡಿದಾಗ ಅದು ಭಾರತದ ನಕ್ಷೆಯಂತೆಯೇ ಕಂಡಿದೆ. ಇದಕ್ಕೆ ಅವರು ಸಾಕಷ್ಟು ಪೂರ್ವತಯಾರಿ ನಡೆಸಿ ಯೋಜನೆ ಹಾಕಿಕೊಂಡಿರಬೇಕು. ರೂಪರೇಲಿಯಾ ಸ್ಟ್ರಾವಾ ಅಪ್ಲಿಕೇಶನ್​ ಸಹಾಯದಿಂದ (Strava GPS Cycling and Running App) ತಮ್ಮ ಈ ಸಂಕಲ್ಪವನ್ನು ಪೂರ್ಣಗೊಳಿಸಿದ್ದಾರೆ. ಈ ಅಪ್ಲಿಕೇಷನ್​, ನಿಗದಿತ ಸಮಯದಲ್ಲಿ ಗುರಿಯನ್ನು ತಲುಪಲು ಮಾರ್ಗದರ್ಶನ ಮಾಡುತ್ತದೆ. ಸಮಯಕ್ಕೆ ತಕ್ಕಹಾಗೆ ನಡಿಗೆಯನ್ನು ವೇಗಗೊಳಿಸಿಕೊಳ್ಳುವುದು, ಓಡುವುದು, ಸೈಕಲ್ ಸವಾರಿ ಮಾಡುವುದು ಇತ್ಯಾದಿ ಸಲಹೆಯನ್ನು ನೀಡುತ್ತದೆ.

ರಾಷ್ಟ್ರಧ್ವಜ ಹಿಡಿದು ನಡಿಗೆಯಲ್ಲಿ ತೊಡಗಿದ ವಿಕಾಸ ರೂಪರೇಲಿಯಾ ಅವರ ವಿಡಿಯೋ

ಇವರ ಈ ವಿಡಿಯೋ ಅನ್ನು ಈತನಕ ಸುಮಾರು 8,000 ಜನರು ನೋಡಿದ್ದಾರೆ. 183 ಜನರು ಲೈಕ್ ಮಾಡಿದ್ದಾರೆ. ಅನೇಕರು ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಇದು ಅದ್ಭುತವಾದ ಪ್ರಯಾಣ. ಅನೇಕರಿಗೆ ನಿಮ್ಮ ಈ ನಡೆ ಸ್ಫೂರ್ತಿದಾಯಕ. ಇಂತಹ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರಿಗೆ ನಿಜಕ್ಕೂ ನೀವು ಮಾದರಿ. ನೀವು ನಿಮ್ಮ ಈ ಪ್ರಯಾಣ ಮಾರ್ಗವನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರೇ? ಎಂದು ಒಬ್ಬರು ಕೇಳಿದ್ದಾರೆ. ನಿಮ್ಮ ವಯಸ್ಸು ಮತ್ತು ಜೀವನೋತ್ಸಾಹ ನಿಜಕ್ಕೂ ಶ್ಲಾಘನೀಯ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಲಂಡನ್​; ವಿದ್ಯುದ್ದೀಪವೇ ಇಲ್ಲದ ಈ ದ್ವೀಪದಲ್ಲಿ ಈ ವ್ಯಕ್ತಿ ಒಂಟಿಯಾಗಿ ವಾಸಿಸುತ್ತಿರುವುದೇಕೆ?

ತುಂಬಾ ಉತ್ತಮ ಸರ್, ನಡಿಗೆ ನಿಜಕ್ಕೂ ಒಳ್ಳೆಯದು. ಈ ನೆಪದಲ್ಲಿ ನೀವು ಇಷ್ಟೆಲ್ಲಾ ಓಡಾಡಿ ನಿಮ್ಮ ದೈಹಿಕ ಸಾಮರ್ಥ್ಯವನ್ನು ಕೂಡ ಕಂಡುಕೊಂಡಿರಿ ಎಂದಿದ್ದಾರೆ ಇನ್ನೊಬ್ಬರು. ಆಗಾಗ ಇಂಥ ಸಂಕಲ್ಪಗಳನ್ನು ತೊಡುವುದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಅನೇಕರ ಅಭಿಪ್ರಾಯ.

ನೀವೇನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:32 pm, Wed, 23 August 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು