income-tax
ಹೋಳಿ: ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ರಂಗು ರಂಗಿನ ಹೋಳಿ ಹಬ್ಬ, ಎಲ್ಲರ ಮನ-ಮನಸ್ಸಿಗಳನ್ನು ಪುಳಕಿತಗೊಳಿಸುವ ಹಬ್ಬವಾಗಿದೆ. ಒಬ್ಬರು ಇನ್ನೊಬ್ಬರಿಗೆ ಬಣ್ಣದಿಂದ ಹೋಳಿ ಹಾಕುವುದು , ಮೈಗೆಲ್ಲ ಬಣ್ಣದ ಕಲರವು ಆ ದಿನದ ಹೋಳಿ ಹಬ್ಬಕ್ಕೆ ಕಲೆಯನ್ನು ನೀಡುತ್ತದೆ. ಹೋಳಿ ಹಬ್ಬವನ್ನು ಬಣ್ಣಗಳ ಹಬ್ಬ ಅಥವಾ ಪ್ರೀತಿಯ ಹಬ್ಬ ಎಂದು ಕರೆಯಲಾಗುತ್ತದೆ. ಹೋಳಿ ಹಬ್ಬವನ್ನು 2 ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಹೋಳಿ ದಹನವನ್ನು ಮಾಡಲಾಗುತ್ತದೆ. ಇದನ್ನು ಚೋಟಿ ಹೋಳಿ ಅಂತಲೂ ಕರೆಯುತ್ತಾರೆ. 2ನೇ ದಿನ ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸಲಾಗುತ್ತದೆ. ಈ ವರ್ಷ ಅಂದರೆ 2024ರ ಹೋಳಿ ಹಬ್ಬವನ್ನು ಮಾರ್ಚ್ 25ರಂದು ಆಚರಿಸಲಾಗುತ್ತದೆ. ಮಾರ್ಚ್ 24 ರಂದು ಹೋಳಿಕಾ ದಹನ ನಡೆಯಲಿದೆ. ಇದು ದುಷ್ಟರ ಮೇಲೆ ಒಳ್ಳೆಯತನ ಸಾಧಿಸುವ ವಿಜಯವನ್ನು ಸೂಚಿಸುತ್ತದೆ ಮತ್ತು ಭಗವಂತ ಕೃಷ್ಣ ಮತ್ತು ರಾಧೆಯ ಶಾಶ್ವತ ಪ್ರೀತಿಯ ಸುಂದರ ಆಚರಣೆ ಇದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಬ್ಬವು ಯುರೋಪ್ ಮತ್ತು ಉತ್ತರ ಅಮೆರಿಕಾದ ಭಾಗಗಳಿಗೂ ಹಬ್ಬಿದ್ದು ಪ್ರೀತಿ, ಉಲ್ಲಾಸ ಮತ್ತು ಬಣ್ಣಗಳ ವಸಂತ ಆಚರಣೆಯಾಗಿ ಹರಡಿದೆ.
News not found!