ಅನೇಕ ಜನರು ಮೆಟ್ರೋ ಕಾರ್ಡ್, ಎಟಿಎಂ ಕಾರ್ಡ್, ಹಣವನ್ನು ಸ್ಮಾರ್ಟ್ಫೋನಿನ ಕವರ್‌ನಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಈ ವಸ್ತುಗಳನ್ನು ನಿಮ್ಮ ಫೋನ್‌ನ ಬ್ಯಾಕ್ ಕವರ್‌ನಲ್ಲಿ ಇರಿಸಿದರೆ, ದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಮಾಡುವ ಸಣ್ಣ ತಪ್ಪುಗಳು ಜೀವಕ್ಕೆ ಅಪಾಯ ತಂದೊಡುತ್ತದೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಬಳಕೆದಾರರ ದುಬಾರಿ ಮತ್ತು ಅಗ್ಗದ ಫೋನ್‌ಗಳು ಸ್ಫೋಟಗಳ್ಳಲು (Mobile Blast) ಮೊಬೈಲ್ನ ಬ್ಯಾಕ್ ಕವರ್‌ನಲ್ಲಿ ಎಟಿಎಂ ಕಾರ್ಡ್, ಹಣವನ್ನು ಇಡುವುದು ಒಂದು ಕಾರಣ ಎಂಬುದು ತಿಳಿದುಬಂದಿದೆ.
ಸ್ಮಾರ್ಟ್ಫೋನ್ ಹೆಚ್ಚು ಬಿಸಿಯಾಗುವುದಕ್ಕೆ ಅನೇಕ ಕಾರಣಗಳಿವೆ. ಇದರಲ್ಲಿ ಮುಂಚೂಣಿಗೆ ಬಂದಿರುವ ದೊಡ್ಡ ಕಾರಣವೆಂದರೆ ಫೋನ್‌ಗೆ ದಪ್ಪ ಕವರ್ ಅಳವಡಿಸಿರುವುದು. ಇದರ ಜೊತೆಗೆ ಕವರ್ನೊಳಗೆ ಹಲವು ಬಗೆಯ ವಸ್ತುಗಳನ್ನು ಇಡುವುದು. ಫೋನಿಗೆ ದಪ್ಪನೆಯ ಬ್ಯಾಕ್ ಕವರ್ ಹಾಕಿದಾಗ ಮತ್ತು ಆ ಕವರ್‌ನಲ್ಲಿ ವಸ್ತುಗಳನ್ನು ಇಟ್ಟಾಗ ಗಾಳಿಯು ಹಾದುಹೋಗಲು ಯಾವುದೇ ಸ್ಥಳಗಳಿರುವುದಿಲ್ಲ. ಇದರಿಂದಾಗಿ ಫೋನ್ ಹೆಚ್ಚು ಬಿಸಿಯಾಗುತ್ತದೆ ಮತ್ತು ಬ್ಲಾಸ್ಟ್ ಕೂಡ ಆಗುತ್ತದೆ.
Smartphone Charging: ಫೋನ್ ಚಾರ್ಜ್ ಹಾಕುವಾಗ ಎಚ್ಚರಿಕೆ ವಹಿಸಿ..
ನಿಮ್ಮ ಫೋನ್ ಬಿಸಿಯಾಗಲು ಪ್ರಾರಂಭಿಸಿದಾಗ, ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ. ಸ್ವಲ್ಪ ಸಮಯದ ನಂತರ ಫೋನ್ ಅನ್ನು ಆನ್ ಮಾಡಿ ಬಳಸಿ. ನಂತರವೂ ಫೋನ್ ಬಿಸಿಯಾಗುತ್ತಿದ್ದರೆ, ಯಾವ ಅಪ್ಲಿಕೇಶನ್ ಎಷ್ಟು ಬ್ಯಾಟರಿಯನ್ನು ಬಳಸುತ್ತಿದೆ ಎಂಬುದನ್ನು ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಪರಿಶೀಲಿಸಿ ಕ್ಲೀಯರ್ ಮಾಡಿ. ಅನಗತ್ಯ ಅಪ್ಲಿಕೇಶನ್ ಇದ್ದರೆ ತಕ್ಷಣ ಅದನ್ನು ಫೋನ್‌ನಿಂದ ಅನ್ಇನ್ಸ್ಟಾಲ್ ಮಾಡಿ.
ಗಮನಿಸಿ: ಮೇಲೆ ಹೇಳಿದಂತೆ, ನೀವು ಫೋನ್‌ನ ಕವರ್‌ನಲ್ಲಿ ಹಣ, ಎಟಿಎಂ, ಮೆಟ್ರೋ ಕಾರ್ಡ್ ಅಥವಾ ಕೀಗಳನ್ನು ಇರಿಸಿದರೆ, ಅದು ನಿಮಗೆ ಅನೇಕ ತೊಂದರೆಗಳನ್ನು ಉಂಟುಮಾಡಬಹುದು. ಇದರಿಂದ ನಿಮ್ಮ ಫೋನ್ ಬ್ಲಾಸ್ಟ್ ಆಗುತ್ತದೆ, ಸಾವು-ನೋವು ಸಂಭವಿಸಬಹುದು. ಹೀಗಾಗಿ ನಿಮ್ಮ ಫೋನ್ ದೀರ್ಘ ಸಮಯ ಬಾಳಿಕೆ ಬರಲು ಬಿಸಿಯಾಗದಂತೆ ಜೋಪಾನವಾಗಿ ಕಾಪಾಡಿಕೊಳ್ಳಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ