ವಾಟ್ಸ್​ಆ್ಯಪ್​ನಲ್ಲಿ ಬಂತು HD ಕ್ವಾಲಿಟಿ ಫೋಟೋ ಆಯ್ಕೆ: ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

|

Updated on: Aug 18, 2023 | 2:03 PM

WhatsApp HD Photos Features: ವಾಟ್ಸ್​ಆ್ಯಪ್​ನ ಈ ಹೊಸ ಫೀಚರ್ ಬಳಕೆದಾರರು HD (2000x3000 ಪಿಕ್ಸೆಲ್‌ಗಳು) ಅಥವಾ ಸ್ಟ್ಯಾಂಡರ್ಡ್ (1365x2048 ಪಿಕ್ಸೆಲ್‌ಗಳು) ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ. ಇದು ಇಂಟರ್ನೆಟ್ ವೇಗದ ಮೇಲೆ ಅವಲಂಬಿಸಿದೆ.

ವಾಟ್ಸ್​ಆ್ಯಪ್​ನಲ್ಲಿ ಬಂತು HD ಕ್ವಾಲಿಟಿ ಫೋಟೋ ಆಯ್ಕೆ: ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
WhatsApp HD Photo Feature
Follow us on

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಬಳಕೆದಾರರಿಗೆ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್​ಗಳನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಅನೇಕ ನೂತನ ಫೀಚರ್​ಗಳ ಬಗ್ಗೆ ಘೋಷಣೆ ಮಾಡಿರುವ ವಾಟ್ಸ್​ಆ್ಯಪ್ ವಾರಕ್ಕೊಂದು ಆಯ್ಕೆಯನ್ನು ಪರಿಚಯಿಸುತ್ತದೆ. ಇದೀಗ ಬಳಕೆದಾರರ ಬಹುದಿನಗಳ ಬೇಡಿಕೆಯ ಹೆಚ್​ಡಿ ಫೋಟೋ ಕಳುಹಿಸುವ ಆಯ್ಕೆ ನೀಡಲು ಮುಂದಾಗಿದೆ. ವಾಟ್ಸ್​ಆ್ಯಪ್ ಶೀಘ್ರದಲ್ಲೇ ಬಳಕೆದಾರರಿಗೆ HD ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ ಎಂದು ಮೆಟಾ-ಮಾಲೀಕತ್ವದ ಮೆಸೇಜಿಂಗ್ ಕಂಪನಿಯು ಘೋಷಿಸಿದೆ.

ವಾಟ್ಸ್​ಆ್ಯಪ್​ನ ಈ ಹೊಸ ಫೀಚರ್, ಬಳಕೆದಾರರು HD (2000×3000 ಪಿಕ್ಸೆಲ್‌ಗಳು) ಅಥವಾ ಸ್ಟ್ಯಾಂಡರ್ಡ್ (1365×2048 ಪಿಕ್ಸೆಲ್‌ಗಳು) ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ. ಇದು ಇಂಟರ್ನೆಟ್ ವೇಗದ ಮೇಲೆ ಅವಲಂಬಿಸಿದೆ. ಇಂಟರ್ನೆಟ್ ನಿಧಾನವಾಗಿದ್ದರೆ HD ನಲ್ಲಿರುವ ಫೋಟೋಗಳನ್ನು ಕಳುಹಿಸಲು ಅಥವಾ ಲೋಡ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ HD ಫೋಟೋಗಳು ಹೆಚ್ಚು ಎಮ್​ಬಿಯಿಂದ ಕೂಡಿರುತ್ತದೆ.

ಇದನ್ನೂ ಓದಿ
Redmi Pad SE: ಬಜೆಟ್ ದರಕ್ಕೆ ಬೆಸ್ಟ್ ಫೀಚರ್ಸ್ ಲೇಟೆಸ್ಟ್ ರೆಡ್ಮಿ ಪ್ಯಾಡ್
ಇನ್​ಸ್ಟಾಗ್ರಾಮ್​ನಲ್ಲಿ ಕೆಲವರಿಗೆ ಮಾತ್ರ ಸ್ಟೇಟಸ್ ಕಾಣುವಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Moto E13 128GB: ಮೋಟೊ ಹೊಸ ಫೋನ್ ಹೊಸ ಆವೃತ್ತಿಯಲ್ಲಿ ಲಭ್ಯ
ಬರೋಬ್ಬರಿ 24GB RAM: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ರಿಯಲ್ ಮಿ ಜಿಟಿ 5 ಸ್ಮಾರ್ಟ್​ಫೋನ್

ಕೆಲವೇ ದಿನ ಬಾಕಿ: ಭಾರತಕ್ಕೆ ಅಪ್ಪಳಿಸುತ್ತಿದೆ ರಿಯಲ್ ಮಿ 11, ರಿಯಲ್ ಮಿ 11X ಸ್ಮಾರ್ಟ್​ಫೋನ್

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೂಡ ಫೇಸ್‌ಬುಕ್‌ನಲ್ಲಿ ಈ ಹೊಸ ಅಪ್ಡೇಟ್ ಬಗ್ಗೆ ಹಂಚಿಕೊಂಡಿದ್ದಾರೆ. “ವಾಟ್ಸ್​ಆ್ಯಪ್​ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು ಇದೀಗ ಅಪ್‌ಗ್ರೇಡ್ ಆಗಿದೆ. ಈಗ ನೀವು HD ನಲ್ಲಿ ಫೋಟೋ ಕಳುಹಿಸಬಹುದು,” ಎಂದು ಬರೆದುಕೊಂಡಿದ್ದಾರೆ. ಈ ಆಯ್ಕೆ ಎಂಡ್-ಟು-ಎಂಡ್ ಎನ್​ಕ್ರಿಪ್ಟ್ ಆಗಿದೆ ಎಂದು ಮೆಟಾ ಹೇಳಿದೆ. ಮುಂದಿನ ಕೆಲವು ವಾರಗಳಲ್ಲಿ ಎಚ್‌ಡಿ ಫೋಟೋ ಆಯ್ಕೆ ಜಾಗತಿಕವಾಗಿ ಎಲ್ಲರಿಗೂ ಸಿಗಲಿದೆಯಂತೆ.

ಹೆಚ್​ಡಿ ಫೋಟೋ ಫೀಚರ್ ಕುರಿತು ವಾಟ್ಸ್​ಆ್ಯಪ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

 

ಒಂದೇ ವಾಟ್ಸ್​ಆ್ಯಪ್​ನಲ್ಲಿ ಅನೇಕ ಅಕೌಂಟ್:

ಶೀಘ್ರದಲ್ಲೇ ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ಒಂದು ವಾಟ್ಸ್​ಆ್ಯಪ್ ಅಪ್ಲಿಕೇಶನ್‌ನಲ್ಲಿ ಅನೇಕ ವಾಟ್ಸ್​ಆ್ಯಪ್​ ಖಾತೆಗಳನ್ನು ಸ್ವಿಚ್ ರೀತಿಯಲ್ಲಿ ತೆರೆಯಲು ಅವಕಾಶ ಮಾಡಿಕೊಡಲಿದೆ. ಈಗಾಗಲೇ ಈ ಆಯ್ಕೆ ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್​ನಲ್ಲಿ ಇದೆ. ಪ್ರಸ್ತುತ, ವಾಟ್ಸ್​ಆ್ಯಪ್​ ಬಳಕೆದಾರರಿಗೆ ಒಂದು ಮೊಬೈಲ್​ನಲ್ಲಿ ಒಂದು ಖಾತೆಯೊಂದಿಗೆ ಲಾಗ್ ಇನ್ ಮಾಡಲು ಮಾತ್ರ ಅನುಮತಿಸುತ್ತದೆ. ಆದ್ದರಿಂದ, ವಿಭಿನ್ನ ಫೋನ್ ಸಂಖ್ಯೆಗಳೊಂದಿಗೆ ಎರಡು ವಾಟ್ಸ್​ಆ್ಯಪ್​ ಖಾತೆಗಳನ್ನು ಬಳಸುವ ಬಳಕೆದಾರರು ಎರಡು ಮೊಬೈಲ್​ಗಳನ್ನು ಬಳಸಬೇಕಾಗುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ ಮತ್ತು ಮುಂಬರುವ ವಾರಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಹೊರತರಲಾಗುವುದು ಎಂದು ವರದಿಗಳು ಹೇಳಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ